ನವದೆಹಲಿ: ಗ್ರಾಮೀಣ ಭಾರತ ಕೊರೊನಾ ವೈರಸ್ ನಿಂದ ಮುಕ್ತವಾಗಬೇಕು. ಹಾಗೆಯೇ ಪ್ರತಿ ಹಳ್ಳಿಗಳನ್ನು ಕೊರೊನಾದಿಂದ ರಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

10 ರಾಜ್ಯದ ಸಿಎಂಗಳ ಜೊತೆ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಕೇಸ್ ಕಮ್ಮಿಯಾಗುಯತ್ತಿದೆ. ಕೊರೊನಾ ಕೇಸ್ ಕಮ್ಮಿಯಾದ್ರೂ ಗಂಭೀರತೆ ಕಮ್ಮಿಯಾಗಬಾರದು. ಕೇಸ್ ಕಮ್ಮಿಯಾಗ್ತಿದ್ದಂತೆ ಜನ ಇನ್ನು ಚಿಂತೆ ಮಾಡೋದು ಬೇಡ ಅಂದುಕೊಳ್ಳುತ್ತಾರೆ. ಆದರೆ ಹಾಗಾಗಲು ಬಿಡಬೇಡಿ ಎಂದು ಹೇಳಿದ್ದಾರೆ.

ಕಳೆದ ಬಾರಿಗಿಂತ ನೀವು ಹೆಚ್ಚು ಕೆಲಸ ಮಾಡುತ್ತಿದ್ದೀರಿ ನಿಮ್ಮ ಸ್ಥಳೀಯ ಅನುಭವದ ಆಧಾರದಲ್ಲಿ ಕ್ರಮ ಕೈಗೊಳ್ಳಿ. ಹೊಸ ಸವಾಲುಗಳ ಜೊತೆ ಇನ್ನಷ್ಟು ಕೆಲಸ ಮಾಡಬೇಕಿದೆ. ನಿಮ್ಮಿಂದ ಹೊಸ ಚಿಂತನೆಗಳು ಬಂದಿವೆ. ಗ್ರಾಮಗಳಲ್ಲಿ ಕೊರೊನಾ ಮುಕ್ತ ಅಗತ್ಯ. ನಿಮ್ಮ ಚಿಂತನೆಗಳಿಂದ ಯಶಸ್ಸು ಕಂಡಿದ್ದೇವೆ. ಹಳ್ಳಿಗಳಲ್ಲಿ ಅಧಿಕಾರಿಗಳಿಂದ ಸಮರ್ಥವಾದ ಕೆಲಸವಾಗುತ್ತಿದ್ದು, ಹಳ್ಳಿಗಳಲ್ಲಿ ನಿಯಮಗಳ ಪಾಲನೆ ಸ್ಪಷ್ಟತೆ ಬೇಕು ಎಂದಿದ್ದಾರೆ.

ಇದೇ ವೇಳೆ ಲಸಿಕೆ ಲಭ್ಯತೆ ಬಗ್ಗೆ 15 ದಿನಕ್ಕ ಮೊದಲೇ ಎಲ್ಲಾ ರಾಜ್ಯಗಳಿಗೆ ತಿಳಿಯಲಿದೆ. ಲಸಿಕೆ ಲಭ್ಯತೆ ಬಗ್ಗೆ ಜನತೆಗೆ ನಿರಂತರವಾಗಿ ಮಾಹಿತಿ ಕೊಡುವ ಕೆಲಸ ಮಾಡಿ. ಅಲ್ಲದೆ ಮಾಸ್ಕ್, ಸ್ಯಾನಿಟೈಸಿಂಗ್ ಕಡಿಮೆಯಾಗಬಾರದು ಎಂದಿದ್ದಾರೆ.

The post ಗ್ರಾಮೀಣ ಭಾರತ ಕೊರೊನಾ ಮುಕ್ತವಾಗ್ಬೇಕು, ಪ್ರತಿ ಹಳ್ಳಿಗಳನ್ನು ಕೋವಿಡ್‍ನಿಂದ ರಕ್ಷಿಸಿ: ಮೋದಿ appeared first on Public TV.

Source: publictv.in

Source link