ಬೆಂಗಳೂರು: ಗ್ಯಾಂಗ್ ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಬಾಂಗ್ಲಾ ಮೂಲದ ಆರೋಪಿಗಳಾದ ಹಕೀಲ್, ಕಾಜಲ್ ಮತ್ತು ನಸ್ರತ್​ಗೆ 14  ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಮೂವರು ಆರೋಪಿಗಳನ್ನು ಪೊಲೀಸರು ಗುರುನಾನಕ್​ಭವನ್​ಗೆ ಕರೆದೊಯ್ದು ಆನ್​ಲೈನ್ ಮೂಲಕ ಕೋರ್ಟ್​​ಗೆ ಹಾಜರುಪಡಿಸಿದ್ದರು.

ಈ ವೇಳೆ ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ವಿಚಾರಣೆ ನಡೆಸಿದ ಕೋರ್ಟ್​ನ ನ್ಯಾಯಾಧೀಶರು ಆರೋಪಿಗಳನ್ನ 14 ದಿನಗಳ ಕಾಲ ಅಂದ್ರೆ ಜೂನ್ 10 ರವರೆಗೆ ವಶಕ್ಕೆ ನೀಡಿ ಆದೇಶಿಸಿದ್ದಾರೆ.

The post ಗ್ಯಾಂಗ್​ರೇಪ್ ಪ್ರಕರಣ: ಮೂವರು ಆರೋಪಿಗಳು ಎರಡು ವಾರ ಪೊಲೀಸ್ ಕಸ್ಟಡಿಗೆ appeared first on News First Kannada.

Source: newsfirstlive.com

Source link