ಬೆಂಗಳೂರು: ನಗರದಲ್ಲಿ 22 ವರ್ಷದ ಯುವತಿಯ ಮೇಲೆ ಗ್ಯಾಂಗ್ ರೇಪ್​ ಮಾಡಿದ ಆರೋಪಿಗಳನ್ನ ಪೊಲೀಸರು ಚೆನ್ನಾಗಿ ಬೆಂಡೆತ್ತಿ ಮಾಹಿತಿಯನ್ನ ಕೆದಕುತ್ತಿದ್ದಾರೆ.

ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿದ್ದೂ ಅಲ್ಲದೇ, ಇವರು ನಕಲಿ ಆಧಾರ್​ ಕಾರ್ಡ್​ ಕೂಡ ಹೊಂದಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.

ಕೆಲಸವಿಲ್ಲದೇ ಅಡ್ಡಾಡುತ್ತಿದ್ದ ಇವರು, ಹಣ ಕೊಟ್ಟು ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಇವರು ಮಾಡಿಸಿರುವ ಆಧಾರ್ ಕಾರ್ಡ್ ಕನಕನಗರ ಲೇಔಟ್ ವಿಳಾಸದಲ್ಲಿದೆ ಎನ್ನಲಾಗಿದೆ. ಹೀಗಾಗಿ ತನಿಖೆಯನ್ನ ಮುಂದುವರಿಸಿರುವ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಕೊಟ್ಟವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಅಲ್ಲದೇ ಇದೇ ಏರಿಯಾದಲ್ಲಿ ಅನೇಕ ಮಂದಿ ಬಾಂಗ್ಲಿಗಳು ಇದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಗುರುತು ಪತ್ತೆ ಹಚ್ಚಲು ಪೊಲೀಸರು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ ಬಾಂಗ್ಲಾದೇಶದಿಂದ ಇವರನ್ನ ಕರೆದುಕೊಂಡು ಬಂದವರು ಯಾರು? ಯಾಕಾಗಿ ಕರೆದುಕೊಂಡು ಬಂದಿದ್ದಾರೆ. ಇಲ್ಲಿರುವವರೆಲ್ಲಾ ಅಧಿಕೃತವಾಗಿ ಬೆಂಗಳೂರನಲ್ಲಿ ಇದ್ದಾರಾ? ಅಥವಾ ಅಕ್ರಮವಾಗಿ ಇದ್ದಾರಾ ಅನ್ನೋ ಆಯಾಮದಲ್ಲಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗ್ಯಾಂಗ್ ರೇಪ್ ಕೇಸ್; ಅಕ್ರಮವಾಗಿ ಬಾಂಗ್ಲಾದಿಂದ ಬಂದಿದ್ದ ರಾಕ್ಷಸರು

ಇದನ್ನೂ ಓದಿ: ಪೈಶಾಚಿಕ ಕೃತ್ಯ ನಡೆಸಿದ ಆರೋಪಿಗಳ ಮೇಲೆ FIR, ಕೇರಳದಲ್ಲಿದ್ದ ಕಾಮುಕರೂ ಅರೆಸ್ಟ್

ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗ್ಯಾಂಗ್​​ರೇಪ್​ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

ಇದನ್ನೂ ಓದಿ: ಬೆಂಗಳೂರಲ್ಲೊಂದು ಪೈಶಾಚಿಕ ಕೃತ್ಯ: ಗ್ಯಾಂಗ್ ರೇಪ್ ಮಾಡಿ ವಿಕೃತಿ ಮೆರೆದ ಕಾಮುಕರು

The post ಗ್ಯಾಂಗ್​ ರೇಪ್​; ಬಾಂಗ್ಲಾ ಕಾಮುಕರ ಬಳಿ ಇತ್ತು ಆಧಾರ್ ಕಾರ್ಡ್.. ಈ ಸವಲತ್ತು ಕೊಟ್ಟಿದ್ಯಾರು?! appeared first on News First Kannada.

Source: newsfirstlive.com

Source link