ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಹಲ್ಲೆ ಹಾಗೂ‌ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನ ಮುಂದುವರಿಸಿರುವ ಬೆಂಗಳೂರು ಪೊಲೀಸರು, ಸಂತ್ರಸ್ತ ಯುವತಿಯ ಹೇಳಿಕೆಯನ್ನ ಪಡೆದುಕೊಂಡಿದ್ದಾರೆ.

ಕೇರಳದಲ್ಲಿದ್ದ ಯುವತಿಯನ್ನ ಬೈಯಪ್ಪನಹಳ್ಳಿ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಇಂದು ಬೆಳಗ್ಗೆ ಯುವತಿಯಿಂದ ಪೊಲೀಸರು ಹೇಳಿಕೆಯನ್ನ ದಾಖಲಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ಹೊತ್ತಲ್ಲಿ ಸಂತ್ರಸ್ತೆಯನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಿದ್ದಾರೆ. ಇನ್ನು ಸಂಜೆ ವೇಳೆಗೆ ಸಂತ್ರಸ್ತೆಯನ್ನ ಪೊಲೀಸರು, ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ಕೊರೊನಾ ವರದಿಗಾಗಿ ಕಾಯುತ್ತಿರುವ ಪೊಲೀಸರು
ಇನ್ನು ಬಂಧನಕ್ಕೆ ಒಳಗಾಗಿರುವ ಆರೋಪಿಗಳಿಗೆ ನಿನ್ನೆ ಪೊಲೀಸರು ಕೊರೊನಾ ಟೆಸ್ಟ್​ ಮಾಡಿಸಿದ್ದಾರೆ. ಅದರಲ್ಲಿ ಆಂಟಿಜೆನ್ ಟೆಸ್ಟ್​ ವೇಳೆ A-3 ಆರೋಪಿ ಮಹಮ್ಮದ್ ಬಾಬು ಶೇಖ್​ಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಎಲ್ಲಾ ಆರೋಪಿಗಳಿಗೂ ಆರ್​ಟಿಪಿಸಿಆರ್​ ಮಾಡಿಸಿದ್ದಾರೆ. ಇದರ ರಿಪೋರ್ಟ್​​ಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೊರೊನಾ ಸೋಂಕು ಪಾಸಿಟಿವ್ ಬಂದಿರುವ ಮಹಮ್ಮದ್ ಶೇಖ್​ನನ್ನ ಪ್ರತ್ಯೇಕ್​ ಸೆಲ್​ನಲ್ಲಿ ಇರಿಸಲಾಗಿದೆ.

ಮಹಿಳಾ ಆರೋಪಿಗಳನ್ನ ಠಾಣೆಗೆ ಕರೆತಂದ ಪೊಲೀಸರು
ಇನ್ನು ಬಂಧನಕ್ಕೆ ಒಳಗಾಗಿರುವ ಇಬ್ಬರು ಮಹಿಳಾ ಆರೋಪಿಗಳನ್ನ ರಾಮಮೂರ್ತಿನಗರ ಠಾಣೆಗೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಮಹಿಳಾ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳನ್ನ ಕರೆ ತರಲಾಯಿತು. ಯುವತಿ ಮೇಲೆ ಹಲ್ಲೆ ನಡೆಯುವಾಗ ಮಹಿಳಾ ಆರೋಪಿಗಳು ಇದ್ದರು. ಯುವತಿ ನೀಡಿದ ಮಾಹಿತಿ ಮೇರೆಗೆ ವಿಚಾರಣೆಗಾಗಿ ಪೊಲೀಸರು ಕರೆದುಕೊಂಡು ಬಂದಿದ್ದಾರೆ.

The post ಗ್ಯಾಂಗ್ ರೇಪ್ ಕೇಸ್​: ಸಂತ್ರಸ್ತೆ ಹೇಳಿಕೆ ಪಡೆದ ಪೊಲೀಸರು.. ಆರೋಪಿಗಳ ತನಿಖೆ ಎಲ್ಲಿವರೆಗೆ ಬಂತು? appeared first on News First Kannada.

Source: newsfirstlive.com

Source link