ಗೋವಾದಲ್ಲಿ ಮನೋಹರ್ ಪರಿಕ್ಕರ್​​ ಪುತ್ರನಿಗೆ ಟಿಕೆಟ್ ಮಿಸ್​ -AAP ಸೇರ್ತಾರಾ ಉತ್ಪಾಲ್ ಪರಿಕ್ಕರ್..?


ದೇಶದಲ್ಲಿ ಪಂಚರಾಜ್ಯ ಚುನಾವಣಾ ಕಾವು ನಿಧಾನಕ್ಕೆ ಏರುತ್ತಿದೆ. ಸದ್ಯ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರೋ ಬಿಜೆಪಿ ಮತ್ತೊಮ್ಮೆ ಅಧಿಕೇರಲು ರಣತಂತ್ರ ರೂಪಿಸ್ತಿದೆ. ಮೊನ್ನೆಯಷ್ಟೇ ಉತ್ತಪ್ರದೇಶ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿರೋ ಬಿಜೆಪಿ ನಿನ್ನೆ ಗೋವಾದ 34 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ ಈ ಲಿಸ್ಟ್​ನಲ್ಲಿ ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್ ಪರಿಕ್ಕರ್​​ ಹೆಸ್ರೇ ಮಿಸ್ ಆಗಿದೆ. ಇದ್ರ ಬೆನ್ನಲ್ಲೇ ಗೋವಾ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.

ದಿ. ಮನೋಹರ್ ಪರಿಕ್ಕರ್ ಪುತ್ರನಿಗೆ ಸಿಕ್ಕಿಲ್ಲ ಬಿಜೆಪಿ ಟಿಕೆಟ್..!
ಬಿಜೆಪಿ ನಾಯಕರು ನಿನ್ನೆ ರಿಲೀಸ್ ಮಾಡಿರೋ ಮೊದಲ ಹಂತದ ಪಟ್ಟಿಯಲ್ಲಿ ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್ ಪರಿಕ್ಕರ್​ಗೆ ಟಿಕೆಟ್ ನೀಡಿಲ್ಲ. ತಂದೆ ಮನೋಹರ್ ಪರಿಕ್ಕರ್ ಸ್ಪರ್ಧಿಸ್ತಿದ್ದ ಪಣಜಿ ಕ್ಷೇತ್ರದ ಟಿಕೆಟ್ ಬೇಕು ಅಂತಾ ಉತ್ಪಾಲ್ ಪಟ್ಟು ಹಿಡಿದಿದ್ರು. ಆದ್ರೆ ನಿನ್ನೆ ರಿಲೀಸ್ ಆದ ಲಿಸ್ಟ್​ನಲ್ಲಿ ಪಣಜಿ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದಿದ್ದ ಅಟಾನಾಸಿಯೋ ಮಾನ್ಸರೇಟ್ ಆಯ್ಕೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡ ಉತ್ಪಾಲ್ ಪಣಜಿ ಟಿಕೆಟ್​ ಸಿಗುತ್ತೆ ಅಂತಾ ನಿರೀಕ್ಷೆ ಇತ್ತು. ಆದ್ರೆ ನನ್ನ ಮುಂದಿನ ನಿರ್ಧಾರ ಶೀಘ್ರ ಪ್ರಕಟಿಸ್ತೇನೆ ಅಂತಾ ಹೊಸ ಬಾಂಬ್ ಸಿಡಿಸಿದ್ದಾರೆ.

ಉತ್ಪಾಲ್ ಪರಿಕ್ಕರ್​ಗೆ ಅರವಿಂದ್ ಕೇಜ್ರಿವಾಲ್ ಆಫರ್
ಪಣಜಿಯಿಂದ ಬಿಜೆಪಿ ಟಿಕೆಟ್ ವಂಚಿತರಾಗಿರೋ ಉತ್ಪಾಲ್ ಪರಿಕ್ಕರ್​ಗೆ ಆಮ್ ಆದ್ಮಿ ಪಾರ್ಟಿ ಆಫರ್ ಕೊಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಪರಿಕ್ಕರ್​ ಕುಟುಂಬದ ಜೊತೆಗೆ ಬಿಜೆಪಿಯ ಯೂಸ್ ಌಂಡ್ ಥ್ರೋ ವರ್ತನೆ ಗೋವಾದ ಜನರಿಗೆ ನೋವುಂಟು ಮಾಡಿದೆ. ಉತ್ಪಾಲ್ ಅವ್ರು ಆಪ್ ಟಿಕೆಟ್ ಅಡಿ ಸ್ಪರ್ಧಿಸೋದಾದ್ರೆ ಸ್ವಾಗತ ಅಂತಾ ಅಹ್ವಾನಿಸಿದ್ದಾರೆ.

ಪರಿಕ್ಕರ್ ಕುಟುಂಬದ ಬಗ್ಗೆ ಬಿಜೆಪಿಯ ಯೂಸ್ ಌಂಡ್ ಥ್ರೋ ನಿಲುವಿನಿಂದ ಗೋವಾದ ಜನರಿಗೆ ನೋವಾಗಿದೆ. ನಾನು ಎಂದೆಂದಿಗೂ ಮನೋಹರ್ ಪರಿಕ್ಕರ್​ರನ್ನು ಗೌರವಿಸ್ತೇನೆ. ಉತ್ಪಾಲ್​ರವರು ಆಪ್ ಟಿಕೆಟ್​ನಲ್ಲಿ ಸ್ಪರ್ಧಿಸೋದಾದ್ರೆ ನಾನು ಸ್ವಾಗತಿಸುತ್ತೇನೆ.

ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ

ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಉತ್ಪಾಲ್ ಪರಿಕ್ಕರ್​ಗೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸೋ ಆಯ್ಕೆ ನೀಡಿದ್ದಾರೆ. ಆದ್ರೆ ಪಣಜಿ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡಲ್ಲ ಅಂತಾ ಉತ್ಪಾಲ್ ಪಟ್ಟು ಹಿಡಿದಿದ್ದಾರೆ. ತಂದೆ ವಿರುದ್ಧ 25 ವರ್ಷಗಳ ಕಾಲ ಸ್ಪರ್ಧಿಸ್ತಿದ್ದ ಕಾಂಗ್ರೆಸ್​ನ ಮಾನ್ಸರೇಟ್​ಗೆ ಪಣಜಿ ಟಿಕೆಟ್ ನೀಡಿರೋದು ಉತ್ಪಾಲ್​ರನ್ನು ಮತ್ತಷ್ಟು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವೇಂದ್ರ ಫಡ್ನವಿಸ್, ಉತ್ಪಾಲ್​ಗೆ ನಾವು ಬೇರೆ ಆಯ್ಕೆ ಕೊಟ್ಟಿದ್ದೇವೆ. ಅದನ್ನು ಅವ್ರು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

ಪಂಜಿಮ್​ನಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಡಲಾಗಿದೆ. ಉತ್ಪಾಲ್ ಪರಿಕ್ಕರ್ ಹಾಗೂ ಪರಿಕ್ಕರ್ ಕುಟುಂಬ ನಮ್ಮ ಕುಟುಂಬವೂ ಹೌದು. ನಮಗೆ ತುಂಬಾ ಹತ್ತಿರದವರು. ಉತ್ಪಾಲ್ ಪರಿಕ್ಕರ್​​ಗೆ ಎರಡು ಬೇರೆ ಕ್ಷೇತ್ರಗಳ ಆಯ್ಕೆ ಕೊಡಲಾಗಿತ್ತು. ಅದ್ರಲ್ಲಿ ಒಂದು ಕ್ಷೇತ್ರವನ್ನು ನಿರಾಕರಿಸಿದ್ದಾರೆ. ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸೋ ಬಗ್ಗೆ ಚರ್ಚೆ ನಡೀತಿದೆ. ಅವರು ಅದನ್ನು ಸ್ವೀಕರಿಸಬೇಕು ಅನ್ನೋದು ನಮ್ಮ ಬಯಕೆ.
ದೇವೇಂದ್ರ ಫಡ್ನವಿಸ್, ಬಿಜೆಪಿ ಮುಖಂಡ

ಒಟ್ಟಿನಲ್ಲಿ ಬಿಜೆಪಿಯ ಪ್ರಭಾವಿ ನಾಯಕ, ಮೂರು ಬಾರಿ ಗೋವಾ ಸಿಎಂ ಪಟ್ಟ ಅಲಂಕರಿಸಿದ್ದ, ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪುತ್ರನಿಗೇ ಬಿಜೆಪಿ ಟಿಕೆಟ್ ನೀಡಿಲ್ಲ. ಈ ಮೂಲಕ ತಂದೆಯ ಕ್ಷೇತ್ರ ಪಣಜಿಯಲ್ಲಿ ಸ್ಪರ್ಧಿಸೋ ಉತ್ಪಾಲ್ ಕನಸು ನುಚ್ಚುನೂರಾಗಿದೆ. ಟಿಕೆಟ್ ಸಿಗುವ ಭರವಸೆಯಲ್ಲೇ ಇತ್ತೀಚೆಗೆ ಪಣಜಿ ಕ್ಷೇತ್ರದಲ್ಲಿ ಓಡಾಡ್ತಿದ್ದ ಉತ್ಪಾಲ್​ಗೆ ಮೊದಲ ಲಿಸ್ಟ್​ನಲ್ಲೇ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಆದ್ರೆ ಉತ್ಪಾಲ್ ಮುಂದಿನ ನಡೆ ಏನು ಅನ್ನೋದೇ ಸದ್ಯದ ಕುತೂಹಲ.

News First Live Kannada


Leave a Reply

Your email address will not be published. Required fields are marked *