ಪಣಜಿ: ಗೋವಾದಲ್ಲಿ ಮತ್ತೆ 15 ಕೋವಿಡ್ ರೋಗಿಗಳು ಆಕ್ಸಿಜನ್ ಕೊರತೆಯಿಂದ ಅಸುನೀಗಿದ್ದಾರೆ. ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 15 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 2 ದಿನಗಳ ಹಿಂದೆ ಇದೇ ಗೋವಾ ವೈದ್ಯಕೀಯ ಕಾಲೇಜ್​ನಲ್ಲಿ 26 ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು.

ಇದೀಗ ಮತ್ತೆ ಅಂತಹದ್ದೇ ಸನ್ನಿವೇಶ ಸಂಭವಿಸಿದ್ದು, ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಇನ್ನು ಈ ಬಗ್ಗೆ ಗೋವಾ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡು ಮತ್ತೆ ಈ ರೀತಿಯ ದುರಂತ ಮರುಕಳಿಸದಂತೆ ಎಚ್ಚರ ವಹಿಸಲು ಖಡಕ್​ ಎಚ್ಚರಿಕೆ ನೀಡಿದೆ.

The post ಗೋವಾದಲ್ಲಿ ಮತ್ತೊಂದು ದುರಂತ: ಆಕ್ಸಿಜನ್ ಕೊರತೆಯಿಂದ 15 ರೋಗಿಗಳು ಸಾವು appeared first on News First Kannada.

Source: newsfirstlive.com

Source link