ಬೆಂಗಳೂರು: ಕಾಸರಗೋಡಿನಲ್ಲಿ ಗ್ರಾಮದ ಹೆಸರುಗಳನ್ನು ಬದಲಿಸಲು ಕೇರಳ ಸರ್ಕಾರ ಮುಂದಾಗಿದೆ ಎಂಬ ಆರೋಪದ ಹಿನ್ನೆಲೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಪತ್ರ ಬರೆದಿದ್ದಾರೆ.

ಗ್ರಾಮದ ಹೆಸರಿನ ಅರ್ಥವನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿರುವ ಕೇರಳ ಸರ್ಕಾರ ಅವುಗಳ ಮೂಲ ಕನ್ನಡದ ಹೆಸರನ್ನೂ ಹಾಗೆಯೇ ಕಾಪಾಡಬೇಕೆಂದು ಪತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಮನವಿ ಮಾಡಿರೋ ಅವ್ರು, ಕನ್ನಡದ ಗ್ರಾಮಗಳ ಹೆಸರನ್ನ ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ. ಅಲ್ಲದೇ,

‘‘ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರನ್ನು ತೆಗೆದು ಮಲಯಾಳಂ ಹೆಸರಿಡುವ ಪ್ರಕ್ರಿಯೆಯನ್ನು ತಡೆಯಲೆಂದು ಅವರಿಗೆ ಪತ್ರ ಬರೆದಿದ್ದೇನೆ. ಪಿಣರಾಯಿ ವಿಜಯನ್ ಅವರು ಕನ್ನಡಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ನನಗಿದೆ. ಕರ್ನಾಟಕ-ಕೇರಳ ನಡುವಿನ ಭಾಷಾ ಸಾಮರಸ್ಯ ಹೀಗೇ ಉಳಿಯಲಿ, ಬೆಳೆಯಲಿ ಎಂದು ಆಶಿಸುವೆ.‘‘ ಎಂದಿದ್ದಾರೆ.

 

The post ಗ್ರಾಮಗಳ ಹೆಸರು ಬದಲಾವಣೆ: ಪಿಣರಾಯಿಗೆ ಪತ್ರ ಬರೆದು ‘ಭಾಷಾ ಸಾಮರಸ್ಯ’ ಉಳಿಸೋಣ ಎಂದ ಹೆಚ್​ಡಿಕೆ appeared first on News First Kannada.

Source: newsfirstlive.com

Source link