ಗ್ಯಾಂಗ್​ ಸ್ಟಾರ್ ಆಗಬೇಕು ಅಂದುಕೊಂಡವನ ಇಂಟರೆಸ್ಟಿಂಗ್ ಸ್ಟೋರಿ: ಮೊದಲ ಪ್ರಯತ್ನದಲ್ಲೇ ಕೊಲೆ ಕೇಸ್​ನಲ್ಲಿ ಅಂದರ್ | The Interesting Story of a Gang Ster: Arrested in the murder case on his first attempt


ಗ್ಯಾಂಗ್​ ಸ್ಟಾರ್ ಆಗಬೇಕು ಅಂದುಕೊಂಡವನ ಇಂಟರೆಸ್ಟಿಂಗ್ ಸ್ಟೋರಿ: ಮೊದಲ ಪ್ರಯತ್ನದಲ್ಲೇ ಕೊಲೆ ಕೇಸ್​ನಲ್ಲಿ ಅಂದರ್

ಪೂರನ್ ರಾಮ್ ದೇವಾಸಿ

ಚಾಮರಾಜಪೇಟೆಯಲ್ಲಿ ವೃದ್ದ ಜುಗುರಾಜ್ ಕೊಲೆ ಆರೋಪಿ ಕತೆ ಇದು. ಹಾರ್ಡ್‌ವೇರ್ ಶಾಪ್ ಇಟ್ಟುಕೊಂಡವನು ಗ್ಯಾಂಗ್ ಸ್ಟಾರ್ ಆಗಬೇಕು ಅಂದುಕೊಂಡಿದ್ದ. ಆದರೆ ಕೊಲೆ ಕೇಸ್​ನಲ್ಲಿ ಅಂದರ್ ಆಗಿದ್ದಾನೆ.

ಬೆಂಗಳೂರು: ಹಾರ್ಡ್‌ವೇರ್ ಶಾಪ್ ಇಟ್ಟುಕೊಂಡವನು ಗ್ಯಾಂಗ್ ಸ್ಟಾರ್ ಆಗಬೇಕು ಅಂದುಕೊಂಡಿದ್ದ. ನಾಲ್ಕು ವರ್ಷದಿಂದ ಗ್ಯಾಂಗ್​ ಸ್ಟಾರ್ ಆಗಬೇಕು ಅಂದುಕೊಂಡಿದ್ದ. ಅದ್ರಂತೆ ದೊಡ್ಡ ದೊಡ್ಡ ಡಾನ್​ಗಳ ಪರಿಚಯವೂ ಮಾಡಿಕೊಂಡಿದ್ದ. ಆದರೆ ಮಾಡಿದ ಮೊದಲ ಪ್ರಯತ್ನದಲ್ಲೇ ಕೊಲೆ ಕೇಸ್​ನಲ್ಲಿ ಅಂದರ್ ಆಗಿದ್ದಾನೆ. ಇದು ಗ್ಯಾಂಗ್ ಸ್ಟಾರ್ ಆಗಬೇಕು ಅಂದುಕೊಂಡವನ ಇಂಟರೆಸ್ಟಿಂಗ್ ಸ್ಟೋರಿ. ಚಾಮರಾಜಪೇಟೆಯಲ್ಲಿ ವೃದ್ದ ಜುಗುರಾಜ್ ಕೊಲೆ ಆರೋಪಿ ಕತೆ ಇದು. ಪೂರನ್ ರಾಮ್ ದೇವಾಸಿ ಎಂಬಾತನ ಕಥೆ. ಪೂರನ್ ಗೋವಾದಲ್ಲಿ ಹಾರ್ಡ್ ವೇರ್​ಶಾಪ್ ಇಟ್ಟುಕೊಂಡಿದ್ದ. ತಿಂಗಳಾದ್ರೆ ಸಾಕು ಕೈತುಂಬಾ ಹಣ ಬರ್ತಾ ಇತ್ತು, ಆದ್ರೂ ಗ್ಯಾಂಗ್ ಸ್ಟಾರ್ ಆಗಬೇಕೆಂಬ ಆಸೆ.

ತನ್ನ ಆಸೆಯಂತೆ ಗನ್ ತಗೊಂಡು ಗ್ಯಾಂಗ್ ಸ್ಟಾರ್ ಶೋ ಅಪ್ ಕೊಡುತ್ತಿದ್ದ. ಆತ ಶೋ ಅಪ್ ಕೊಡುತ್ತಿದ್ದ ವಿಡಿಯೋಗಳು ಲಭ್ಯವಾಗಿವೆ. ಸದ್ಯ ಗ್ಯಾಂಗ್ ಸ್ಟಾರ್ ಷೋ ಅಪ್ ಪೂರನ್​ನ್ನು ಚಾಮರಾಜಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋಟಿಗಟ್ಟಲೇ ಚಿನ್ನ ಕದ್ದಿದೇ ಫ್ಲ್ಯಾನ್ ಓಕೆ ಅಂದಿದ್ದ ಪೂರನ್, ಆದರೆ ಕದ್ದ ಚಿನ್ನ ನನ್ನ ಬಳಿಯೇ ಕೊಡಿ ಅಂತ ಬೇಡಿಕೆ ಇಟ್ಟಿದ್ದ. ಪೂರನ್ ಬೇಡಿಕೆಯಂತೆ 8.75 ಕೆ.ಜಿ ಚಿನ್ನವನ್ನು ಬಿಜುರಾಮ್ ಕೊಟ್ಟಿದ್ದ. ಸದ್ಯ ಗ್ಯಾಂಗ್ ಸ್ಟಾರ್ ಅಂತ ಆಸೆಗೆ ಕೊಲೆ ಕೇಸಲ್ಲಿ ಪೂರನ್ ಫಿಟ್ ಆಗಿದ್ದು, ಚಾಮರಾಜಪೇಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಆರೋಪಿ ಪತ್ತೆಗಾಗಿ ಬಲೆ ಬೀಸಿದ ಪೊಲೀಸ್​

ಚಾಮರಾಜಪೇಟೆಯಲ್ಲಿ ನಡೆದ ವೃದ್ಧನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಯಾವಾಗಲೂ ಮೃತ ಜುಗರಾಜ್ ಜೊತೆ ಇರುತ್ತಿದ್ದ ಆರೋಪಿ ಬಿಜುರಾಮ್ ಮೇ 24ರ ರಾತ್ರಿ 10.30ರ ಸುಮಾರಿಗೆ ಜುಗರಾಜ್ ಕೊಲೆ ಮಾಡಿದ್ದಾಗಿ ಸುಳಿವು ಸಿಕ್ಕಿದೆ.

TV9 Kannada


Leave a Reply

Your email address will not be published.