ಗೆಲುವಿನ ಉತ್ಸಾಹದಲ್ಲಿರೋ BJPಗೆ ಹಾನಗಲ್​​​ನಲ್ಲಿ ಬಂಡಾಯದ ಬಿಸಿ -ಕೇಸರಿ ಪಡೆ ಕಂಗಾಲು..!

ಹಾವೇರಿ: ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಮೊದಲ ಅಗ್ನಿಪರೀಕ್ಷೆ ಎದುರಾಗಿದೆ. ಹಾನಗಲ್​​, ಸಿಂದಗಿ ಕ್ಷೇತ್ರಗಳಲ್ಲಿ ಗೆಲುವು ಪಡೆಯುವುದು ಬಿಜೆಪಿ ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ನಡುವೆ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಬಿಜೆಪಿ, ಮೂರು ಟೀಮ್​​​​ಗಳ ಮೂಲಕ ಪ್ರಚಾರಕ್ಕೂ ಸಿದ್ಧತೆ ನಡೆಸಿದೆ. ಆದರೆ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಹಾನಗಲ್​​ನಲ್ಲಿ ಬಂಡಾಯ ಹೊಸ ಟೆಶ್ಶನ್​ ಶುರುವಾಗಿದ್ದು, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚನ್ನಪ್ಪ ಬಳ್ಳಾರಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕೇಸರಿ ಭದ್ರಕೋಟೆ ಹಾನಗಲ್​​​ ಕ್ಷೇತ್ರದಲ್ಲಿ ಬಿಜೆಪಿ ಶಿವರಾಜ್ ಸಜ್ಜನರ್ ಅವರಿಗೆ ಟಿಕೆಟ್​​ ನೀಡಿದೆ. ಇದೇ ಕ್ಷೇತ್ರದಿಂದ ಚನ್ನಪ್ಪ ಬಳ್ಳಾರಿ ಹಾಗೂ ರೇವತಿ ಅವರು ಪ್ರಬಲ ಟಿಕೆಟ್​ ಆಕಾಂಕ್ಷಿಗಳಾಗಿದ್ದರು. ಬಿಜೆಪಿ ಟಿಕೆಟ್ ಮೇಲೆ ಭರವಸೆ ಇಟ್ಟಿದ್ದ ಚನ್ನಪ್ಪ ಬಳ್ಳಾರಿ ಅವರು ಟಿಕೆಟ್ ಕೈತಪ್ಪಿದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಏಕಾಏಕಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಂಡಾಯ ಅಭ್ಯರ್ಥಿ ಸ್ಫರ್ಧೆಯಿಂದ ಬಿಜೆಪಿ ಕಂಗಾಲಾಗಿದ್ದು, ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ಬಿಜೆಪಿ ಹಿನ್ನಡೆ ಆತಂಕ ಎದುರಾಗಿದೆ.

ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ಬಿಜೆಪಿಗೆ ಟೆನ್ಶನ್ ಯಾಕೆ!

  1. ಬಂಡಾಯ ಅಭ್ಯರ್ಥಿ ಚನ್ನಪ್ಪ ಬಳ್ಳಾರಿ ಅವರು ಪಂಚಮಸಾಲಿ ಸಮುದಾಯದ ನಾಯಕರಾಗಿದ್ದಾರೆ
  2. ಕ್ಷೇತ್ರದಲ್ಲಿ ಸುಮಾರು 60 ಸಾವಿರದಷ್ಟು ಮತವನ್ನು ಪಂಚಮಸಾಲಿ ಸಮುದಾಯ ಹೊಂದಿದೆ
  3. ವಚನಾನಂದ ಸ್ವಾಮೀಜಿ ಹಾಗೂ ಜಯ ಮೃತ್ಯುಂಜಯ ಸ್ವಾಮೀಜಿ ಸಹ ಬಂಡಾಯ ಅಭ್ಯರ್ಥಿ ಬೆನ್ನಿಗೆ ನಿಂತಿದ್ದಾರೆ
  4. ಶಿವರಾಜ್ ಸಜ್ಜನರ್ ಅವರು ಹಾವೇರಿ ಮೂಲದವರಾಗಿದ್ದು, ಸ್ಥಳೀಯ ನಾಯಕನಲ್ಲ ಎಂಬುವುದು ವಿರೋಧಿಗ ಪ್ರಬಲ ಅಸ್ತ್ರ ಸಾಧ್ಯತೆ
  5. ರೇವತಿ ಶಿವಕುಮಾರ್ ಗೆ ಟಿಕೆಟ್ ‌ನೀಡದೇ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿದ್ದ ಬಿಜೆಪಿ
  6. ಬ್ಯಾಡಗಿ ಕ್ಷೇತ್ರದಲ್ಲಿ ವಿರೂಪಾಕ್ಷಪ್ಪ ಬಳ್ಳಾರಿಯನ್ನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚನ್ನಪ್ಪ ಬಳ್ಳಾರಿ
  7. ಪಕ್ಷಕ್ಕೆ ಹಲವಾರು ವರ್ಷದಿಂದ ದುಡಿದಿದ್ದ ಚನ್ನಪ್ಪ ಬಳ್ಳಾರಿ
  8. ಬಂಡಾಯ ಅಭ್ಯರ್ಥಿ ಬನ್ನಿಗೆ ಕೆಲ ಬಿಜೆಪಿ ನಾಯಕರು ನಿಲ್ಲುವ ಆತಂಕ

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನಪ್ಪ ಬಳ್ಳಾರಿ, ಅವರು ಯಾಕೋ ನನ್ನ ಹೆಸರನನ್ನ ತೆಗೆದುಕೊಳ್ಳಲಿಲ್ಲ. ಕಳೆದ ಮೂರು ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಹಾನಗಲ್​ನಲ್ಲಿ ನಮ್ಮದೇ ಆದ ದೊಡ್ಡ ಸಮಾಜ ಇದ್ದು, ಆ ದೃಷ್ಟಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಯಕರೊಂದಿಗೆ ಚರ್ಚೆ ಮಾಡಿದ ಬಳಿಕವೂ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಟ್ಟಿಲ್ಲ. ಪಂಚಾಮಸಾಲಿ ಶ್ರೀಗಳು ಕೂಡ ನನಗೆ ಬೆಂಬಲ ಸೂಚಿಸಿದ್ದಾರೆ. ಅವರು ಇರೋ ಸ್ಥಳದಿಂದಲೇ ನನ್ನ ಪರ ಪ್ರಚಾರ ಮಾಡ್ತಾರೆ. ನನ್ನ ಸ್ಫರ್ಧೆಗೂ ಮೀಸಲಾತಿ ಹೋರಾಟಕ್ಕೂ ಸಂಬಂಧವಿಲ್ಲ. ಬಿಜೆಪಿ ನಾಯಕರು ಮನವೊಲಿಸಲು ನಾಮಪತ್ರ ವಾಪಸ್​ ಪಡೆಯುವ ಪ್ರಶ್ನೆ ಉದ್ಭವ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

News First Live Kannada

Leave a comment

Your email address will not be published. Required fields are marked *