ತುಮಕೂರು: ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್‌ಗಳನ್ನು ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ 6 ಮೆಡಿಕಲ್ ಸ್ಟೋರ್‌ಗಳ ವಿರುದ್ಧ ಮೊಕದ್ದಮೆ ದಾಖಲಿಸಿದೆ.

ಕಾನೂನು ಮಾಪನಶಾಸ್ತ್ರ ಇಲಾಖೆಯು ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಈ ಮೊಕದ್ದಮೆ ದಾಖಲಿಸಲಾಗಿದೆ. ಸಹಾಯಕ ನಿಯಂತ್ರಕರ ನೇತೃತ್ವದಲ್ಲಿ ತುಮಕೂರು ಉಪವಿಭಾಗ-1 ಹಾಗೂ 2, ತಿಪಟೂರು ಉಪವಿಭಾಗ ಮತ್ತು ಮಧುಗಿರಿ ಉಪವಿಭಾಗದ ನಾಲ್ಕು ನಿರೀಕ್ಷಕರ ತಂಡ ತಪಾಸಣೆ ನಡೆಸಿದ್ದು, ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ 6 ಔಷಧಿ ಮಳಿಗೆ ಸೇರಿದಂತೆ ಪೊಟ್ಟಣ ಸಾಮಾಗ್ರಿ ರೂಪದ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ 4 ದಿನಸಿ ಅಂಗಡಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಒಟ್ಟಾರೆ 26 ಔಷಧಿ ಮಳಿಗೆ, 64 ದಿನಸಿ ಅಂಗಡಿ ಹಾಗೂ 14 ನ್ಯಾಯ ಬೆಲೆ ಅಂಗಡಿಗಳನ್ನು ತಪಾಸಣೆ ಮಾಡಲಾಗಿದೆ. ತಪಾಸಣೆ ಸಂದರ್ಭದಲ್ಲಿ ಮೆಡಿಕಲ್ ಸ್ಟೋರ್ ಗಳಿಂದ 7500 ರೂ. ಹಾಗೂ ದಿನಸಿ ಅಂಗಡಿಗಳಿಂದ 4500 ರೂ.ಗಳನ್ನು ವಸೂಲಿ ಮಾಡಲಾಗಿದೆ.

The post ಗ್ರಾಹಕರಿಂದ ಸುಲಿಗೆ – 6 ಮೆಡಿಕಲ್ ಸ್ಟೋರ್ ವಿರುದ್ಧ ಕೇಸ್ ದಾಖಲು appeared first on Public TV.

Source: publictv.in

Source link