ಪ್ರೇಕ್ಷಕರಲ್ಲಿ ಪ್ರತೀವಾರ ಯಾರು ಎಲಿಮನೇಟ್​ ಆಗ್ತಾರೆ ಅಂತಾ ಕುತೂಹಲ ಮೂಡಿಸುವ ನಾಮಿನೇಷ್​ ಪ್ರಕ್ರಿಯೆ ಬಿಗ್​ಬಾಸ್​ ಮನೆಯಲ್ಲಿ ಎಂದಿನಂತೆ ಈ ವಾರವೂ ನೆಡೆದಿದೆ.. ನಾಮಿನೇಷನ್​ಗೆ ಈ ವಾರದ ಕ್ಯಾಪ್ಟನ್​ ರಘು ಹಾಗೂ ಈಗಾಗಲೆ ನೇರವಾಗಿ ನಾಮಿನೇಟ್​ ಆಗಿರುವ ದಿವ್ಯಾ ಸುರೇಶ್​ ಹಾಗೂ ಪ್ರಿಯಾಂಕ ಅವರ ಹೆಸರನ್ನು ಸೂಚಿಸುವಂತಿಲ್ಲ ಎಂದು ಬಿಗ್​ಬಾಸ್​ ತಿಳಿಸಿದ್ರು..

ಅದರಂತೆ ಈ ವಾರ ಲ್ಯಾಗ್​ಮಂಜು, ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​, ಅರವಿಂದ್​ ಸದಸ್ಯರ ಆಯ್ಕೆಯ ಮೇರೆಗೆ ನಾಮಿನೇಟ್​ ಆದ್ರು..ಈ ವಾರ ಟಾಸ್ಕ್​ ವಿಷಯದಲ್ಲಿ ತುಂಬಾನೆ ಫೇವರಿಸಮ್​ ಹಾಗೂ ಸ್ಟ್ರಾಂಗ್​ ಕಂಟೆಸ್ಟೆಂಟ್​ ಎಂಬ ಕಾರಣವನ್ನು, ಲ್ಯಾಗ್​ಮಂಜು ಅವರನ್ನು ನಾಮಿನೇಟ್​ ಮಾಡಿದವರು ತಿಳಿಸಿದ್ರೆ, ಪ್ರಶಾಂತ್​ ಸಂಬರಗಿ ಆಟ ಸರಿ ಆಡುತ್ತಿಲ್ಲಾ ಅವರ ನಡವಳಿಕೆ ಮಾತು ಕೂಡಾ ಹಿಡಿಸ್ತಾಯಿಲ್ಲಾ ಎಂದು ಕಾರಣವನ್ನು ತಿಳಿಸಿದ್ರು, ಇನ್ನು ಚಕ್ರವರ್ತಿ ಚಂದ್ರಚೂಡ್​ ಬಂದಾಗಿನಿಂದ ಮನೆಯ ವಾತವರಣ ಚೇಂಜ್​ ಆಗಿದೆ, ಅನಾವಶ್ಯಕವಾಗಿ ವಾದ ಮಾಡುತ್ತಾರೆ ಎಂದು ಮನೆಯ ಸದಸ್ಯರು ಕಾರಣಗಳನ್ನು ತಿಳಿಸಿ ವೋಟ್ ಮಾಡಿದ್ರು.. ಹೀಗೆ ಪ್ರತಿಯೊಬ್ಬರೂ ಕೂಡಾ ಇಬ್ಬರನ್ನು ನಾಮಿನೇಟ್​ ಮಾಡಿ ರೀಸನ್​ ಕೂಡಾ ಕೊಟ್ಟರು ಅದರಲ್ಲಿ ಹೆಚ್ಚು ವೋಟ್​ ಪಡೆದವರು ನಾಮಿನೇಟ್​ ಆದ್ರು..

ಇನ್ನು ಕೊನೆಯಲ್ಲಿ ಬಿಗ್​ಬಾಸ್​ ಕ್ಯಾಪ್ಟನ್​ಗೆ ಯಾರನ್ನಾದರೂ ಡೈರೆಕ್ಟ್​ ನಾಮಿನೇಟ್​ ಮಾಡಬೇಕು ಎಂದು ಹೇಳಿದಾಗ ರಘು ಅವರು ಶುಭಾಪೂಂಜಾ ಅವರ ಹೆಸರನ್ನು ಸೂಚಿಸಿ, ಶುಭಾ ಬಳಿ ಗೋಲ್ಡನ್​ ಪಾಸ್​ ಇದೆ.. ಅದನ್ನು ಬಳಸುತ್ತಾರೋ ಇಲ್ವೋ ಎಂಬ ಕುತೂಹಲ ಇದೆ.. ಹಾಗಾಗಿ ನಾಮಿನೇಟ್​ ಮಾಡುತ್ತೀನಿ ಎಂದು ಕಾರಣ ತಿಳಿಸಿದ್ರು..

ಬಳಿಕ ಬಿಗ್​ಬಾಸ್​ ಶುಭ ಈ ವಾರ ಗೋಲ್ಡ​ನ್​ ಪಾಸ್​ ಬಳಸಿ ನಾಮಿನೇಷನ್​ನಿಂದ ಹೊರಬರಲು ಇಚ್ಚಿಸುತ್ತೀರಾ ಎಂದು ಕೇಳಿದಾಗ.. ಶುಭ ಹೌದು ನಾನು ಗೊಲ್ಡ​ನ್​ ಪಾಸ್​ ಬಳಸುತ್ತೀನಿ ಎಂದು ಹೇಳಿದ್ರು.. ಹೀಗೆ ಈ ವಾರ ಡೈರೆಕ್ಟ್​ ನಾಮಿನೇಟ್​ ಆದ ಶುಭ ಪಾಸ್​ ಬಳಸಿ ನಾಮಿನೇಷನ್​ನಿಂದ ಹೊರಬಂದ್ರು..

The post ಗೋಲ್ಡನ್ ಪಾಸ್ ಅಸ್ತ್ರ ಬಳಸಿದ ಶುಭಾ ಪೂಂಜಾ.. ನಾಮಿನೇಷನ್​ನಿಂದ ಬಚಾವ್​ ಆಗಿದ್ಹೇಗೆ?! appeared first on News First Kannada.

Source: newsfirstlive.com

Source link