ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ ಹತ್ಯೆ ಪ್ರಕರಣ: ಪತಿಯ ಸಾವಿನ ನ್ಯಾಯ ಕೇಳಿ ಅಲೆದಾಡುತ್ತಿದ್ದ ದೀಪಕ್ ಪತ್ನಿ ಆತ್ಮಹತ್ಯೆ | Gram Panchayat Member Deepak Murder case: Deepak wife committed suicide


ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ಸಾವಿಗೆ ನ್ಯಾಯ ಕೇಳುತ್ತಾ ಅಲೆದಾಡುತ್ತಿದ್ದ ದೀಪಕ್ ಪತ್ನಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ ಹತ್ಯೆ ಪ್ರಕರಣ: ಪತಿಯ ಸಾವಿನ ನ್ಯಾಯ ಕೇಳಿ ಅಲೆದಾಡುತ್ತಿದ್ದ ದೀಪಕ್ ಪತ್ನಿ ಆತ್ಮಹತ್ಯೆ

ಸಾಂಧರ್ಬಿಕ ಚಿತ್ರ

TV9kannada Web Team

| Edited By: Vivek Biradar

Sep 28, 2022 | 9:24 PM
ಧಾರವಾಡ: ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ (Deepak Pathadari) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ (Husband) ಸಾವಿಗೆ ನ್ಯಾಯ ಕೇಳುತ್ತಾ ಅಲೆದಾಡುತ್ತಿದ್ದ ದೀಪಕ್ ಪತ್ನಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ದೀಪಕ್ ಹತ್ಯೆ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಪತಿಯ ಸಾವಿಗೆ ನ್ಯಾಯಕ್ಕಾಗಿ ಅಲೆದಾಡುತ್ತಿದ್ದ ಪುಷ್ಪಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಷ್ಪ ನವನಗರದ ಸಂಬಂಧಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದಾರೆ. ಪುಷ್ಪಾ ಆತ್ಮಹತ್ಯೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

TV9 Kannada


Leave a Reply

Your email address will not be published.