ಹುಬ್ಬಳ್ಳಿ: ಕೋವಿಡ್ ಸಂಕಷ್ಟದ ನಡುವೆಯಲ್ಲಿಯೇ ಸರ್ಕಾರ ಎಸ್ಎಸ್ಎಲ್​ಸಿ ಪರೀಕ್ಷೆ ಏನೋ ನಡೆಸಲು ನಿರ್ಧಾರ ಕೈಗೊಂಡಿದೆ. ಆದರೆ ಪರೀಕ್ಷೆಗೆ ಹೋಗಲು ಮಕ್ಕಳು ಹರಸಾಹಸ ಪಡುವ ಬಗ್ಗೆ ಯಾರೊಬ್ಬರೂ ಕೂಡ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಕುಂದಗೋಳ ತಾಲೂಕಿನಲ್ಲಿ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲಕ್ಕೆ ಚಕ್ಕಡಿ ಕಟ್ಟಿಕೊಂಡು ಪರೀಕ್ಷೆಗೆ ಹೋಗಿರುವುದು ನಿಜಕ್ಕೂ ಸಾರ್ವಜನಿಕರ ಕಣ್ಣನ್ನು ಕೆಂಪಗಾಗುವಂತೆ ಮಾಡಿದೆ.

ಕುಂದಗೋಳ ತಾಲೂಕಿನ ಯರಗುಪ್ಪಿಯ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ರೊಟ್ಟಿಗವಾಡ ಪರೀಕ್ಷಾ ಕೇಂದ್ರಕ್ಕೆ ಚಕ್ಕಡಿ ಕಟ್ಟಿಕೊಂಡು ಹೋಗಿ ಪರೀಕ್ಷೆ ಬರೆದಿದ್ದಾರೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿಯವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ಗ್ರಾಮಕ್ಕಿಲ್ಲ ಬಸ್ ವ್ಯವಸ್ಥೆ;​ ಚಕ್ಕಡಿಯಲ್ಲೇ ತೆರಳಿ ಎಸ್​ಎಸ್​ಎಲ್​ಸಿ ಪರಿಕ್ಷೆ ಬರೆದ ವಿದ್ಯಾರ್ಥಿಗಳು appeared first on News First Kannada.

Source: newsfirstlive.com

Source link