ಬೆಂಗಳೂರು: ನಗರದಲ್ಲಿ 22 ವರ್ಷದ ಯುವತಿಯ ಮೇಲೆ ಗ್ಯಾಂಗ್ ರೇಪ್​ ಮಾಡಿದ ಆರೋಪಿಗಳನ್ನ ಪೊಲೀಸರು ಚೆನ್ನಾಗಿ ಬೆಂಡೆತ್ತಿ ವಿಚಾರಣೆ ನಡೆಸಿದ್ದಾರೆ. ಆದರೆ ಸದ್ಯ ಆರೋಪಿಗಳನ್ನು ವಿಚಾರಣೆಗಳನ್ನು ನಡೆಸಿದ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದ್ದು, ಆರೋಪಿಗಳಲ್ಲಿ ಒಬ್ಬನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಇದಕ್ಕೂ ಮುನ್ನ ಕೊರೊನಾ ನಿಯಮಗಳಂತೆ ಆರೋಪಿಗಳನ್ನು ಬಂಧಿಸಿದ ಕೂಡಲೇ ಕೊರೊನಾ ಟೆಸ್ಟ್​ಗೆ ಒಳಪಡಿಸಿದ್ದರು. ಆರು ಜನ ಆರೋಪಿಗಳಲ್ಲಿ ಮೊಹ್ಮದ್ ಬಾಬು ಶೇಖ್​ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಪ್ರಕರಣದ ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಯ ಕೊರೊನಾ ವರದಿ ಪಾಸಿಟಿವ್ ಬಂದಿರುವುದು ವಿಚಾರಣೆಯನ್ನ ಮುಂದುವರಿಸಲು ಸಮಸ್ಯೆಯನ್ನು ಉಂಟುಮಾಡಿದೆ. ಆದರೆ ಆದ್ದರಿಂದ ಭಯದಲ್ಲೇ ಇತರೇ ಆರೋಪಿಗಳ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಇತ್ತ ಕೊರೊನಾ ಪಾಸಿಟಿವ್ ಬಂದ ಆರೋಪಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಇತರೇ ಆರೋಪಿಗಳು ಹಾಗೂ ಪೊಲೀಸರು ಸೆಲ್ಫ್​ ಕ್ವಾರಂಟೀನ್ ಆಗುವ ಅನಿವಾರ್ಯತೆಯೂ ಎದುರಾಗಿದೆ.

ಇದನ್ನೂ ಓದಿ: ಗ್ಯಾಂಗ್ ರೇಪ್ ಕೇಸ್; ಅಕ್ರಮವಾಗಿ ಬಾಂಗ್ಲಾದಿಂದ ಬಂದಿದ್ದ ರಾಕ್ಷಸರು 

ಇದನ್ನೂ ಓದಿ: ಪೈಶಾಚಿಕ ಕೃತ್ಯ ನಡೆಸಿದ ಆರೋಪಿಗಳ ಮೇಲೆ FIR, ಕೇರಳದಲ್ಲಿದ್ದ ಕಾಮುಕರೂ ಅರೆಸ್ಟ್

ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗ್ಯಾಂಗ್​​ರೇಪ್​ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

ಇದನ್ನೂ ಓದಿ: ಬೆಂಗಳೂರಲ್ಲೊಂದು ಪೈಶಾಚಿಕ ಕೃತ್ಯ: ಗ್ಯಾಂಗ್ ರೇಪ್ ಮಾಡಿ ವಿಕೃತಿ ಮೆರೆದ ಕಾಮುಕರು

The post ಗ್ಯಾಂಗ್​ ರೇಪ್​​; ವಿಚಾರಣೆ ನಡೆಸಿದ ಪೊಲೀಸರಿಗೆ ಹೊಸ ತಲೆನೋವು appeared first on News First Kannada.

Source: newsfirstlive.com

Source link