ಚಾಮರಾಜನಗರ: ಕೆಎಸ್​ಆರ್​ಟಿಸಿ ಬಸ್ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿ ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದ ಘಟನೆ ಚಾಮರಾಜನಗರ ಜಿಲ್ಲೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದಿದೆ.

ಘಟನೆಯಿಂದಾಗಿ ಕೆಎಸ್​ಆರ್​ಟಿಸಿ ಬಸ್ ರಸ್ತೆಯ ಎಡಭಾಗಕ್ಕೆ ವಾಲಿದೆ. ಬಸ್ ಏನಾದ್ರೂ ಬಲಭಾಗಕ್ಕೆ ವಾಲಿದ್ರೆ ಕಂದಕಕ್ಕೆ ಉರುಳುವ ಅಪಾಯವಿತ್ತು ಎನ್ನಲಾಗಿದೆ. ಜೀಪ್ ಹಾಗೂ ಬಸ್ ಎರಡೂ ಜಖಂ ಆಗಿದ್ದು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನಿನ್ನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂಥದ್ದೇ ಘಟನೆಯೊಂದು ನಡೆದಿದ್ದು 25 ಪ್ರಯಾಣಿಕರು ಸ್ವಲ್ಪದರಲ್ಲೇ ಬಚಾವಾಗಿದ್ದರು.. ಮಳೆನೀರಿನಿಂದಾಗಿ ಬಸ್ ರಸ್ತೆ ಪಕ್ಕದ ಕಾಲುವೆಗೆ ಉರುಳಿಬಿದ್ದಿತ್ತು.

ಇದನ್ನೂ ಓದಿ: ನಿಯಂತ್ರಣ ತಪ್ಪಿದ ಸರ್ಕಾರಿ ಬಸ್; ಕೂದಲೆಳೆಯಲ್ಲಿ ಪಾರಾದ 25 ಪ್ರಯಾಣಿಕರು

The post ಗೋಪಾಲಸ್ವಾಮಿ ಬೆಟ್ಟದಲ್ಲಿ ಬಸ್-ಜೀಪ್ ನಡುವೆ ಡಿಕ್ಕಿ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ appeared first on News First Kannada.

Source: newsfirstlive.com

Source link