ಗ್ರಾಮ ಪಂಚಾಯತಿ ಸದಸ್ಯರಿಗೆ ಪ್ರಾಮಾಣಿಕತೆಯ ಪಾಠ ಮಾಡಿದ ಸಿದ್ದರಾಮಯ್ಯ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಗ್ರಾಮ ಪಂಚಾಯತಿ ಸದಸ್ಯರಿಗೆ ತುಂಬಿದ ಸಭೆಯಲ್ಲಿ ಅಧಿಕಾರ, ಪ್ರಾಮಾಣಿಕತೆಯ ಪಾಠ ಮಾಡಿದ್ದಾರೆ.

ನಗರದಲ್ಲಿ ಆಯೋಜಿಸಲಾಗಿದ್ದ ಕುರುಬ ಸಮಾಜ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಭಾಷಣದ ವೇಳೆ ಉಪಸ್ಥಿತರಿದ್ದ ಗ್ರಾಮ ಪಂಚಾಯತಿ ಸದಸ್ಯರಿಗೆ ಅಧಿಕಾರ, ಮತ್ತು ಗ್ರಾಮ ಪಂಚಾಯತಿ ಸದಸ್ಯರ ಪ್ರಮಾಣಿಕತೆಯ ಕುರಿತು ತಿಳಿ ಹೇಳಿದ್ದಾರೆ.

ಭಾಷಣದ ವೇಳೆ ಸಂವಿಧಾನದ 73, 74 ನೇ ತಿದ್ದುಪಡಿ ಯಾವಾಗ ಮಾಡಿದ್ದು ಗೊತ್ತಿರೋರು ಕೈ ಎತ್ತಿ ಎಂದು ವಿಪಕ್ಷ ನಾಯಕ ಹೇಳಿದಾಗ ಬೆರಳಣಿಕೆ ಮಂದಿಯಷ್ಟು ಮಾತ್ರ ಕೈ ಎತ್ತಿದ್ದಾರೆ. ಕೈ ಎತ್ತಿದ ಓರ್ವ ಗ್ರಾಮ ಪಂಚಾಯತಿ ಸದಸ್ಯನಿಗೆ ಪ್ರಶ್ನೆ ಕೇಳಿದ್ದು ತಬ್ಬಿಬ್ಬಾದ ಗ್ರಾಪಂ ಸದಸ್ಯ ಪೇಚಿಗೆ ಸಿಲುಕಿದ್ದಾನೆ. ಇನ್ನು ತಮ್ಮ ಹಾಸ್ಯಾತ್ಮಕ ಶೈಲಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಗೊತ್ತಿಲ್ಲದೆ ಸುಮ್ನೆ ಕೈ ಎತ್ತಿಬಿಟ್ಟ, ಕೂತ್ಕೋ’ಎಂದಾಗ ತುಂಬಿದ ಸಭೆ ನಗೆಗಡಲಲ್ಲಿ ತೇಲಿತ್ತು.

News First Live Kannada

Leave a comment

Your email address will not be published. Required fields are marked *