ಕೊರೊನಾ ಸೋಂಕು ಹಲವಾರು ರಾಷ್ಟ್ರಗಳ ನೆಮ್ಮದಿಯನ್ನು ಕಸಿದು ಬಿಟ್ಟಿದೆ. ಇಂದಿಗೂ ಇದು ಲ್ಯಾಬ್​​ನಲ್ಲಿ ತಯಾರಾಗಿದ್ದಾ? ಅಥವಾ ಪ್ರಾಣಿ ಮೂಲಕ ಬಂದಿದ್ದಾ? ಇದು ಜೈವಿಕ ಅಸ್ತ್ರವಾ? ಅಥವಾ ಕೇವಲ ನಿಸರ್ಗದ ಜೀವವಾ? ಹೀಗೆ ಹಲವು ಹತ್ತು ಪ್ರಶ್ನೆಗಳು ಮೂಡುತ್ತಲೇ ಇವೆ. ಆದ್ರೆ ಇದು ಚೀನಾದ ವುಹಾನ್​ ಲ್ಯಾಬ್​​​ನಲ್ಲಿ ತಯಾರಾಗಿದ್ದು ಅನ್ನೋ ವಾದ ಈಗ ಬಲವಾಗುತ್ತಿದೆ. ವಿಶೇಷ ಅಂದ್ರೆ ಇದರ ಹಿಂದೆ ಅಮೆರಿಕಾದ ಖ್ಯಾತ ವೈದ್ಯರಿದ್ದಾರಾ? ಅನ್ನೋ ಪ್ರಶ್ನೆ ಈಗ ಕುತೂಹಲ ಮೂಡಿಸಿದೆ.

ಕೊರೊನಾ ಸೃಷ್ಟಿಕರ್ತರಾದ್ರಾ ಡಾ. ಫೌಸಿ?
ಡಾ. ಆಂಥೋಣಿ ಫೌಸಿ ಈ ಹೆಸರು ಕೇಳಿದ್ರೆ ಸಾಕು ವಿಶ್ವದ ಸಾಕಷ್ಟು ವೈದ್ಯರು ನಿಂತು ಗೌರವ ಸಲ್ಲಿಸ್ತಾರೆ. ಇವರು ಆಡೋ ಒಂದು ಮಾತಿಗೆ ವಿಶ್ವದ ಘಟಾನುಘಟಿ ನಾಯಕರು ತಲೆ ದೂಗುತ್ತಾರೆ. ಅಷ್ಟೇ ಏಕೆ ಅಮೆರಿಕಾದ ಅಧ್ಯಕ್ಷರೇ ಇವರ ಮಾತಿಗೆ ಇಲ್ಲ ಅನ್ನೋಲ್ಲ. ಯಾಕಂದ್ರೆ 80 ವರ್ಷದ ಡಾ.ಆ್ಯಂಥೋಣಿ ಫೌಸಿ ಅಮೆರಿಕಾದ ಅಧ್ಯಕ್ಷರ ಕಚೇರಿಯ ವೈದ್ಯಾಧಿಕಾರಿಯೂ ಹೌದು. ಜೊತೆಗೆ ವಿಶ್ವದ ಅತ್ಯಂತ ಉನ್ನತ ಮಟ್ಟದ ಸಾಂಕ್ರಾಮಿಕ ರೋಗ ತಜ್ಞರಲ್ಲಿ ಮುಂಚೂಣಿಯಲ್ಲಿಯೂ ಇರುವಂಥವರು. ಆದ್ರೆ ಈ ಡಾಕ್ಟರ್ ಫೌಸಿ ಹೀರೋನಾ? ವಿಲನ್ನಾ? ಈ ಡಾ. ಫೌಸಿ ವಿಶ್ವಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾದವರಾ? ಅಥವಾ ಲೆಕ್ಕವಿಲ್ಲದಷ್ಟು ಪ್ರಾಣ ಉಳಿಸಿದವರಾ? ಕೊರೊನಾ ವೈರಸ್​ ಜೊತೆಗೆ ಇವರ ಹೆಸರು ತಳು ಹಾಕಿಕೊಂಡಿದ್ಯಾಕೆ? ಹೀಗೆ ಬಗೆಬಗೆಯ ಪ್ರಶ್ನೆಗಳು ಮೂಡುತ್ತಲೇ ಇವೆ.

ಇವತ್ತು ವಿಶ್ವಾದ್ಯಂತ ಉರಿದ ಚಿತೆಗಳ ಬೆಂಕಿಯ ಪಾಪ ಚೀನಾ ಕೈಗೆ ಮೆತ್ತಿಕೊಂಡಿದೆ. ಕೋಟ್ಯಾಂತರ ಜನರ ನಿಟ್ಟುಸಿರು ಆ ದೇಶದ ಕತ್ತಿಗೆ ಅಪಕೀರ್ತಿಯಾಗಿ ಸುತ್ತಿಕೊಂಡಿದೆ. ಕೊರೊನಾ ಸೋಂಕಿನ ರಕ್ತ ಚೀನಾ ಕೈಗೆ ಎಷ್ಟು ಮೆತ್ತಿಕೊಂಡಿದೆಯೋ ಅಷ್ಟೇ ರಕ್ತ ಈಗ ಅಮೆರಿಕಾ ಕೈಗೆ ಬಂದು ಸುತ್ತಿಕೊಂಡಿದೆ. ಯಾಕಂದ್ರೆ ಇಂದು ವಿಶ್ವದ ವಿಜ್ಞಾನಿಗಳ.. ಅಷ್ಟೇ ಏಕೆ ಸ್ವತಃ ಅಮೆರಿಕಾದ ರಿಪಬ್ಲಕ್ ಪಾರ್ಟಿಯ ಸದಸ್ಯರ ಅಭಿಮತ. ಕೊರೊನಾ ವೈರಸ್​ ಚೀನಾದ ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಹುಟ್ಟಿಕೊಂಡಿದ್ದು ಮತ್ತು ಇದರ ನೇರ ಸೃಷ್ಟಿಕರ್ತ ಡಾ.ಫೌಸಿ ಅನ್ನೋ ಆರೋಪ ಕೇಳಿಬಂದಿದೆ.

ಈ ಆರೋಪ ಕೇಳಿ ಬಂದಿದ್ದು ಏಕೆ?
ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್​ ಹಾಗೂ ಸೈನ್ಸ್​ ರಿಪೋರ್ಟರ್ ನಿಕೋಲಸ್ ವೇಡ್ ಒಂದು ಆರ್ಟಿಕಲ್ ಪಬ್ಲಿಷ್ ಮಾಡಿದ್ರು. ಸುಮಾರು 10 ಸಾವಿರ ಶಬ್ದಗಳ ಈ ವಿಸ್ತೃತ ಆರ್ಟಿಕಲ್​ನಲ್ಲಿ ಕೊರೊನಾ ವೈರಸ್​ ವುಹಾನ್​ನ ಲ್ಯಾಬ್​ನಲ್ಲಿ ಸಿದ್ಧವಾಗಿರುವಂಥದ್ದು. ಇದು ಜನೆಟಿಕಲಿ ಇಂಜಿನೀಯರ್ಡ್ ಪ್ಯಾಥೋಜಿನ್ ಆಗಿದೆ. ಇದು ಆಕಸ್ಮಿಕವಾಗಿ ಅಥವಾ ಬೇಕೆಂತಲೇ ಲೀಕ್​ ಆಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ರು.

ಅಷ್ಟೇ ಅಲ್ಲ ಅಮೆರಿಕಾದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸಸ್ ಅನ್ನೋ ಸಂಸ್ಥೆ ಗೇನ್ ಆಫ್ ಫಂಕ್ಷನ್ ಸಂಶೋಧನೆಗೆ ಹಣವನ್ನ ನೀಡಿತ್ತು. ಅದು ಕೂಡ ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ನೀಡಿರೋದನ್ನ ನಿಕೋಲಸ್ ವೇಡ್ ವರದಿ ಮಾಡಿದ್ರು. ವಿಶೇಷವೆಂದ್ರೆ ಈ NIAID ನ ಮುಖ್ಯಸ್ಥರು ಯಾರಪ್ಪ? ಅಂತಾ ನೋಡೋದಾದ್ರೆ..ನಿಮಗೆ ಅಚ್ಚರಿಯಾಗಬಹುದು.. ಅದು ಬೇರೆಯಾರೂ ಅಲ್ಲ.. ಅವರೇ ಡಾ. ಆ್ಯಂಥೋಣಿ ಫೌಸಿ..!

ಏನಿದು ಗೈನ್ ಆಫ್ ಫಂಕ್ಷನ್ ಸಂಶೋಧನೆ?
ಗೇನ್ ಆಫ್ ಫಂಕ್ಷನ್​ಗೂ ವುಹಾನ್​ ವೈರಸ್​ಗೂ ಏನು ಸಂಬಂಧ?

ಗೇನ್ ಆಫ್ ಫಂಕ್ಷನ್.. ಈ ಶಬ್ದವೇ ವಿಚಿತ್ರವಾಗಿದೆಯಲ್ಲ? ಇದರ ಮಹತ್ವವಾದ್ರೂ ಏನು? ಅಷ್ಟಕ್ಕೂ ಇದನ್ನು ತಿಳಿದು ನಮಗೆ ಆಗೋದಾದ್ರೂ ಏನು? ಅನ್ನೋ ಪ್ರಶ್ನೆ ಎಂಥರವರಿಗೂ ಸಹಜವಾಗಿ ಮೂಡುತ್ತೆ. ಆದ್ರೆ ಎಲ್ಲಿಯ ಚೀನಾ.. ಎಲ್ಲಿಯ ಕೊರೊನಾ? ನಮಗೇನು ಅಂತಾ ಇಂದು ಯಾರಾದ್ರೂ ಅನ್ನೋಕೆ ಆಗುತ್ತಾ? ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ಇಂದು ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡುತ್ತಿಲ್ವಾ? ಹೀಗಾಗಿಯೇ ಹೊಸದಾಗಿ ಏನನ್ನೋ ನಾವು ಕೇಳಿದಾಗ.. ಇದರಿಂದ ನಮಗೇನು ಉಪಯೋಗ ಅನ್ನೋ ಮಾತು ಬಂದ್ರೂ.. ತಿಳಿದಾಗ ಸಾಕಷ್ಟು ಮುಂಜಾಗ್ರತೆ ವಹಿಸಲು ಸಾಧ್ಯವಾಗುತ್ತೆ. ಅಂದ ಹಾಗೆ ಗೇನ್ ಆಫ್ ಫಂಕ್ಷನ್ ಅಂದ್ರೇನು? ಅಂತಾ ನೊಡೋದಾದ್ರೆ.. ಹಾನಿಕಾರಕ ಅಥವಾ ಮಾರಣಾಂತಿಕ ವೈರಸ್​ಗಳನ್ನು ಮತ್ತಷ್ಟು ಮಾರಣಾಂತಿಕವಾಗಿ ಬದಲಾಗುವಂತೆ ಜೆನೆಟಿಕ್ ಇಂಜಿನೀಯರಿಂಗ್ ಮಾಡಿ ಅದರ ಸಂಶೋಧನೆ ಮಾಡುವಂಥ ವಿಧಾನ. ಈ ರೀತಿಯ ಅಧ್ಯಯನಕ್ಕೆ ಸಾಕಷ್ಟೂ ವಿರೋಧವಿದ್ರೂ ಅಮೆರಿಕಾದ ಸುಮಾರು 10 ಲ್ಯಾಬ್​ಗಳಲ್ಲಿ ಹಾಗೂ ಚೀನಾದ ಹಲವು ಲ್ಯಾಬ್​ಗಳಲ್ಲಿ ಇದು ನಡೆಯುತ್ತಿದೆ ಅಂತಾ ಹೇಳಲಾಗ್ತಿದೆ.

ಇದೇ ನಿಟ್ಟಿನಲ್ಲಿ ಕೊರೊನಾ ವೈರಸ್​​​ ಅನ್ನು ಕೂಡ ಜೆನೆಟಿಕ್​ ಇಂಜಿನೀಯರಿಂಗ್ ಮಾಡಿ ಅದನ್ನು ಮತ್ತಷ್ಟು ಅಪಾಯಕಾರಿಯಾಗಿ ಬದಲಾಯಿಸಿ ಗೇನ್ ಆಫ್ ಫಂಕ್ಷನ್ ಸ್ಟಡಿಗೆ ಬಳಸಲಾಗಿತ್ತಾ? ಹೀಗೆ ಬಳಸಿದಾಗ ಅದು ಎಸ್ಕೇಪ್ ಆಯ್ತಾ? ಅನ್ನೋ ಪ್ರಶ್ನೆ ಈಗ ಅನುಮಾನವಾಗಿ ಬದಲಾಗಿದೆ. ಮತ್ತು ಅನುಮಾನಕ್ಕೆ ಸಾಕ್ಷಿ ಸಿಗುವ ಸಾಧ್ಯತೆ ಇದ್ದು ಅದೇ ಸತ್ಯವಾಗಿ ಬದಲಾಗುವ ಸಾಧ್ಯತೆ ಈಗ ಕಂಡು ಬರ್ತಿದೆ.

ಡಾ. ಆ್ಯಂಥೋಣಿ ಫೌಸಿ ವಿಲನ್ ಆದ್ರಾ?
ಹೀಗಾಗಿಯೇ ಡಾ. ಆ್ಯಂಥೋಣಿ ಫೌಸಿ ವಿಲನ್ ಆದ್ರಾ? ಅನ್ನೋ ಪ್ರಶ್ನೆ ಇಂದು ಮೂಡುತ್ತಿರೋವಂಥದ್ದು. ಚೀನಾದ ಹೀನ ಕೃತ್ಯಕ್ಕೆ ಅಮೆರಿಕಾ ಕೂಡ ಕೈಜೋಡಿಸಿತ್ತಾ? ಇದೇ ಕಾರಣದಿಂದಾಗಿ ಚೀನಾ ಇಷ್ಟು ಸುಲಭವಾಗಿ ಜವಾಬ್ದಾರಿಯಿಂದ ಮತ್ತು ಶಿಕ್ಷೆಯಿಂದ ನುಣುಚಿಕೊಳ್ಳುತ್ತಿದೆಯಾ? ಅಂತ ಕೂಡ ಹಲವು ತಜ್ಞರಿಗೆ ಅರಿವಾಗಲು ಆರಂಭಿಸಿದೆ. ಇಷ್ಟೆಲ್ಲ ನಡೀತಿದ್ರೂ ಡಾ. ಆ್ಯಂಥೋಣಿ ಫೌಸಿ ಹೇಳೋದೇನು ಅಂತಾ ನೋಡಿದ್ರೆ;

ಇತ್ತೀಚೆಗೆ ಅಮೆರಿಕಾದ ಸಂಸತ್ ಸದಸ್ಯರು, ಅದ್ರಲ್ಲೂ ರಿಪಬ್ಲಿಕನ್ ಪಕ್ಷದ ಸಂಸದ ರಾಂಡ್ ಪೌಲ್ ಅವರಿಂದ ಡಾ. ಫೌಸಿ ವಿಚಾರಣೆ ಎದುರಿಸಬೇಕಾಯ್ತು. ಈ ವೇಳೆ ಸೆನೆಟರ್ ಪೌಲ್, ಈಗ ಇಡೀ ವಿಶ್ವ ಕೇವಲ ಶೇ.1 ರಷ್ಟು ಸಾವಿನ ಪ್ರಮಾಣ ಹೊಂದಿರುವ ಕೊರೊನಾ ವೈರಸ್​​ ಹಾವಳಿ ತಡೆಯಲು ಸಾಧ್ಯವಾಗುತ್ತಿಲ್ಲ. ಆದ್ರೆ ಒಂದು ವೇಳೆ ಇದೇ ವೈರಸ್​​ ಏನಾದ್ರೂ ಶೇ.50 ರಷ್ಟು ಮಾರಣಾಂತಿಕವಾದ್ರೆ ಏನು ಗತಿ? ಎಂದು ಪ್ರಶ್ನಿಸಿದ್ರು. ಈ ವೇಳೆ ಅವರು, ನೋಡಿ ರಾಂಡ್ ಪೌಲ್ ಅವರೇ ಗೌರವ ಯುತವಾಗಿ ಹೇಳುತ್ತಿದ್ದೀನಿ. ನೀವು ಸಂಪೂರ್ಣವಾಗಿ ತಪ್ಪು ಹೇಳುತ್ತಿದ್ದೀರಿ. ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್ ಹಿಂದೆ ಮತ್ತು ಇಂದೂ ವೂಹಾನ್​ ಇನ್​ಸ್ಟಿಟ್ಯೂಟಿನ ಗೇನ್​ ಆಫ್ ಫಂಕ್ಷನ್ ಸ್ಟಡಿಗೆ ಹಣ ನೀಡಿ ಅಂತಾ ಹೇಳಿದ್ರು. ಆದ್ರೆ, ಅವರು ಈ ಇನ್​ಸ್ಟಿಟ್ಯೂಟ್​ಗೆ ಹಣ ನೀಡಿದ್ದನ್ನು,  ಫಂಡ್​ ಒದಗಿಸಿರೋದನ್ನ ನಿರಾಕರಿಸಲಿಲ್ಲ. ಆದ್ರೂ ಅವರ ಮಾತನ್ನು ಗಮನಿಸಿದವರಿಗೆ ಡಾ. ಫೌಸಿ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದ್ದಾರೆ, ಅಥವಾ ಸುಳ್ಳು ಹೇಳುತ್ತಿದ್ದಾರೆ ಅನ್ನೋ ಭಾವನೆ ಬರೋ ರೀತಿ ಇದ್ದಿದ್ದು ಸುಳ್ಳಲ್ಲ.

ಒಟ್ಟಿನಲ್ಲಿ.. ಇಂದು ಇಡೀ ವಿಶ್ವಕ್ಕೆ ಇಂಥ ಸ್ಥಿತಿ ತಂದಿಟ್ಟವರು ಯಾರೇ ಇರಲಿ, ಅಂಥವರಿಗೆ ಖಂಡಿತ ಶಿಕ್ಷೆಯಾಗಲೇಬೇಕು.. ಒಂದೊಂದು ಕಣ್ಣೀರಿಗೂ ನೂರು ಶೂಲಕ್ಕೆ ಏರಿಸಿದ ಶಿಕ್ಷೆ ನೀಡಬೇಕು. ಒಂದೊಂದು ಸಾವಿಗೂ ನೂರು ನೂರು ಗಲ್ಲು ಶಿಕ್ಷೆ ನೀಡಬೇಕು. ಒಂದೊಂದು ನಿಟ್ಟುಸಿರೂ ಬಿರುಗಾಳಿಯಾಗಿ ಇಂಥ ಖೂಳರನ್ನ ನಿರ್ನಾಮ ಮಾಡಬೇಕು. ಆಗ ಮಾತ್ರ ಅದೆಷ್ಟೋ ಕುಟುಂಬಗಳಿಗೆ ನೆಮ್ಮದಿ ಸಿಕ್ಕಂತಾಗೋದು. ಜೊತೆಗೆ ನಿಸರ್ಗದ ನಿಯಮದೊಂದಿಗೆ ಆಟವಾಡುವಂಥಾ ಗೇನ್ ಆಫ್ ಫಂಕ್ಷನ್ ಸ್ಟಡಿಯನ್ನು ನಿಲ್ಲಿಸಲೇಬೇಕಿರೋದು ಸದ್ಯದ ಅವಶ್ಯಕತೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಗೇನ್ ಆಫ್ ಫಂಕ್ಷನ್​ಗೂ ವುಹಾನ್​ ವೈರಸ್​ಗೂ ಇದ್ಯಾ ಸಂಬಂಧ? ವಿಲನ್ ಆದ್ರಾ ಡಾ. ಫೌಸಿ? appeared first on News First Kannada.

Source: newsfirstlive.com

Source link