ಕಾರವಾರ: ಮೇ.10ರಿಂದ ಇಡೀ ರಾಜ್ಯ ಸಂಪೂರ್ಣ ಲಾಕ್ ಡೌನ್​ ಆಗಲಿದೆ. ಈ ಹಿನ್ನಲೆ ಇಂದಿನಿಂದಲೇ ಗೋವಾ ಕಾರವಾರ ಗಡಿ ಬಂದ್ ಮಾಡಿ ಕಾರವಾರ ತಾಲೂಕು‌ ಆಡಳಿತ ಆದೇಶಿಸಿದೆ.

ತಹಶಿಲ್ದಾರ್ ರಾಮಚಂದ್ರ ಕಟ್ಟಿ ಅವರ ಆದೇಶದ ಹೆನ್ನಲೆಯಲ್ಲಿ ಗೋವಾದಿಂದ ಕರ್ನಾಟಕಕ್ಕೆ ಬರುವ ಎಲ್ಲಾ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ, ಮನೆಗೆ ಸೇರಲು ಕುಟುಂಬದೊಂದಿಗೆ ಆಗಮಿಸಿರುವ ಜನರಿಗೆ ಪರದಾಟ ಶುರುವಾಗಿದ್ದು, ಗಡಿ ಭಾಗದಲ್ಲೇ ಜನರು ಲಾಕ್ ಆಗಿದ್ದಾರೆ.

ಕೋವಿಡ್ ನೆಗಟೀವ್ ರಿಪೋರ್ಟ್​ ಇದ್ದವರಿಗೂ ಸ್ಥಳೀಯ ಆಡಳಿತ ಪ್ರವೇಶ ನೀಡ್ತಿಲ್ಲ. ಇನ್ನು ಕಾರವಾರದ ಗಡಿ ಮಾಜಾಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

 

The post ಗೋವಾ-ಕಾರವಾರ ಗಡಿ ಇಂದಿನಿಂದಲೇ ಬಂದ್​, ಕರ್ನಾಟಕಕ್ಕೆ ಬರೋ ವಾಹನ ಸಂಚಾರ ಸ್ಥಗಿತ appeared first on News First Kannada.

Source: newsfirstlive.com

Source link