ಗ್ರಾಮಕ್ಕೆ ನುಗ್ಗಿದ ಕಾಡು ಕರಡಿಗಳು ಗ್ರಾಮಸ್ಥರಲ್ಲಿ ಆತಂಕ; ಮುಂದೆ ಆಗಿದ್ದೇನು! | Wild bears enter the village for food see what happend next


ಗ್ರಾಮಕ್ಕೆ ನುಗ್ಗಿದ ಕಾಡು ಕರಡಿಗಳು ಗ್ರಾಮಸ್ಥರಲ್ಲಿ ಆತಂಕ; ಮುಂದೆ ಆಗಿದ್ದೇನು!

ಗ್ರಾಮವೊಂದಕ್ಕೆ ನುಗ್ಗಿದ ತಾಯಿ ಕರಡಿ ಮತ್ತು ಮರಿ ಕರಡಿ

viral video: ಕಾಡು ಪ್ರಾಣಿಗಳು ಆಹಾರ ಹುಡಿಕಿಕೊಂಡು ನಾಡಿಗೆ ಬರುವುದು ಸಾಮಾನ್ಯವಾಗಿ ಬಿಟ್ಟಿದೆ.  ಅಂತಹದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದೆ. ಹೌದು ಒಡಿಶಾದಲ್ಲಿ ಎರಡು ಕಾಡು ಕರಡಿಗಳು ಗ್ರಾಮವೊಂದನ್ನು ಪ್ರವೇಶಿಸಿದ್ದು, ಅಲ್ಲಿನ ಗ್ರಾಮಸ್ಥರನ್ನು ಭಯಭೀತಗೊಳಿಸಿವೆ. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ನಬರಂಗಪುರ ಜಿಲ್ಲೆಯ ಉಮರ್‌ಕೋಟೆಯ ಬುರ್ಜಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ತಾಯಿ ಕರಡಿ ಮತ್ತು ಅದರ ಮರಿ ಆಹಾರ ಹುಡುಕುತ್ತಾ ಹಳ್ಳಿಗೆ ನುಗ್ಗಿದೆ. ಗ್ರಾಮವು ಹತ್ತಿರದ ಅರಣ್ಯ ವ್ಯಾಪ್ತಿಯ ಪಕ್ಕದಲ್ಲಿ ನೆಲೆಗೊಂಡಿರುವುದರಿಂದ, ಕರಡಿಗಳು ಆಹಾರ ಹುಡುಕುತ್ತಾ ಮಾನವ ವಾಸಸ್ಥಾನಕ್ಕೆ ಬಂದಿವೆ.

ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕರಡಿಗಳು ಮನೆಯೊಂದಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಹಳ್ಳಿಯ ನಾಯಿಗಳು ಬೊಗಳಲು ಆರಂಭಿಸಿವೆ. ನಂತರ ಗ್ರಾಮಸ್ಥರು ಕರಡಿಗಳಿಗೆ ಬೆಂಕಿಯಿಂದ ಹೆದರಿಸಿ ಸಮೀಪದ ಮುತುರ್ಮಾ ಅರಣ್ಯ ವ್ಯಾಪ್ತಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರಡಿಗಳು ಆಹಾರ ಹುಡುಕಿಕೊಂಡು ಬಂದಿದ್ದರಿಂದ ಯಾವುದೇ ಹಾನಿ ಮಾಡದೆ ಕಾಡಿಗೆ ಮರಳಿವೆ. ಗ್ರಾಮಸ್ಥರ ಮೇಲೆ ದಾಳಿ ನಡೆಸಿದ ಯಾವುದೇ ಘಟನೆಗಳು ವರದಿಯಾಗಿಲ್ಲ.

ಇದನ್ನು ಓದಿ: 

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

TV9 Kannada


Leave a Reply

Your email address will not be published. Required fields are marked *