ಆರೋಗ್ಯ ಇಲಾಖೆ ನಿರ್ಧಾರದ ವಿರುದ್ಧ ಭಕ್ತರು ಅಸಮಾಧಾನಗೊಂಡಿದ್ದು, ಹಿಂದುಗಳ ಹಬ್ಬಕ್ಕೆ ಯಾಕೆ ರೂಲ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಠಿಣ ಮಾರ್ಗಸೂಚಿ ಬಿಡುಗಡೆಯಾದರೆ ಪ್ರತಿಭಟನೆಯ ಎಚ್ಚರಿಕೆ ಸಹ ನೀಡಿದ್ದಾರೆ.

Ganesh Chaturthi festival
ಬೆಂಗಳೂರು: ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗಣೇಶ ಚತುರ್ಥಿಗೆ (Ganesh Chaturthi) ಕಠಿಣ ನಿಯಮ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಜನಜಂಗುಳಿ ಸೇರದಂತೆ ಎಚ್ಚರ ವಹಿಸಲು ರಾಜ್ಯಕ್ಕೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಹಾಗಾಗಿ ಕಠಿಣ ನಿಯಮಗಳನ್ನ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಕಾರಣ ರಿಸ್ಟ್ರಿಕ್ಷನ್ ತರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಗಣೇಶ ಹಬ್ಬಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೊವಿಡ್ ಕಮ್ಮಿ ಆಯ್ತು ಅಂತ ಭರ್ಜರಿ ಗಣಪನ ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದ ಭಕ್ತರಿಗೆ ಶಾಕ್ ಎದುರಾದಂತ್ತಾಗಿದೆ. ಕೊರೊನಾ ಕಾರಣ ಎರಡು ವರ್ಷಗಳಿಂದ ಗಣಪತಿ ಹಬ್ಬ ಸಿಂಪಲ್ ಆಚರಣೆ ಮಾಡಲಾಗಿತ್ತು.