ಜಮ್ಮು ಕಾಶ್ಮೀರದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗುತ್ತಲೇ ಇವೆ. ಈ ಹಿನ್ನಲೆ ಜಮ್ಮು – ಕಾಶ್ಮೀರದ 11 ಜಿಲ್ಲೆಗಳಲ್ಲಿ ಇಂದಿನಿಂದ ಮೇ 3ರವರೆಗೂ ಲಾಕ್ ಡೌನ್ ಜಾರಿಯಲ್ಲಿರಲಿದೆ.

ಶ್ರೀನಗರ, ಅನಂತ್‌ನಾಗ್, ಬಾರಾಮುಲ್ಲಾ, ಬುದ್ಗಾಮ್, ಕುಲ್ಗಾಮ್, ಪುಲ್ವಾಮಾ, ಗಂಡರ್‌ಬಾಲ್, ಜಮ್ಮು, ಕಥುವಾ, ರಿಯಾಸಿ, ಮತ್ತು ಉಧಂಪುರ ಸೇರಿದಂತೆ 11 ಜಿಲ್ಲೆಗಳಲ್ಲಿ ಕೊರೊನಾ ಕರ್ಫ್ಯೂ ವಿಧಿಸಿ ಜಮ್ಮು -ಕಾಶ್ಮೀರ ಆಡಳಿತ ಆದೇಶ ಹೊರಡಿಸಿದೆ.

ಇನ್ನು, ಗೋವಾದಲ್ಲೂ ಇಂದು ರಾತ್ರಿಯಿಂದ ಮೇ 3 ರವರೆಗೂ ಲಾಕ್ ಡೌನ್ ಜಾರಿ ಮಾಡಿ ಸಿಎಂ ಪ್ರಮೋದ್ ಸಾವಂತ್ ಆದೇಶಿಸಿದ್ದಾರೆ.

The post ಗೋವಾ, ಜಮ್ಮು ಕಾಶ್ಮೀರದಲ್ಲಿ ಇಂದಿನಿಂದ ಲಾಕ್​ಡೌನ್ appeared first on News First Kannada.

Source: newsfirstlive.com

Source link