ಗೇಮ್​ ಚೇಂಜರ್ ಹಾರ್ದಿಕ್​ಗೆ ಮುಂಬೈ ಗೇಟ್​ಪಾಸ್ -ಹೊಸ ತಂಡ ಕಟ್ಟುವ ಲೆಕ್ಕಚಾರದಲ್ಲಿ MI


ಮುಂಬೈ ಇಂಡಿಯನ್ಸ್​..! ಐಪಿಎಲ್​ನ ಚಾಂಪಿಯನ್ ಟೀಮ್.. ಮೋಸ್ಟ್​ ಸಕ್ಸಸ್​ಫುಲ್ ಟೀಮ್​ಗಳಲ್ಲಿ ಅಗ್ರಸ್ಥಾನಿಯಾಗಿರುವ ಅಂಬಾನಿ ಬ್ರಿಗೇಡಿಯರ್ಸ್, ಮೋಸ್ಟ್​ ಡೇಂಜರಸ್​ ಟೀಮ್ ಅನ್ನೋದರಲ್ಲಿ ಎರಡು ಮಾತಿಲ್ಲ.. ಕೆಲ ವರ್ಷಗಳಿಂದ ತನ್ನದೇ ಆದ ಅಧಿಪತ್ಯ ಸ್ಥಾಪಿಸಿರುವ ಮುಂಬೈ, ಹೊಸ ತಂಡವನ್ನ ಕಟ್ಟುವ ಪ್ಲಾನ್​ನಲ್ಲಿದೆ. ಇದಕ್ಕಾಗಿ ರಿಟೈನ್ಸನ್​​ನಲ್ಲಿ ರೋಹಿತ್ ಸೇರಿ ನಾಲ್ವರು ಆಟಗಾರರನ್ನ ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್​, ಬಿಗ್ ಮ್ಯಾಚ್​ ವಿನ್ನರ್​ ಪ್ಲೇಯರ್​ನ ಕೈಟ್ಟಿದೆ. ಆ ಮ್ಯಾಚ್​ ವಿನ್ನರ್ ಪ್ಲೇಯರ್ ಯಾರು ಅಲ್ಲ..! ಬರೋಡದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ.

  • ರಿಟೈನ್ ನಂ.1 -ರೋಹಿತ್ ಶರ್ಮಾ
  • ರಿಟೈನ್ ನಂ.2- ಜಸ್​ಪ್ರೀತ್ ಬೂಮ್ರಾ
  • ರಿಟೈನ್ ನಂ.3 -ಕ್ವಿಂಟನ್ ಡಿಕಾಕ್
  • ರಿಟೈನ್ ನಂ.4 -ಇಶಾನ್ ಕಿಶನ್

ಗೇಮ್​ ಚೇಂಜರ್ ಹಾರ್ದಿಕ್​ಗೆ ಮುಂಬೈ ಗೇಟ್​ಪಾಸ್​..!
ಹೌದು, 2014ರಲ್ಲಿ ಕೇವಲ 10 ಲಕ್ಷಕ್ಕೆ ಹಾರ್ದಿಕ್ ಪಾಂಡ್ಯನ ಖರೀದಿಸಿದ್ದ ಮುಂಬೈ, ಮ್ಯಾಚ್​ ವಿನ್ನರ್ ಎಂಬ ನಂತರ ಹರಾಜಿನ ವೇಳೆ ರಿಟೈನ್ ಮಾಡಿಕೊಂಡಿತ್ತು. 2015ರ ಐಪಿಎಲ್​ನಿಂದ ತಂಡದ ಖಾಯಂ ಆಟಗಾರನಾಗಿರುವ ಸ್ಟಾರ್​ ಆಲ್​ರೌಂಡರ್​, ಸ್ಪೋಟಕ ಬ್ಯಾಟಿಂಗ್ ಆ್ಯಂಡ್ ಬೌಲಿಂಗ್​​, ಫೀಲ್ಡಿಂಗ್ ಮೂಲಕ ಮಲ್ಟಿ ಡೈಮನ್ಸಿಯಲ್ ಪ್ಲೇಯರ್​​​​​​​​​​​​​​ ಆಗಿಯೇ ಗುರುತಿಸಿಕೊಂಡಿದ್ದರು. ಮ್ಯಾಚ್​ ಫಿನಿಷರ್ ಆಗಿ ಮುಂಬೈನ ಸಕ್ಸಸ್​ ಕೀ​ ಆಗಿದ್ದ ಗೇಮ್​ ಚೇಂಜರ್​​ ಹಾರ್ದಿಕ್​​ರನ್ನ ಕೈ ಬಿಟ್ಟಿದೆ.

ಹಾರ್ದಿಕ್ ಪಾಂಡ್ಯಗೆ ಮುಳುವಾಯ್ತು ಫಿಟ್ನೆಸ್​ ಸಮಸ್ಯೆ..!
ಯೆಸ್, ಸದ್ಯ ಹಾರ್ದಿಕ್​​ನ ಕೈಬಿಡಲು ಕಾರಣ ಫಿಟ್ನೆಸ್ ಸಮಸ್ಯೆಯೇ ಆಗಿದೆ. ಕಳೆದೆರೆಡು ವರ್ಷಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಪಾಂಡ್ಯ, ಓರ್ವ ಪ್ಯೂರ್ ಬ್ಯಾಟ್ಸ್​ಮನ್​ ಆಗಿ ಮಾತ್ರವೇ ನೆರವಾಗ್ತಿದ್ದಾರೆ.. ಕಳೆದ 2 ಆವೃತ್ತಿಗಳಿಂದ ಮುಂಬೈ ಪರ ಒಂದೇ ಒಂದು ಓವರ್ ​ಬೌಲಿಂಗ್ ಮಾಡಿಲ್ಲ. ಬ್ಯಾಟಿಂಗ್​ನಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ.. ಅಷ್ಟೇ ಅಲ್ಲ..! ಸದ್ಯ ಸಂಪೂರ್ಣ ಚೇತರಿಸಿಕೊಳ್ಳದ ಹಾರ್ದಿಕ್, ಫ್ಯೂಚರ್​ ಕೂಡ ಡೇಂಜರ್ ಜೋನ್​ನಲ್ಲಿದೆ. ಹೀಗಾಗಿ ರಿಸ್ಕ್​ ತೆಗೆದುಕೊಳ್ಳಲು ಆಸಕ್ತಿ ವಹಿಸದ ಮುಂಬೈ ಇಂಡಿಯನ್ಸ್, ಹಾರ್ದಿಕ್ ಬದಲಿಗೆ ಸ್ಥಿರ ಪ್ರದರ್ಶನ ತೋರಬಲ್ಲ ಆಟಗಾರರನ ರಿಟೈನ್ ಮಾಡಿದೆ.

ಹಾರ್ದಿಕ್ ಬದಲಿಗೆ ಸೂರ್ಯ ಕುಮಾರ್​ಗೆ ಮಣೆ
ಸದ್ಯ ರಿಟೈನ್​​ ಮಾಡಿರುವ ಮುಂಬೈ, ನಾಯಕ ರೋಹಿತ್ ಶರ್ಮಾ, ಜಸ್​ಪ್ರೀತ್​ ಬೂಮ್ರಾ, ಕಿರನ್ ಪೊಲ್ಲಾರ್ಡ್​ಗೆ ಜೊತೆ ಹಾರ್ದಿಕ್ ಅಥವಾ ಇಶಾನ್ ಕಿಶಾನ್​ಗೆ ಮಣೆ ಹಾಕುವ ನಿರೀಕ್ಷೆ ಇತ್ತು. ಆದ್ರೆ, ಸ್ಥಿರ ಪ್ರದರ್ಶನ ನೀಡಬಲ್ಲ ಸೂರ್ಯಕುಮಾರ್ ಯಾದವ್​​ರಬ್ಬ ಉಳಿಸಿಕೊಂಡು ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​​​ಗೆ ಗೇಟ್​ಪಾಸ್ ನೀಡಿದೆ.

News First Live Kannada


Leave a Reply

Your email address will not be published. Required fields are marked *