ಗೌರಿ ಖಾನ್​ ಬರ್ತ್​ಡೇ; ಮಗ ಆರ್ಯನ್​ ಇಲ್ಲದೆ ಜನ್ಮದಿನಾಚರಣೆ ಮಾಡಿಕೊಳ್ಳಲ್ಲ ಎಂದ ತಾಯಿ | Shah rukh khan Wife Gauri Khan Not Celebrating Birthday because of Aryan Khan Judicial Custody

ಶಾರುಖ್​ ಖಾನ್​ ಹೆಂಡತಿ ಗೌರಿ ಖಾನ್​ಗೆ ಇಂದು ಜನ್ಮದಿನ. ಆದರೆ, ಅವರಿಗೆ ಈ ವರ್ಷ ಜನ್ಮದಿನ ಆಚರಿಸಿಕೊಳ್ಳಲು ಆಸಕ್ತಿ ಉಳಿದಿಲ್ಲ. ಮಗ ನ್ಯಾಯಾಂಗ ಬಂಧನದಲ್ಲಿರುವುದರಿಂದ ಗೌರಿ ಬರ್ತ್​​ಡೇ ಆಚರಿಸಿಕೊಳ್ಳುತ್ತಿಲ್ಲ. ಅವರು ಈ ಜನ್ಮದಿನವನ್ನು ದುಖಃದಲ್ಲೇ ಕಳೆಯುವಂತಾಗಿದೆ.

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಆರ್ಯನ್​ ಅವರನ್ನು ವಶಕ್ಕೆ ಪಡೆದಿತ್ತು. ಈಗ ಆರ್ಯನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಾಮೀನು ಅರ್ಜಿ ವಿಚಾರಣೆಯಲ್ಲಿದೆ.

TV9 Kannada

Leave a comment

Your email address will not be published. Required fields are marked *