ಮುಂಬೈ:  ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚಾಗಿ ಹಳ್ಳಿಗಳಿಗೆ ಸೋಂಕು ಹಬ್ಬಿದೆ. ಹೀಗಾಗಿ ಗ್ರಾಮಗಳಿಗೆ ಕೊರೊನಾ ಹರಡುವುದನ್ನು ತಡೆಯಬಲ್ಲ ಕ್ರಮಗಳನ್ನು ಉತ್ತೇಜಿಸಲು ಮಹಾರಾಷ್ಟ್ರ ಸರ್ಕಾರ ಕೊರೊನಾ ಮುಕ್ತ ಗ್ರಾಮ ಸ್ಪರ್ಧೆ ಘೋಷಿಸಿದೆ.

ಇದರಂತೆ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ 3 ಗ್ರಾಮ ಪಂಚಾಯಿತಿಗಳಿಗೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ ₹50 ಲಕ್ಷ, ದ್ವಿತೀಯ ಬಹುಮಾನ ₹25 ಲಕ್ಷ ಹಾಗೂ ತೃತೀಯ ಸ್ಥಾನಕ್ಕೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಈ ಹಣವನ್ನು ಗ್ರಾಮಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ.

The post ಗ್ರಾಮಗಳನ್ನು ಕೊರೊನಾ ಮುಕ್ತ ಮಾಡಿದ್ರೆ ₹50 ಲಕ್ಷ ಬಹುಮಾನ appeared first on News First Kannada.

Source: newsfirstlive.com

Source link