ದಾವಣಗೆರೆ: ಓಮ್ನಿ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ದಾವಣಗೆರೆಯ ಡೊಡ್ದಬಾತಿಯ ನಂದಿನ ಹಾಲಿನ ಡೈರಿ ಬಳಿ ನಡೆದಿದೆ. ಗ್ಯಾಸ್ ಲೀಕೇಜ್ನಿಂದ ಓಮ್ನಿ ಕಾರ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಅದೃಷ್ಟವಶಾತ್ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಅಂತ ಹರಿಹರ ಪೊಲೀಸರು ತಿಳಿಸಿದ್ದಾರೆ.
The post ಗ್ಯಾಸ್ ಲೀಕೇಜ್: ರಸ್ತೆ ಮಧ್ಯೆಯೇ ಧಗಧಗ ಹೊತ್ತಿ ಉರಿದ ಮಾರುತಿ ಓಮ್ನಿ ಕಾರು appeared first on News First Kannada.