ಕೊರೊನ ಇರುವ ಕಾರಣದಿಂದಾಗಿ ಶೋ ಎಂಡ್ ಮಾಡುತ್ತಿದ್ದೇವೆ ಎಂದು ಹೇಳಿರುವುದಕ್ಕೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಬೇಸರವಾಗಿದೆ. ಕೊರೊನಾ ಇರುವ ಕಾರಣದಿಂದ ನಮ್ಮ ಪ್ಯಾಮಿಲಿ ಹೇಗೆ ಇದ್ದಾರೆ ಈ ಸುಂದರ ಜರ್ನಿ ಹೀಗೆ ಎಂಡ್ ಆಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.

ಎಲ್ಲಾ ಸ್ಪರ್ಧಿಗಳು ಒಂದೊಂದು ಕನಸನ್ನು ಕಟ್ಟಿಕೊಂಡು ಬಂದಿದ್ದರು. ಅದೆಲ್ಲವೂ ಅರ್ಧಕ್ಕೆ ನಿಂತಿದೆ. ಹೀಗಾಗಿ ಬಿಗ್‍ಬಾಸ್ ಸ್ಪರ್ಧಿಗಳು ಅವರ ಜರ್ನಿಯನ್ನು ಅರ್ಧಕ್ಕೆ ಮುಗಿಸಿದ್ದಾರೆ. ಬಿಗ್‍ಬಾಸ್ ನಮ್ಮ ಜರ್ನಿ ಮುಂದುವರಿಯುತ್ತಲೇ ಇರುತ್ತದೆ. ಅಪೂರ್ಣವಾದ ನಮ್ಮ ಜರ್ನಿ ಪರಿಪೂರ್ಣವಾಗಿಲ್ಲ ಆದರೆ ಬೇರೆ ಎಲ್ಲಾ ಸೀಜನ್‍ಗಳ ಜರ್ನಿ ಮುಗಿದಿರಬಹುದು ಆದರೆ ನಮ್ಮ ಬಿಗ್‍ಬಾಸ್ ಪ್ರಯಾಣ ಮುಂದುವರೆಯುತ್ತಲೇ ಇರುತ್ತದೆ ಎಂದು ಸ್ಪರ್ಧಿಗಳು ಹೇಳಿದ್ದಾರೆ.

ಇಲ್ಲಿಂದ ಜೀವನ ಕಟ್ಟಿಕೊಳ್ಳೊಣ ಎಂದು ಬಂದಿದ್ದೆ. ಬೇರೆಯವರು ಹೇಗೊ ನನಗೆ ಗೊತ್ತಿಲ್ಲ. ಭಗವಂತ ನಮಗೆ ಇಟ್ಟನಲ್ಲ… ಇಂತಹ ಜಾಗಕ್ಕೂ ಬಂದರೂ ಬಿಡಲಿಲ್ಲ ಅಲ್ಲವಾ. ಇದಕ್ಕಿಂತಲೂ ಚೆನ್ನಾಗಿರುವ ವೇದಿಕೆ ನನಗೆ ಮುಂದೆ ಸಿಗುತ್ತದೆ ಎಂದು ನಂಬಿಕೆ ಮೇಲೆ ಹೋಗೊಣ ಎಂದು ಹೇಳುತ್ತಾ ಮಂಜು ಪ್ರಿಯಾಂಕ ಬಳಿ ಹೇಳಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಏನೆಲ್ಲಾ ಕನಸು ಕಟ್ಟಿಕೊಂಡಿದ್ದೆ. ನನಗೆ ಮುಂದೆ ಏನು ಅಂತಾನೆ ಗೊತ್ತೇ ಆಗುತ್ತಿಲ್ಲ. ನಮ್ಮ ಮನೆಯವರನ್ನು ಎಲ್ಲಾ ಇಲ್ಲಿಗೆ ಕರೆಸಿದ್ದೇನು. ಅವರೆಲ್ಲ ಹೇಗೆ ಇದ್ದಾರೆ ಎನ್ನುವುದೆ ನನಗೆ ಅರ್ಥವಾಗುತ್ತಿಲ್ಲ ಎಂದು ದಿವ್ಯಾ ಬಳಿ ಹೇಳಿಕೊಂಡಿದ್ದಾರೆ. ಆಗ ದಿವ್ಯಾ ನಾನು ಮನೆಗೆ ಇವಾಗಲೇಹೋಗಬೇಕು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಆಗ ಮಂಜು ನಾವೆಲ್ಲ ಹೋಗೊದೆ ಈವಾಗ ಎಂದು ಹೇಳುತ್ತಾ ಸಮಾಧಾನ ಮಾಡಿದ್ದಾರೆ.

ರಘು ಮನೆಯವರಿಗೆಲ್ಲಾ ನೆನಪಿಗಾಗಿ ಅವರ ಬಳಿ ಇರುವ ಕೆಲವು ಬಟ್ಟೆಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ಕೆಲವರು ನಾವು ಆಚೆ ಸಿಗುವ ಎಂದು ಮಾತನಾಡಿಕೊಂಡಿದ್ದಾರೆ. ಬಿಗ್‍ಬಾಸ್ ಮನೆಯ ಸುದಂರದ ಜರ್ನಿಯಿಂದ ನನಗೆ ಆಚೆ ಹೋಗಲು ಇಷ್ಟ ಇಲ್ಲ.. ಬಿಗ್‍ಬಾಸ್ ಮನೆಯಲ್ಲಿರುವ ರೇಷನ್ ಅಷ್ಟರಲ್ಲಿಯೇ ನಾವು ಇರುತ್ತೇವೆ ಎಂದು ಶುಭಾ ಹೇಳಿದ್ದಾರೆ. ನಿಧಿ ಯಾರು ಯಾವ ದಿನ ಸಿಗಬೇಕು ಎನ್ನುವುದನ್ನು ಹೇಳಿದ್ದಾರೆ. ಸ್ಪರ್ಧಿಗಳಿಗೆ ಮನೆಯನ್ನು ಬಿಟ್ಟುಹೋಗಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆಯಾಗಿ ಬಿಗ್‍ಬಾಸ್ ಮನೆಯಿಂದ ಹೋಗುತ್ತಿರುವುದು ಸ್ಪರ್ಧಿಗಳಿಗೆ ಸಖತ್ ಬೇಸರವನ್ನುಂಟು ಮಾಡಿದೆ. ಈ ಸುದ್ದಿ ಕನಸು ಎಂಬುವಂತೆ ಸ್ಪರ್ಧಿಗಳಿಗಿದೆ. ಗೇಮ್ ಓವರ್ ಎನ್ನುತ್ತಾ ತಮ್ಮ ಆಟವನ್ನು ಮುಗಿಸಿದ್ದಾರೆ.

 

The post ಗೇಮ್ ಓವರ್ ಎನ್ನುತ್ತಾ ಆಟ ಮುಗಿಸಿದ ಬಿಗ್‍ಬಾಸ್ appeared first on Public TV.

Source: publictv.in

Source link