ಉಡುಪಿ: ಜಿಲ್ಲೆಯಲ್ಲಿ ಕಠಿಣ ಲಾಕ್​ಡೌನ್​ ನಡುವೆಯೇ ಆಟೋ ಚಾಲಕರೊಬ್ಬರು ನಿಸ್ವಾರ್ಥ ಸೇವೆ ಸಲ್ಲಿಸುತ್ತ ಮಾನವೀಯ ಗುಣವನ್ನ ಮೆರೆಯುತ್ತಿದ್ದಾರೆ.

ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಕೇಸ್​​ಗಳು ಇವೆ. ಹೀಗಾಗಿ ಗ್ರಾಮಗಳನ್ನ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ ಅಂತ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲಾಡಳಿತದ ಆದೇಶವನ್ನ ಗ್ರಾಮಸ್ಥರು ಕೂಡ ‌ಸಹಕರಿಸುತ್ತಿದ್ದಾರೆ.

ಲಾಕ್​ಡೌನ್  ಹಿನ್ನೆಲೆಯಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಕಂಡು ಬಂದ್ರೆ ಆಸ್ಪತ್ರೆಗೆ ಹೋಗುವುದು ಕಷ್ಟ. ಇದನ್ನ ಅರಿತ ರಿಕ್ಷಾ ಚಾಲಕ ಸುನಿಲ್​, ಉಚಿತ ಸೇವೆಯನ್ನ ಶುರು ಮಾಡಿದ್ದಾರೆ. ಅಲೆವೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಯಾರಿಗಾದರೂ ಆಸ್ಪತ್ರೆಗೆ ಹೋಗೋದಿದ್ದರೆ ಉಚಿತವಾಗಿ ಕರೆದುಕೊಂಡು ಹೋಗಿ ಬರುತ್ತಿದ್ದಾರೆ.

The post ಗ್ರಾಮದ ಸಂಕಷ್ಟಕ್ಕೆ ಮಿಡಿದ ಆಟೋ ಚಾಲಕ; ಅನಾರೋಗ್ಯ ಪೀಡಿತರಿಗೆ ನಿತ್ಯವೂ ಉಚಿತ ‘ಆಟೋ ಸೇವೆ’   appeared first on News First Kannada.

Source: newsfirstlive.com

Source link