ಗೋವಾ- ಕರ್ನಾಟಕ ಗಡಿಯಲ್ಲಿ ನಿರ್ಬಂಧ : ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಸಂಕಷ್ಟ

ಕಾರವಾರ: ಕೊರೊನಾ ರೂಪಾಂತರ ವೈರಸ್ ಡೆಲ್ಟಾ ಪ್ಲಸ್ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆ ಕಾರವಾರದ ಮಾಜಾಳಿ -ಗೋವಾ ಗಡಿಯಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್ ಟೆಸ್ಟ್ ನೆಗಟಿವ್ ಇಲ್ಲದವರಿಗೆ ಗೋವಾ ಹಾಗೂ ಕರ್ನಾಟಕ ಪ್ರದೇಶಕ್ಕೆ ತೆರಳಲು ಕರ್ನಾಟಕ ಸರ್ಕಾರ ಹಾಗೂ ಗೋವಾ ಸರ್ಕಾರ ನಿರ್ಬಂಧ ವಿಧಿಸಿದೆ.

ಗೋವಾ ಭಾಗದಿಂದ ಬರುವ ಮಹಾರಾಷ್ಟ್ರ, ಚಂಡೀಗಢ, ಕೇರಳ, ಹರಿಯಾಣ, ದೆಹಲಿ, ಉತ್ತರ ಪ್ರದೇಶದಿಂದ ಬರುವ ವಾಹನಗಳಿಗೆ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ. ಈ ರಾಜ್ಯದ ಪ್ರಯಾಣಿಕರಲ್ಲಿ ಕೊರೊನಾ ನೆಗಟಿವ್ ರಿಪೋರ್ಟ್ ಇಲ್ಲದವರನ್ನು ಮರಳಿ ಕಳುಹಿಸಲಾಗುತ್ತಿದೆ. ಈ ಪ್ರದೇಶದಿಂದ ಬಂದು ಕಾರವಾರದಲ್ಲಿ ತಂಗುವ ಜನರು ಕಡ್ಡಾಯವಾಗಿ 14 ದಿನ ಹೋಮ್ ಐಸೋಲೇಷನ್ ನಲ್ಲಿ ಇರಬೇಕು. ಗಡಿಯಲ್ಲಿ ಹೀಗೆ ಬರುವ ಜನರಿಗೆ ಕೈಗೆ ಸೀಲ್ ಹಾಕಿ ಕಳುಹಿಸಲಾಗುತ್ತಿದೆ.

ನಿತ್ಯ ಕಾರವಾರದಿಂದ ಗೋವಾಕ್ಕೆ ತೆರಳುವ ಉದ್ಯೋಗಿಗಳಿಗೆ ಸಂಕಷ್ಟ
ಪ್ರತಿ ದಿನ ಕಾರವಾರದಿಂದ ಗೋವಾಕ್ಕೆ ಸಾವಿರಾರು ಜನರು ಉದ್ಯೋಗಕ್ಕಾಗಿ ತೆರಳುತ್ತಾರೆ. ಆದರೆ ಇಂದಿನಿಂದ ಗೋವಾ ಸರ್ಕಾರ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಇಲ್ಲದವರಿಗೆ ಗೋವಾ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಜೊತೆಗೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಅವಧಿ ಕೇವಲ ಒಂದು ದಿನ ಮಾತ್ರ ಇರುವುದರಿಂದ ಕಾರವಾರದಿಂದ ಗೋವಾಕ್ಕೆ ತೆರಳುವ ಉದ್ಯೋಗಿಗಳು ಪ್ರತಿ ದಿನ ಟೆಸ್ಟ್ ರಿಪೋರ್ಟ್ ತೆಗೆದುಕೊಂಡು ಹೋಗಬೇಕು. ಇದನ್ನೂ ಓದಿ: ಬೆಳಗಾವಿ ಜಿಲ್ಲಾಡಳಿತದ ನಿರ್ಲಕ್ಷ್ಯ- ಮಹಾರಾಷ್ಟ್ರದ ಗಡಿಯಲ್ಲಿನ ಚೆಕ್ ಪೋಸ್ಟ್‌ಗಳಲ್ಲಿ ಹೇಳೋರಿಲ್ಲ, ಕೇಳೋರಿಲ್ಲ

ಕರ್ನಾಟಕ ಭಾಗದಲ್ಲಿ ಟೆಸ್ಟ್ ಮಾಡಿಸಿದರೆ ವರದಿ ಬರಲು ಒಂದು ದಿನ ಬೇಕಾಗುತ್ತದೆ. ಇನ್ನು ಗೋವಾ ಭಾಗದಲ್ಲಿ ಟೆಸ್ಟ್ ಮಾಡಿಸಿದರೆ ತಕ್ಷಣದಲ್ಲಿ ಬೇಕಾದಲ್ಲಿ 250 ರೂ. ಶುಲ್ಕ ನೀಡಬೇಕು. ಪ್ರತಿ ದಿನ ಶುಲ್ಕ ನೀಡಿ ಉದ್ಯೋಗಿಗಳು ತೆರಳಲು ಸಾಧ್ಯವಾಗದು. ಹೀಗಾಗಿ ಕಾರವಾರದಿಂದ ಗೋವಾಕ್ಕೆ ತೆರಳುವ ಉದ್ಯೋಗಿಗಳಿಗೆ ಟೆಸ್ಟ್ ಮಾಡಿಸುವುದೇ ದೊಡ್ಡ ತಲೆನೋವಾಗಿದೆ. ಪ್ರತಿ ದಿನ ಟೆಸ್ಟ್ ಮಾಡಿಸಿಕೊಂಡರೂ ತಿಂಗಳಿಗೆ 7,500 ರೂ. ಹಣ ಕರ್ಚಾಗುತ್ತದೆ. ಬರುವ ಸಂಬಳದಲ್ಲಿ ಅರ್ಧ ಭಾಗವನ್ನು ಟೆಸ್ಟ್ ಗಾಗಿ ಇಟ್ಟರೆ ಜೀವನಕ್ಕೆ ಏನು ಮಾಡುವುದು ಎಂಬ ಚಿಂತೆ ಉದ್ಯೋಗಿಗಳದ್ದು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ SSLC ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನಾಪತ್ತೆ!

ಗೋವಾವನ್ನು ಅಪ್ಪಿಕೊಳ್ಳುವ ಸರ್ಕಾರ ಇತ್ತ ಗಮನಹರಿಸಲಿ
ಕರ್ನಾಟಕದಿಂದ ಗೋವಾಕ್ಕೆ ತೆರಳಬೇಕು ಎಂದರೆ ಕರ್ನಾಟಕದ ಜನರಿಗೆ ಕೊರೊನಾ ನೆಗಟಿವ್ ರಿಪೋರ್ಟ ಕಡ್ಡಾಯವಾಗಿಬೇಕು. ಆದರೆ ಗೋವಾದಿಂದ ಕರ್ನಾಟಕಕ್ಕೆ ಬರಬೇಕು ಎಂದರೆ ಯಾವುದೇ ಟೆಸ್ಟ್ ಇಲ್ಲದೇ ಗೋವಾ ಜನರು ಕರ್ನಾಟಕ ಪ್ರವೇಶಿಸಲು ಕರ್ನಾಟಕ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಕರ್ನಾಟಕಕ್ಕೆ ಗೋವಾ ವಾಹನಗಳು ಹಾಗೂ ಜನರು ಯಾವುದೇ ಪರೀಕ್ಷೆ ಇಲ್ಲದೇ ಓಡಾಟ ನಡೆಸುತಿದ್ದಾರೆ. ಇದನ್ನೂ ಓದಿ: ಕಾರವಾರದಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆ್ಯಕ್ಟಿವ್- ಐಎಸ್‍ಡಿಯಿಂದ ಅರಣ್ಯದಲ್ಲಿ ಕೂಮಿಂಗ್ ಕಾರ್ಯಚರಣೆ

ಇನ್ನು ಮಹಾರಾಷ್ಟ್ರದ ಜನರು ಕೂಡ ಈ ಅವಕಾಶವನ್ನು ಬಳಸಿಕೊಳ್ಳುತಿದ್ದು, ಗೋವಾ ನೋಂದಣಿ ವಾಹನದಲ್ಲಿ ಕರ್ನಾಟಕ ಪ್ರವೇಶಿಸುತಿದ್ದು ಬಿಂದಾಸಾಗಿ ಓಡಾಟ ನಡೆಸುತಿದ್ದಾರೆ. ಹೀಗಾಗಿ ಗೋವಾಕ್ಕೂ ಕೂಡ ನಿರ್ಬಂಧ ಹೇರಬೇಕು. ಅಲ್ಲಿನ ಸರ್ಕಾರ ಹೇಗೆ ಕರ್ನಾಟಕದ ಜನರಿಗೆ ಕೊರೊನಾ ನೆಗಟಿವ್ ವರದಿ ನೀಡಬೇಕು ಹಾಗೆಯೇ ಗೋವಾದ ಜನರಿಗೂ ನೆಗಟಿವ್ ರಿಪೋರ್ಟ ಕಡ್ಡಾಯ ಮಾಡಬೇಕು. ಇಲ್ಲವಾದರೆ ಈ ಅವಕಾಶವನ್ನು ಉಪಯೋಗಿಸಿಕೊಂಡು ಇತರೆ ರಾಜ್ಯದ ಜನರು ಕರ್ನಾಟಕ ಪ್ರವೇಶಿಸುತ್ತಾರೆ. ಇದು ಸರಿಯಲ್ಲಾ ಕ್ರಮ ತೆಗದುಕೊಳ್ಳದಿದ್ದರೆ ಕರ್ನಾಟಕ ಗಡಿಯಲ್ಲಿ ಪ್ರತಿಭಟನೆ ನೆಡೆಸುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ. ಇದನ್ನೂ ಓದಿ: 30 ವರ್ಷದ ಹಿಂದೆ ಮುಳುಗಡೆಯಾಗಿದ್ದ ವಿದೇಶಿ ಹಡಗಿನ ಅವಶೇಷ ಪತ್ತೆ

The post ಗೋವಾ- ಕರ್ನಾಟಕ ಗಡಿಯಲ್ಲಿ ನಿರ್ಬಂಧ : ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಸಂಕಷ್ಟ appeared first on Public TV.

Source: publictv.in

Source link