ಬೆಂಗಳೂರು: ಗೆಸ್ಟ್ ಹೌಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ದೂರು ನೀಡಲು ಸದಾಶಿವನಗರ ಪೊಲೀಸ್ ಠಾಣೆಗೆ ಬಂದಿದ್ದ ಶಾಸಕ ಜಮೀರ್ ಅಹ್ಮದ್ ಆಪ್ತ ಸಹಾಯಕ ಫಾರೂಕ್ ದೂರು ನೀಡದೇ ವಾಪಸ್ಸಾಗಿದ್ದಾರೆ.

ಭೋಜೇಗೌಡ ಮಧ್ಯಪ್ರವೇಶದಿಂದ ಗೆಸ್ಟ್ ಹೌಸ್ ಗಲಾಟೆ ತಣ್ಣಗಾಗಿದೆ. ಭೋಜೇಗೌಡರು ಜಮೀರ್​ಗೆ ಕರೆಮಾಡಿ ಸಂಧಾನ ನಡೆಸ ದೂರು ನೀಡದಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಜಮೀರ್ ಆಪ್ತ ಸಹಾಯಕನಿಗೆ ಕರೆಮಾಡಿ ದೂರು ನೀಡದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಫಾರೂಕ್ ದೂರು ನೀಡದೆ ಅಲ್ಲಿಂದ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.

The post ಗೆಸ್ಟ್​ಹೌಸ್​ ಗಲಾಟೆ: ಹೆಚ್​ಡಿಕೆ ವಿರುದ್ಧ ದೂರು ನೀಡಲು ಬಂದು ವಾಪಸ್ಸಾದ ಜಮೀರ್ PA appeared first on News First Kannada.

Source: newsfirstlive.com

Source link