ಗೋಪಾಲಕೃಷ್ಣ ಬಂಧನಕ್ಕೆ ಒತ್ತಾಯ; ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ವಿಶ್ವನಾಥ್ ಬೆಂಬಲಿಗ


ಬೆಂಗಳೂರು: ಬಿಜೆಪಿ ಶಾಸಕ ಎಸ್​​.ಆರ್​.ವಿಶ್ವನಾಥ್​ ಕೊಲೆ ಸಂಚು ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತರು ರಸ್ತೆ ಬಂದ್​ ಮಾಡಿ  ಗೋಪಾಲಕೃಷ್ಣ ವಿರುದ್ಧ ಪ್ರತಿಭಟನೆಗೆ ನಿಂತಿದ್ದಾರೆ.

ಮಾದನಾಯಕನಹಳ್ಳಿಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು  ತುಮಕೂರು-ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಗೋಪಾಲಕೃಷ್ಣ ಮತ್ತವರ ಸಹಚರರನ್ನ ಬಂಧಿಸುವಂತೆ ಆಗ್ರಹಿಹಿಸಿದ್ದಾರೆ. ಈ ವೇಳೆ ಸೀಮೆ ಎಣ್ಣೆ ಸುರಿದುಕೊಂಡು  ಗೋಪಾಲ್​ ಎಂಬ  ಕಾರ್ಯಕರ್ತ ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದಾರೆ.

ಇನ್ನೂ ನೆಲಮಂಗಲದಲ್ಲಿ  ಗೋಪಾಲಕೃಷ್ಣ ಭಾವಚಿತ್ರದ ಬ್ಯಾನರ್ ಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದ ಕಾರ್ಯಕರ್ತರು ಗೋಪಾಲಕೃಷ್ಣ ವಿಶ್ವನಾಥ್ ವಿರುದ್ಧ ಗೆದ್ದು ಬರಲಿ ,ಸ್ವಾಗತಿಸ್ತೇವೆ ಈ ರೀತಿ ಸುಪಾರಿ ಕೊಟ್ಟು ಹತ್ಯೆಗೆ ಸಂಚು ಹಾಕೋದು ಹೇಯ ಕೃತ್ಯ. ಆತನನ್ನ ಬಂಧಿಸಿ ಗಡಿಪಾರು ಮಾಡಬೇಕು ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:S.R.ವಿಶ್ವನಾಥ್​ ಹತ್ಯೆಗೆ ಸ್ಕೆಚ್​​ ಆರೋಪ; ಕುಳ್ಳ ದೇ​​ವರಾಜ್ ವಿರುದ್ಧ ಕೇಳಿಬಂದಿರುವ ಆರೋಪವೇನು..?

ಇದನ್ನೂ ಓದಿ;ವಿಶ್ವನಾಥ್ ವಿರುದ್ಧ ಸುಪಾರಿ ಸಂಚಿನ ಮಾತುಕತೆ ಹೇಗಿತ್ತು? ವೈರಲ್ ವಿಡಿಯೋ ಕಂಪ್ಲೀಟ್ ಸಂಭಾಷಣೆ

 

News First Live Kannada


Leave a Reply

Your email address will not be published. Required fields are marked *