ನವದೆಹಲಿ: ದೇಶದ ಜನಪ್ರಿಯ ಡೈರಿ ಕೋ-ಅಪರೇಟಿವ್ ಸೊಸೈಟಿ ಅಮುಲ್​ ತನ್ನ ಗ್ರಾಹಕರಿಗೆ ಶಾಕ್ ನೀಡಿದ್ದು, ಅಮುಲ್​ ಬ್ರಾಂಡ್​ನಡಿ ಲಭ್ಯವಿರುವ ಎಲ್ಲಾ ಬಗೆಯ ಹಾಲಿನಬೆಲೆಯನ್ನ ಪ್ರತೀ ಲೀಟರ್​​ಗೆ ರೂಪಾಯಿ ಹೆಚ್ಚಳ ಮಾಡಿದೆ. ಅಮುಲ್​​ನ ಈ ಪರಿಷ್ಕೃತ ದರವು ನಾಳೆಯಿಂದಲೇ ಜಾರಿಗೆ ಬರಲಿದೆ.

ಅಮುಲ್​ ಬ್ರಾಂಡ್​ನಡಿ ಸಿಗುವ ವಿವಿಧ ಬಗೆಯ ಹಾಲು ಮತ್ತು ಪ್ರಾಡೆಕ್ಟ್ಸ್​ನ ದರವನ್ನ ಹೆಚ್ಚಳ ಮಾಡಿದೆ. ಅದರಲ್ಲಿ ಹಾಲಿನ ದರವನ್ನ ಲೀಟರ್​ಗೆ ಎರಡು ರೂಪಾಯಿಯ ದೇಶದಾದ್ಯಂತ ಗುಜರಾತ್ ಕೊ-ಅಪರೇಟೀವ್ ಮಾರ್ಕೆಟಿಂಗ್ ಫೆಡರೇಷನ್ (GCIMMF) ಹೆಚ್ಚಿಸಿದೆ. ಡೈರಿ ಉದ್ಯಮದ ಇನ್​​ಪುಟ್​ ಕಾಸ್ಟ್​ಗಳ ಬೆಲೆ ಹೆಚ್ಚಾಗಿರೋದ್ರಿಂದ ಹಾಲಿನ ದರ ಏರಿಕೆಗೆ ಕಾರಣ ಅಂತಾ ಅಮುಲ್ ತಿಳಿಸಿದೆ. ಇನ್ನು ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಅಮುಲ್ ತನ್ನ ಉತ್ಪನ್ನಗಳ ಬೆಲೆಯನ್ನ ಏರಿಕೆ ಮಾಡಿದೆ ಅಂತಾ ಹೇಳಿಕೊಂಡಿದೆ.

ಪರಿಷ್ಕೃತ ದರದ ಪ್ರಕಾರ ಯಾವುದಕ್ಕೆ ಎಷ್ಟು ರೂಪಾಯಿ

  • 500 ಎಂಎಲ್​ ಇರುವ ಅಮುಲ್​ ಗೋಲ್ಡ್​ ದರ 29 ರೂಪಾಯಿ
  • 500 ಎಂಎಲ್​ ಹೊಂದಿರುವ ಅಮುಲ್ ತಾರಾದ ಬೆಲೆ 23 ರೂಪಾಯಿ
  • 500 ಎಂಎಲ್​ ಹೊಂದಿರುವ ಅಮುಲ್ ಶಕ್ತಿ 26 ರೂಪಾಯಿ

The post ಗ್ರಾಹಕರಿಗೆ ಶಾಕ್ ಕೊಟ್ಟ ಅಮುಲ್.. ನಿರೀಕ್ಷೆಗೂ ಮೀರಿ ಹಾಲಿನ ದರ ಏರಿಕೆ appeared first on News First Kannada.

Source: newsfirstlive.com

Source link