ಗೆಲುವಿನ ಅವಕಾಶ ಇದ್ದರೂ ಕೈಚೆಲ್ಲಿದ ಟೀಂ ಇಂಡಿಯಾ; ಎಡವಿದ್ದೆಲ್ಲಿ ಗೊತ್ತಾ?


ಭಾರತ- ನ್ಯೂಜಿಲೆಂಡ್​​ ನಡುವಿನ ಮೊದಲ ಟೆಸ್ಟ್​ ಪಂದ್ಯ, ರೋಚಕ ಡ್ರಾನಲ್ಲಿ ಅಂತ್ಯ ಕಂಡಿದೆ. ಕುತೂಹಲಕಾರಿ ಘಟ್ಟ ತಲುಪಿದ್ದ ಪಂದ್ಯದ ಅಂತಿಮ ದಿನದಾಟ ಹೇಗಿತ್ತು.? ಇಲ್ಲದೆ ಕಂಪ್ಲೀಟ್​ ರಿಪೋರ್ಟ್.
5ನೇ ದಿನದಾಟದ ಆರಂಭದಲ್ಲಿ ನ್ಯೂಜಿಲೆಂಡ್​ ಮೇಲುಗೈ ಸಾಧಿಸಿದ್ರೂ, ಅಂತಿಮ ಸೆಷನ್​ ವೇಳೆಗೆ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಪರಿಣಾಮ ನಿನ್ನೆಯ ದಿನದಾಟದ ಅಂತಿಮ ಓವರ್​ಗಳು, ಅಭಿಮಾನಿಗಳ ಕುತೂಹಲವನ್ನ ಹೆಚ್ಚಿಸಿದ್ವು. ಭಾರತ – ನ್ಯೂಜಿಲೆಂಡ್​ ನಡುವಿನ ಕಾದಾಟದಲ್ಲಿ ಮಂದ ಬೆಳಕಿನ ಪರಿಣಾಮ, ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.

4ನೇ ದಿನದಾಟದ ಅಂತ್ಯದ ವೇಳೆಗೆ ಕಿವೀಸ್​ನ ಪ್ರಮುಖ ವಿಕೆಟ್​ ಕಬಳಿಸಿದ್ದ ಭಾರತ, ಗೆಲುವಿನ ಉತ್ಸಾಹದಲ್ಲಿತ್ತು. ಅದೇ ವಿಶ್ವಾಸದಲ್ಲಿ 5ನೇ ದಿನದಾಟದಲ್ಲಿ ರಹಾನೆ ಪಡೆ ಕಣಕ್ಕಿಳಿದಿತ್ತು. ಆದ್ರೆ, ಆ ಎಲ್ಲಾ ಲೆಕ್ಕಾಚಾರವನ್ನ ಕಿವೀಸ್​ ಪಾಳೆಯದ ಬ್ಯಾಟರ್ಸ್​​ ತಲೆ ಕೆಳಗಾಗಿಸಿದ್ರು.

ಟೀಮ್​ ಇಂಡಿಯಾ ಎಡವಿದ್ದೆಲ್ಲಿ?
ಟಾಮ್​ ಲಾಥಮ್​, ಸೋಮರ್​ವಿಲ್ಲಿ ಜೋಡಿ 194 ಎಸೆತ ಎದುರಿಸಿ, 76 ರನ್​ಗಳಿಸಿದ್ದಲ್ಲದೇ, ದಿನದಾಟದ ಮೊದಲ ಸೆಷನ್​ನಲ್ಲಿ ವಿಕೆಟ್​ ಬಿಟ್ಟು ಕೊಡಲೇ ಇಲ್ಲ. ಬಳಿಕ 3ನೇ ವಿಕೆಟ್​ಗೆ ಜೊತೆಯಾದ ಲಾಥಮ್​ – ವಿಲಿಯಮ್​ಸನ್,​ 116 ಎಸೆತಗಳವರೆಗೆ ಕ್ರಿಸ್​ನಲ್ಲಿದ್ದು 39 ರನ್​ಗಳಿಸಿದ್ರು. 7ನೇ ವಿಕೆಟ್​​ಗೆ ಬ್ಲಂಡಲ್​, ರಚಿನ್​ ರವಿಂದ್ರ 55 ಬಾಲ್​ಗಳನ್ನ ಸಮರ್ಥವಾಗಿ ಎದುರಿಸಿದ್ರು. ಜೊತೆಗೆ ಟಿಮ್​ ಸೌಥಿ, ಕೈಲ್​ ಜೆಮಿಸನ್​ ವಿಕೆಟ್​ ಅನ್ನ, ಬೇಗನೇ ಕಬಳಿಸುವಲ್ಲಿ ಭಾರತ ವಿಫಲವಾಯ್ತು. ಕೊನೆಗೆ ರಚಿನ್​ ರವಿಂದ್ರ – ಏಜಾಜ್​ ಪಟೇಲ್​ ನಡುವಿನ ಅಂತಿಮ ವಿಕೆಟ್​ ಜೊತೆಯಾಟವನ್ನ ಮುರಿಯಲು ವಿಫಲವಾದ ಭಾರತ, ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಯ್ತು.

ಗೆಲುವಿನ ಅವಕಾಶವಿದ್ರೂ ಟೀಮ್​ ಇಂಡಿಯಾ ಡ್ರಾಗೆ ತೃಪ್ತಿ ಪಟ್ಟುಕೊಳ್ಳಲು, ನ್ಯೂಜಿಲೆಂಡ್​ನ ಪಾರ್ಟ್​​​​​​​​ನರ್​ಶಿಪ್​ಗಳ ಬೇಗನೇ ಬ್ರೇಕ್​ ಮಾಡುವಲ್ಲಿ ವಿಫಲವಾಗಿದ್ದೇ ಕಾರಣ. ಪ್ರತಿ ವಿಕೆಟ್​ ಪತನವಾದಾಗಲೂ ಕಣಕ್ಕಿಳಿಯುತ್ತಿದ್ದ ಕಿವೀಸ್​​ ಬ್ಯಾಟರ್ಸ್​​​, ಕ್ರಿಸ್​ನಲ್ಲಿ ಹೆಚ್ಚು ಟೈಮ್​ ಸ್ಪೆಂಡ್​ ಮಾಡ್ತಿದ್ರು. ಸ್ಕೋರ್​​ಗಳಿಸದಿದ್ರೂ, ಮ್ಯಾಚ್​ ಸೇವಿಂಗ್​ ಇನ್ನಿಂಗ್ಸ್​​ ಕಟ್ಟಬೇಕು ಅನ್ನೋ ಉದ್ದೇಶ ಅವರಲ್ಲಿ ಸ್ಪಷ್ಟವಾಗಿತ್ತು. ಈ ಸಂದರ್ಭವನ್ನ ಅರ್ಥ ಮಾಡಿಕೊಳ್ಳುವಲ್ಲಿ ಟೀಮ್​ ಇಂಡಿಯಾ ಎಡವಿದ್ದೇ, ಡ್ರಾಗೆ ತೃಪ್ತಿ ಪಟ್ಟುಕೊಳ್ಳುವಂತೆ ಮಾಡಿತು.

News First Live Kannada


Leave a Reply

Your email address will not be published. Required fields are marked *