ಬೆಂಗಳೂರು: ರಮಣಶ್ರೀ ಆಸ್ಪತ್ರೆಯ ವೈದ್ಯ ರಮಣರಾವ್ ಟ್ರೀಟ್ಮೆಂಟ್ ಬಗ್ಗೆ ನಾವು ಏನೂ ಮಾತನಾಡಲ್ಲ. 15 ನಿಮಿಷದ ಗೋಲ್ಡನ್ ಟೈಮ್ ಬಗ್ಗೆ ನಮಗೆ ಗೊಂದಲ ಇದೆ. ಅದರ ಬಗ್ಗೆ ಆಸ್ಪತ್ರೆಯಿಂದ ಕ್ಲಾರಿಟಿ ಬೇಕು ಅಂತಾ ಪುನೀತ್ ರಾಜ್ಕುಮಾರ್ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸುತ್ತಿರುವ ಅಭಿಮಾನಿ ಅರುಣ್ ಪರಮೇಶ್ವರ್ ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಾ.ರಮಣರಾವ್ ಸಿಸಿಟಿವಿ ರಿವೀಲ್ ಮಾಡಲಿ. ಅಲ್ಲಿಯವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ. ವೈದ್ಯರ ಈ ನಡೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಷ್ಟೆಲ್ಲ ಹೋರಾಟ ಆಗ್ತಿದೆ, ಅವರಿಗೆ ಸಿಸಿಟಿವಿ ರಿವಿಲ್ ಮಾಡೋಕೆ ಏನು ಅಂತಾ ಪ್ರಶ್ನಿಸಿದ್ದಾರೆ.
ಸಿಸಿಟಿವಿ ರಿವಿಲ್ ಮಾಡೋದು ಬಿಟ್ಟು ಎಲ್ಲಾ ಮಾತಾಡ್ತಿದ್ದಾರೆ. ನಾವು ಭಾವೋದ್ವೇಗಕ್ಕೆ ಒಳಗಾಗಿ ಈ ರೀತಿ ಹೇಳ್ತಿಲ್ಲ. ಅವರು ಸಿಸಿಟಿವಿ ಬಿಡುಗಡೆ ಮಾಡಿದ್ರೆ ಎಲ್ಲದ್ದಕ್ಕೂ ಉತ್ತರ ಸಿಗುತ್ತದೆ. ನಿನ್ನೆ ಕಂಪ್ಲೆಂಟ್ ಕೊಟ್ಟ ಮೇಲೆ ಡಾಕ್ಟರ್ ಸ್ಪಷ್ಟನೆ ಕೊಟ್ಟಿದ್ದಾರೆ.
ವಿಡಿಯೋ ರಿವೀಲ್ ಮಾಡ್ಲಿ, ನಾವು ಪ್ರಶ್ನೆ ಮಾಡಲ್ಲ. ಯಾರ ಭಾವನೆಗೂ ಧಕ್ಕೆ ಮಾಡುವ ಉದ್ದೇಶ ನಮಗಿಲ್ಲ. ಕರ್ನಾಟಕ ಪ್ರತಿಯೊಬ್ಬ ಅಭಿಮಾನಿಯ ಧ್ವನಿಯಾಗಿ ನಾನು ದೂರು ಮಾಡಿದ್ದೀನಿ. ನಾನು ರಮಣ ರಾವ್ ಟ್ರೀಟ್ಮೆಂಟ್ ಬಗ್ಗೆ ಏನೂ ಮಾತಾಡಲ್ಲ. 15 ನಿಮಿಷದ ಗೋಲ್ಡನ್ ಟೈಮ್ ಬಗ್ಗೆ ನಮಗೆ ಗೊಂದಲ ಇದೆ. ಅದರ ಬಗ್ಗೆ ಕ್ಲಾರಿಟಿ ಕೇಳೋದಷ್ಟೆ ನಾವು ಮಾಡ್ತಿರೋದು ಎಂದಿದ್ದಾರೆ.
ಇದನ್ನೂ ಓದಿ: ರಮಣಶ್ರೀ ಆಸ್ಪತ್ರೆ ವಿರುದ್ಧ ಅಪ್ಪು ಫ್ಯಾನ್ಸ್ ಆರೋಪ -ಡಾ.ರಮಣ್ ರಾವ್ ಹೇಳಿದ್ದೇನು..?