ಬೆಂಗಳೂರು: ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗೆ ಮೇಲ್ವಿಚಾರಣಾ ಸಮಿತಿಯನ್ನ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹಿಂದೂ ಧಾರ್ಮಿಕ & ಧರ್ಮಾದಯಿ ದತ್ತಿಗಳ ಇಲಾಖೆಯ ಪ್ರಸ್ತಾವನೆಯಂತೆ, 2018ರ ಆಗಸ್ಟ್ನಲ್ಲಿ ಸರ್ಕಾರ ದೇಗುಲವನ್ನು ಶ್ರೀರಾಮಚಂದ್ರಪುರ ಮಠಕ್ಕೆ ಹಸ್ತಾಂತರಿಸಿತ್ತು. ಈ ಆದೇಶವನ್ನ ಪ್ರಶ್ನಿಸಿ ಶ್ರೀ ಬಾಲಚಂದ್ರ ವಿಘ್ನೇಶ್ವರ ದೀಕ್ಷಿತ್ ಹಾಗೂ ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಆಗ ಹೈಕೋರ್ಟ್ ಸರ್ಕಾರದ ಆದೇಶ ರದ್ದುಪಡಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ರಾಮಚಂದ್ರಪುರ ಮಠ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈಗ ಸುಪ್ರೀಂಕೋರ್ಟ್ ನೀಡಿರೊ ಮಧ್ಯಂತರ ಆದೇಶದದನ್ವಯ, ಪ್ರಕರಣ ಇತ್ಯರ್ಥವಾಗೊವರೆಗೂ ಮೇಲ್ವಿಚಾರಣಾ‌ ಸಮಿತಿಗೆ ಮಹಾಬಲೇಶ್ವರ ದೇವಸ್ಥಾನವನ್ನ ಹಸ್ತಾಂತರ ಮಾಡಲಾಗಿದೆ, ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಿ ಸುಪ್ರೀಂ ಆದೇಶ ನೀಡಿತ್ತು.

ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆಯಾಗಿದೆ. ಬಿ.ಎನ್. ಶ್ರೀಕೃಷ್ಣ ಸಮಿತಿ ಅಧ್ಯಕ್ಷರಾದ್ರೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪ‌ವಿಭಾಗಾಧಿಕಾರಿ ಸೇರಿ 8 ಮಂದಿ ಇದರ ಸದಸ್ಯರಾಗಿದ್ದಾರೆ.

The post ಗೋಕರ್ಣ ದೇಗುಲದ ಆಡಳಿತ ನಿರ್ವಹಣೆಗೆ ಮೇಲ್ವಿಚಾರಣಾ ಸಮಿತಿ ರಚಿಸಿ ಸರ್ಕಾರ ಆದೇಶ appeared first on News First Kannada.

Source: newsfirstlive.com

Source link