ಧಾರವಾಡ: ದೇವರಿಗೆ ಕೈ ಮುಗಿಯಲು ಬಂದ ವ್ಯಕ್ತಿ  ದೇವರ ಮೂರ್ತಿಯನ್ನೆ ದರೋಡೆ ಮಾಡಿ ಪರಾರಿಯಾದ ವಿಕ್ಷಿಪ್ತ ಘಟನೆಯೊಂದು ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗ್ರಾಮದೇವಿಯ ದೇವಸ್ಥಾನದಲ್ಲಿ ಗ್ರಾಮಸ್ಥರು ಬೆಳ್ಳಿ ಲೇಪಿತ ಗಣೇಶನ ಪ್ರದರ್ಶಿತ ಮೂರ್ತಿಯನ್ನ ಪ್ರತಿಷ್ಟಾಪಿಸಿದ್ದರು. ಈ ವಿಗ್ರಹದ ಮೇಲೆ ಕಳ್ಳನೊಬ್ಬನ ಕಣ್ಣು ಬಿದ್ದಿದ್ದು ಆ ವಿಗ್ರಹ ಶುದ್ಧ ಬೆಳ್ಳಿಯ ಮೂರ್ತಿಯೆಂದು ನಂಬಿ ದರೋಡೆ ಮಾಡಲು ಸಂಚು ರೂಪಿಸಿದ್ದಾನೆ.

ತಡರಾತ್ರಿ ಭಕ್ತರ ಸೋಗಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಕಳ್ಳ ಗ್ರಾಮದೇವತೆಗೆ ಕೈ ಮುಗಿದು ನಂತರ ಅಲ್ಲೇ ಇದ್ದ ಗಣೇಶ ಮೂರ್ತಿಯನ್ನ ಹೊತ್ತೊಯ್ದಿದ್ದಾನೆ. ಆದರೆ ಡರೋಡೆ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಷ್ಟಪಟ್ಟು ಕಳ್ಳತನ ಮಾಡಿದರೂ ಪೇಚಿಗೆ ಸಿಲುಕಿ ಯಾವುದೇ ಪ್ರಯೋಜನವಾಗದೆ ನಾಪತ್ತೆಯಾಗಿದ್ದಾನೆ. ಸದ್ಯ ಅಳ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳನನ್ನ ಹುಡುಕುತಿದ್ದಾರೆ ಎನ್ನಲಾಗಿದೆ.

The post ಗ್ರಾಮದೇವರಿಗೆ ಕೈಮುಗಿದ.. ಬಳಿಕ ಗಣೇಶ ವಿಗ್ರಹವನ್ನೇ ಕದ್ದ appeared first on News First Kannada.

Source: newsfirstlive.com

Source link