ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆಯನ್ನ ಪ್ರಶ್ನಿಸಿ ಹೈ ಕೋರ್ಟ್​​​ನಲ್ಲಿ ರಿಟ್​​ ಅರ್ಜಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಯಿದೆಯ ಬಗ್ಗೆ ರಾಜ್ಯ ಸರ್ಕಾರ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ರಿಟ್​​ ಅರ್ಜಿ ಸಲ್ಲಿಕೆ ಮಾಡಿ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಇವುಗಳಿಗೆ ಉತ್ತರವಾಗಿ ಪ್ರಮಾಣಪತ್ರ ಸಲ್ಲಿಸಿರುವ ರಾಜ್ಯ ಸರ್ಕಾರ ಕಾಯ್ದೆ ಜಾರಿಯನ್ನು ಸಮರ್ಥಿಸಿಕೊಂಡಿದೆ. ರಾಜ್ಯದಲ್ಲಿ ಗೋವುಗಳ ಸಂರಕ್ಷಣೆ ಅಗತ್ಯವಿದೆ. ಕೃಷಿ ಕಾರ್ಯಕ್ಕೆ ಗೋವುಗಳು ಅಗತ್ಯವಿದ್ದು, ರಾಜ್ಯದ ಒಟ್ಟಾರೆ ಆದಾಯದಲ್ಲಿ 52,688 ಕೋಟಿ ರೂಪಾಯಿ ಕೃಷಿಯಲ್ಲಿ ಗೋವುಗಳ ಬಳಕೆಯಿಂದಲೇ ಬರುತ್ತಿದೆ.

ಒಟ್ಟಾರೆ ಕೃಷಿ ಆದಾಯ 1,28,000 ಕೋಟಿ ರೂಪಾಯಿ ಇದ್ದು, ಶೇ.80 ರಷ್ಟು ರೈತರ ಬಳಿ 2 ಹೆಕ್ಟೇರ್‌ಗಿಂತಲೂ ಕಡಿಮೆ ಭೂಮಿ ಇದೆ. ಈ ರೈತರು ಕೃಷಿ ಚಟುವಟಿಕೆಗಳಿಗೆ ಗೋವುಗಳನ್ನೇ ಹೆಚ್ಚಾಗಿ ಅವಲಂಬಿಸಬೇಕು. ಈ ಹಿನ್ನೆಲೆಯಲ್ಲಿ ಜಾನುವಾರುಗಳ ರಕ್ಷಣೆ ಅತ್ಯಗತ್ಯವಾಗಿತ್ತು. ಹೀಗಾಗಿ, ಕಾಯಿದೆಯ ಮೂಲಕ ಜಾನುವಾರು ರಕ್ಷಣೆ ಸರ್ಕಾರ ಮುಂದಾಗಿದೆ ಎಂದು ಪ್ರಮಾಣ ಪತ್ರದಲ್ಲಿ ಸರ್ಕಾರ ಉಲ್ಲೇಖಿಸಿದೆ.

The post ಗೋಹತ್ಯೆ ನಿಷೇಧ ಕಾಯ್ದೆಗೆ ಸಮರ್ಥನೆ- ಹೈಕೋರ್ಟ್​​​​ಗೆ ಸರ್ಕಾರದಿಂದ ಉತ್ತರ ಸಲ್ಲಿಕೆ appeared first on News First Kannada.

Source: newsfirstlive.com

Source link