ಧಾರವಾಡ: ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣ ಉಚಿತ. ಆದರೆ ಇಲ್ಲಿಯೂ ಜನಸಾಮಾನ್ಯರಿಂದ ಹಣ ಸುಲಿಗೆ ಮಾಡುತ್ತಿದ್ದ ಆ್ಯಂಬುಲೆನ್ಸ್ ಹಾಗೂ ಸ್ಮಶಾನದ ಸಿಬ್ಬಂದಿಯ ಮುಖವನ್ನು ನ್ಯೂಸ್‍ಫಸ್ಟ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು ಮಾಡಿತ್ತು. ಸದ್ಯ ನ್ಯೂಸ್‍ಫಸ್ಟ್ ವರದಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಜಗದೀಶ್ ಶೆಟ್ಟರ್ ಅವರು, ಅಕ್ರಮದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.

ನ್ಯೂಸ್‍ಫಸ್ಟ್ ನೊಂದಿಗೆ ಮಾತನಾಡಿದ ಶೆಟ್ಟರ್ ಅವರು, ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ ಕೋವಿಡ್ ರೋಗಿ ಮೃತಪಟ್ಟಿದ್ದರೆ ಅಂತವರ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ಮಾಡಿ ಅಗತ್ಯ ಖರ್ಚನ್ನು ಮಹಾನಗರ ಪಾಲಿಕೆ ಮಾಡಬೇಕು ಎಂದು ನಿರ್ಧಾರಕ್ಕೆ ಬಂದಿದ್ದೇವೆ. ಕಳೆದ ವಾರ ಹು-ಧಾ ಚರ್ಚೆಯಾಗಿ ಘೋಷಣೆ ಮಾಡಿದ್ದೇವೆ. ಜೊತೆಗೆ ಸಶ್ಮಾಶನಕ್ಕೆ ಒಂದು ಆಫೀಸರ್ ನೇಮಿಸಿದ್ದೆ, ನೋಡಲ್ ಅಧಿಕಾರಿ ಸಹ ನೇಮಕ ಮಾಡಿದ್ದೇವು. ಅದರಲ್ಲಿ ಎರಡು ಹುಬ್ಬಳ್ಳಿಯಲ್ಲಿ ಸ್ಮಶಾನ ಮತ್ತು ಧಾರವಾಡದಲ್ಲಿ ಒಂದು ಸಶ್ಮಾನ ಮಾಡಿದ್ದೆವು. ಅವರಿಗೆ ಎಲ್ಲವೂ ಉಚಿತ, ಜನರು ಸಹ ಅದರ ಉಪಯೋಗ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಇಂತಹ ವಿಚಾರದಲ್ಲಿ ಕಾರ್ಪೊರೇಷನ್ ಉಚಿತವಾಗಿ ಮಾಡಿದರು ಕೆಲವರು ಅದನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆದರೆ ಅಮಾಯಕರ ಮೇಲೆ ದೌರ್ಜನ್ಯ ಮಾಡೋದು ಸರಿಯಲ್ಲ. ಕೆಲವರು ಮಾಡೋದು ನಿಮ್ಮ ಸುದ್ದಿವಾಹಿನಿ ಮೂಲಕ ಗೊತ್ತಾಗಿದೆ. ಕೂಡಲೇ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅಂತಹ ಆಸೆಗೆ ಜನರು ಮೋಸ ಹೋಗ್ಬಾರ್ದು. ಅವ್ಯವಹಾರ ನಡೆದರೆ ನಮ್ಮ ಗಮನಕ್ಕೆ ತನ್ನಿ. ಇಂತಹ ಜನ ನಮ್ಮ ಸಮಾಜದಲ್ಲಿ ಇದ್ದಾರೆ. ಗ್ರಾಮೀಣ ಭಾಗದಲ್ಲೂ ಉಚಿತ ಅಂತ್ಯಕ್ರಿಯೆ ಬಗ್ಗೆ ಚಿಂತನೆ ಮಾಡ್ತೀನಿ ಎಂದು ತಿಳಿಸಿದರು.

ಇದನ್ನೂ ಓದಿ: ನ್ಯೂಸ್​​ಫಸ್ಟ್​​ ಸ್ಟಿಂಗ್: ಹೆಣದ ಮೇಲೆ ಹಣ ಮಾಡೋ ಧನಪಿಶಾಚಿಗಳ ಕರಾಳಮುಖ ಬಯಲು

The post ಗ್ರಾಮೀಣ ಭಾಗದಲ್ಲೂ ಉಚಿತ ಅಂತ್ಯಕ್ರಿಯೆ ಬಗ್ಗೆ ಚಿಂತನೆ- ನ್ಯೂಸ್‍ಫಸ್ಟ್ ವರದಿಗೆ ಶೆಟ್ಟರ್ ಪ್ರತಿಕ್ರಿಯೆ appeared first on News First Kannada.

Source: newsfirstlive.com

Source link