ಪ್ರಖ್ಯಾತ ಬಹುಭಾಷಾ ನಟಿ ಶ್ರೀದೇವಿ ಮಗಳು ಜಾನ್ಹವಿ ಕಪೂರ್​, ತಮ್ಮ ಗೆಳೆಯನ ಜೊತೆ ಬೀಚ್​ನಲ್ಲಿ ಕ್ವಾಲಿಟಿ ಟೈಮ್​ ಕಳೆದಿದ್ದಾರೆ. ಈ ಬಗ್ಗೆ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಜಾನ್ಹವಿ, ‘ಪ್ರತಿ ಮಸುಕಾದ ಸೂರ್ಯಾಸ್ತದ ಅರ್ಧದಷ್ಟು ಸೌಂದರ್ಯವು ಕ್ಷಣಿಕವಾಗಿದೆ’ ಅಂತ ಕ್ಯಾಪ್ಶನ್​ ಬರೆದು ಫೋಟೋಗಳನ್ನ ಪೋಸ್ಟ್​ ಮಾಡಿದ್ದಾರೆ. ಜಾನ್ಹವಿ ಹೊಸ ಫೋಟೋಗಳನ್ನ ನೋಡಿದ ಫ್ಯಾನ್ಸ್​​ ಬರೆಗಾಗಿದ್ದಾರೆ.

ಹೌದು.. ಬೀಚ್​ನಲ್ಲಿ ಮಿಂದೇಳುವ ಫೋಟೋವೊಂದನ್ನ ಹಾಕಿರುವ ಜಾನ್ಹವಿ, ಪಡ್ಡೆ ಹುಡುಗರ ಬೆವರಿಳಿಸಿದ್ದಾರೆ. ಇನ್ನೊಂದೆಡೆ ಗೆಳೆಯನ ಕೈ ಹಿಡಿದು ಸೂರ್ಯಾಸ್ತದೆಡೆಗೆ ಓಡುತ್ತಿರೋದು ಕೂಡ ಒಂದಷ್ಟು ಜಾನ್ಹವಿ ಮೇಲ್​ ಫ್ಯಾನ್ಸ್​​ ಕೂಡ ಪ್ರಶ್ನೆ ಮಾಡುವಂತಾಗಿದೆ. ಜಾನ್ಹವಿ ಸ್ನೇಹಿತ ಓರ್ಹಾನ್​ ಆವತ್ರಾಮನ್​ ಅದಾಗಿದ್ದು, ಈ ಹಿಂದೆಯೂ ಒಂದೆರಡು ಬಾರಿ ಜಾನ್ಹವಿ ಇನ್​​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಕಂಡು ಬಂದಿದ್ದಾರೆ. ಆದ್ರೀಗ ಎಲ್ಲರಿಗೂ ಮೂಡಿರುವ ಪ್ರಶ್ನೆ ಒಂದೇ… ಓರ್ಹಾನ್​ ಆವತ್ರಾಮನ್​ ಹಾಗೂ ಜಾನ್ಹವಿ ಕಪೂರ್​​ ಪ್ರೀತಿಯಲ್ಲಿದ್ದಾರಾ ಅನ್ನೋದು.?

ಇತ್ತ ಕರಣ್​ ಜೋಹರ್​ ನಿರ್ಮಾಣದ ದೋಸ್ತಾನಾ-2 ಸಿನಿಮಾದ ಶೂಟಿಂಗ್​ ಶುರು ಮಾಡಲಿರುವ ಜಾನ್ಹವಿ, ಗುಡ್​ ಲಕ್​ ಜೆರಿಽ ಹಾಗೂ ತಖ್ತ್​​ ಸಿನಿಮಾಗಳ ಶೂಟಿಂಗ್​ ಡೇಟ್ಸ್​ಗಾಗಿ ಎದುರು ನೋಡ್ತಿದ್ದಾರೆ. ಇನ್ನು ಲಾಕ್​ಡೌನ್​ ಸಮಯವನ್ನ ತಮ್ಮ ಫ್ಯಾಮಿಲಿ ಜೊತೆ ಕಳೆಯುತ್ತಿರುವ ಜಾನ್ಹವಿ, ಇತ್ತೀಚೆಗಷ್ಟೆ ಮುಂಬೈ ರಸ್ತೆಗಳಲ್ಲಿ ತಂಗಿ ಖುಷಿ ಜೊತೆ ಸೈಕ್ಲಿಂಗ್​ ಮಾಡುತ್ತಾ ಎಂಜಾಯ್​ ಮಾಡ್ತಿದಿದ್ದು ಸುದ್ದಿಯಾಗಿತ್ತು.

The post ಗೆಳೆಯನ ಕೈ ಹಿಡಿದು ಬೀಚ್​ನಲ್ಲಿ ಮಿಂದೆದ್ದ ಜಾನ್ಹವಿ ಕಪೂರ್ appeared first on News First Kannada.

Source: newsfirstlive.com

Source link