ಬೆಂಗಳೂರು: ಇಂದಿನಿಂದ ಮಾಲ್ ಗಳು ಪುನಾರಂಭವಾಗಲಿದೆ. ಈಗಾಗಲೇ ಮಾಲ್ ಗಳು ಪ್ಲೋರ್ ಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಶೋ ರೂಂ ತೆರೆದುಕೊಂಡು ಕೂತಿದೆ.

ಗ್ರಾಹಕರನ್ನು ಸೆಳೆಯಲು ಈಗ ಬಗೆ ಬಗೆಯ ಆಫರ್ ಗಳನ್ನು ಹಾಕಲೇಬೇಕು. ಬೆಂಗಳೂರಿನ ಗರುಡಾ ಮಾಲ್ ಮಾತ್ರ ಡಿಫರೆಂಟ್ ಆಗಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಆಸ್ಪತ್ರೆಯೊಂದರ ಸಹಭಾಗಿತ್ವದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಶುರುಮಾಡಿದೆ.

ಈಗಾಗಲೇ ಮಾಲ್ ಸಿಬ್ಬಂದಿಗೆ ಉಚಿತವಾಗಿ ವ್ಯಾಕ್ಸಿನೇಷನ್ ನೀಡಲಾಗಿದೆ. ಮಾಲ್ ಗೆ ಬರುವ ಗ್ರಾಹಕರು ಕೂಡ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಬಹುದು. ಪಿಪಿಇ ಕಿಟ್ ಹಾಕಿಕೊಂಡು ವ್ಯಾಕ್ಸಿನೇಷನ್ ಡ್ರೈವ್ ಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಲ್ ಮಾಡಿಕೊಂಡಿದೆ. ಇದನ್ನೂ ಓದಿ: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್‍ವೈ ಭೇಟಿಯಾದ ಹೆಚ್‍ಡಿಕೆ

ಜನರಿಗೆ ಲಸಿಕೆ ಸಿಗಲಿ ಕೊರೋನಾ ದೂರವಾಗಲಿ ಅಂತಾ ಈ ಡ್ರೈವ್ ಹಮ್ಮಿಕೊಂಡಿರೋದಾಗಿ ಮಾಲ್ ನ ಸಿಇಒ ನಂದೀಶ್ ಹೇಳಿದ್ರು. ಮಾಲ್ ಎಂಟ್ರಿ ಗೂ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿದ್ದು, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಇಂದಿನಿಂದ ಮಾಲ್ ಗಳು ಕಾರ್ಯಾರಂಭ ಮಾಡಿದೆ.

The post ಗ್ರಾಹಕರನ್ನು ಸೆಳೆಯಲು ಸಂಜೀವಿನಿ ಆಫರ್ – ಮಾಲ್‍ನ ನಯಾ ಐಡಿಯಾ appeared first on Public TV.

Source: publictv.in

Source link