ಬೆಂಗಳೂರು: ಗೋವುಗಳ ತಳಿ ಸಂರಕ್ಷಣೆಯಲ್ಲಿ ಶ್ರೀ ಶ್ರೀ ರವಿಶಂಕರ್ ಗೋಶಾಲೆ ಅತ್ಯಂತ ವಿಶೇಷವಾದ ಬ್ರಿಡಿಂಗ್ ರೀತಿಯನ್ನು ಅಳವಡಿಸಿಕೊಂಡಿರುವುದನ್ನು ಕಂಡ ಸಚಿವ ಪ್ರಭು ಚವ್ಹಾಣ್ ಅಚ್ಚರಿ ವ್ಯಕ್ತಪಡಿಸಿದರು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ರವಿಶಂಕರ್ ಗೋಶಾಲೆಗೆ ಇಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಭೇಟಿ ಗೋವುಗಳ ಸಂರಕ್ಷಣೆಯ ಬಗ್ಗೆ ಚರ್ಚೆ ನಡೆಸಿದರು. ನಮ್ಮಲ್ಲಿ ಸಹ ಗೋತ್ರಗಳ ಆಧಾರದ ಮೇಲೆ ಬ್ರಿಡಿಂಗ್ ಮಾಡಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತವಾದ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಸಚಿವರು ತಿಳಿಸಿದರು.

ಗೋತ್ರಗಳ ಆಧಾರದ ಮೇಲೆ ಗೋವುಗಳನ್ನು ಬ್ರಿಡಿಂಗ್ ಮಾಡಿಸಿವುದರಿಂದ ಅತ್ಯಂತ ಉತ್ಕೃಷ್ಟವಾದ ತಳಿ ಲಭ್ಯವಾಗುತ್ತದೆ ಹಾಗೂ ಆ ತಳಿಗಳಲ್ಲಿ ಗೋವುಗಳು ಹಾಲು ನೀಡುವ ಸಾಮರ್ಥ್ಯ ಹೆಚ್ಚು ಎಂದು ಗೋಶಾಲೆ ನಿರ್ವಹಣೆ ಉಸ್ತುವಾರಿ ಹೊತ್ತ ಚಂದು ವಿವರಿಸಿದರು. ಅಲ್ಲದೇ ಆರೋಗ್ಯ ಸಮಸ್ಯೆ ಎದುರಾಗದಿರುವುದು, ಆರೋಗ್ಯಯುತ ಕರು ಹುಟ್ಟುವುದು ಗೋತ್ರಗಳ ಆಧಾರದ ಮೇಲೆ ಗೋವುಗಳನ್ನು ಬ್ರಿಡಿಂಗ್ ಮಾಡಿಸುವುದರ ವಿಶೇಷತೆ ಎಂದು ಅವರು ಹೇಳಿದರು. ಇದೇ ಮಾದರಿಯನ್ನು ನಾವು ಸಹ ನಮ್ಮ ಗೋಶಾಲೆಗಳಲ್ಲಿ ಅಳವಡಿಸಿಕೊಳ್ಳಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.

ಶ್ರೀ ಶ್ರೀ ರವಿಶಂಕರ್ ಗುರೂಜಿಯವರನ್ನು ಭೇಟಿ ಮಾಡಿದ ಸಚಿವರು ಗೋಶಾಲೆ ನಿರ್ವವಹಣೆ ಕುರಿತು ಚರ್ಚೆ ನಡೆಸಿದರು ಈ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿದ್ದಕ್ಕೆ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಭೇಟಿಯ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಅತ್ಯಂತ ವ್ಯವಸ್ಥಿತ್ಯವಾಗಿ ಗೋಶಾಲೆ ನಡೆಸಲಾಗುತ್ತಿದ್ದು ಸುಮಾರು 1500ಕ್ಕೂ ಹೆಚ್ಚು ಗೋವುಗಳಿದ್ದು ದೇಶದ 15 ತಳಿಗಳನ್ನು ಇಲ್ಲಿ ಸಂರಕ್ಷಿಸಿ ಸಂವರ್ಧನೆ ಕಾರ್ಯ ನಡೆಸಲಾಗುತ್ತಿರುವುದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದರು. ದೇಶದಲ್ಲಿ ದಿನದಿಂದ ದಿನಕ್ಕೆ ಗೋವುಗಳ ಸಂತತಿ ಕಡಿಮೆ ಆಗುತ್ತಿರುವ ಸಮಯದಲ್ಲಿ ರವಿಶಂಕರ್ ಗುರೂಜಿಯವರು ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವುದ ನಿಜಕ್ಕೂ ಸಂತಸ ತಂದಿದೆ ಎಂದು ಸಚಿವರು ಹೇಳಿದರು.

ಗೀರ್, ಕಾಂಕ್ರೇಜ್, ಸಾಹಿವಾಲ್, ಒಂಗೋಲ್, ಥಾರ್ ಪಾರ್ಕರ್, ಹಳ್ಳಿಕಾರ, ರಾಠಿ, ಪುಲಿಕುಲಮ್, ಒಂಬಲ್‍ಚೇರಿ, ಆಲಂಬಡಿ, ಅದಾಂಗಿ, ಕಾಂಗಯಮ್, ಕಾಸರಗೋಡುಗಿಡ ತಳಿಗಳು ಇಲ್ಲಿರುವುದು ವಿಶೇಷ. ದಿನ ಒಂದಕ್ಕೆ ಸುಮಾರು 800 ಲೀಟರ್ ಹಾಲು ಉತ್ಪಾದನೆ ಹಾಗೂ 8 ಟನ್ ಗೊಬ್ಬರ ಉತ್ಪಾದನೆ ಆಗುತ್ತದೆ. ಗೋವುಗಳಿಗೆ ಬೇಕಾದ ಮೇವು ಸಹ ಇಲ್ಲಿಯೇ ಬೆಳೆಯುತ್ತಿರುವುದು ವಿಶೇಷ. ಇದನ್ನೂ ಓದಿ: ಜಲಜೀವನ್ ಮಿಷನ್ ಯೋಜನೆಯಡಿ 25 ಲಕ್ಷ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ: ಸಿಎಂ ಬಿಎಸ್‍ವೈ

ಧ್ಯಾನದಿಂದ ಗೋವುಗಳ ಆರೈಕೆ
ಗೋವುಗಳ ಆರೈಕೆ ಮಾಡುವವರಿಗೆ ನಿತ್ಯ ಧಾನ ಮಾಡಿಸಲಾಗುತ್ತದೆ ಏಕೆಂದರೆ ರಾಸುಗಳ ಆರೈಕೆ ಅತ್ಯಂತ ಸೂಕ್ಷ್ಮ ಕೆಲಸ ಆಗಿರುವುದರಿಂದ ಅವುಗಳ ಆರೈಕೆಯಲ್ಲಿ ಯಾವುದೇ ವ್ಯತೇಯ ಆಗಬಾರದೆಂಬ ಉದ್ದೇಶದಿಂದ ಅವರಿಗೆ ಧ್ಯಾನ ಮಾಡಿಸಲಾಗುತ್ತದೆ. ಮನಸ್ಸು ಸ್ಥಿಮಿತದಲ್ಲಿದ್ದರೆ ಆರೈಕೆ ಉತ್ತಮ ರೀತಿಯಲ್ಲಾಗುತ್ತದೆ ಎನ್ನುವುದು ಅವರ ನಂಬಿಕೆ ಆಗಿದೆ. ಇದನ್ನೂ ಓದಿ: ಆದಿಚುಂಚನಗಿರಿ ಕೇತ್ರದ ಆಮ್ಲಜನಕ ಘಟಕ ಲೋಕಾರ್ಪಣೆ

The post ಗೋತ್ರಗಳ ಆಧಾರ ಮೇಲೆ ಬ್ರಿಡಿಂಗ್‍ಗೆ ಕ್ರಮ : ಸಚಿವ ಪ್ರಭು ಚವ್ಹಾಣ್ appeared first on Public TV.

Source: publictv.in

Source link