ಕೊಪ್ಪಳ: ಕೊರೊನಾ ಎರಡನೇ ಅಲೆಯ ತೀವ್ರತೆಯಿಂದಾಗಿ ಕರಕುಶಲ ನಾಡು ಕಿನ್ನಾಳ‌ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ 89 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಅಲ್ಲದೇ ಸೋಂಕಿನಿಂದ ಒಬ್ಬರು ಮೃತರಾಗಿದ್ದು, ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಅಗತ್ಯ ವಸ್ತುಗಳನ್ನು ಖರೀದಿಸಲು ಹೊರತುಪಡಿಸಿ ಸಂಪೂರ್ಣ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದ್ದು, ಇಂದು ಗ್ರಾಮಕ್ಕೆ ಸಹಾಯಕ ಆಯುಕ್ತರು ಕನಕರೆಡ್ಡಿ ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಗ್ರಾಮದ ಪ್ರಮುಖ ಬಡಾವಣೆಗಳಿಗೆ ಬೇಲಿ ಹಾಕುವಂತೆ ಸೂಚನೆ ನೀಡಿದರು.

ಗ್ರಾಮದಲ್ಲಿ ನಿತ್ಯ 50 ಮಂದಿಗೆ ಸ್ವಾಬ್ ಟೆಸ್ಟ್​ ಮಾಡಲಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ಗ್ರಾಮ ಸೀಲ್​​ಡೌನ್ ಆಗಲಿದೆ. ಆದರೆ ಆಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಟನೆ ಮದ್ಯ ಖರೀದಿ ಮಾಡಲು ಮುಗಿಬಿದ್ದ ಮದ್ಯ ಪ್ರಿಯರನ್ನು ಕಂಡು ಗರಂ ಆದ ಎಸಿ ಲಾಠಿಯಿಂದ ಬಿಸಿ ಮುಟ್ಟಿದ್ದರು.

The post ಗ್ರಾಮದಲ್ಲಿ 89 ಪಾಸಿಟಿವ್​ ಕೇಸ್​​- ಕರ್ಫ್ಯೂ ನಡುವೆಯೂ ಮದ್ಯ ಖರೀದಿಸಲು ಮುಗಿಬಿದ್ದವರಿಗೆ ಲಾಠಿ ರುಚಿ appeared first on News First Kannada.

Source: News First Kannada
Read More