ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡಿ, ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ ರಿಯಲ್ ಜೋಡಿಗಳ ರಿಯಾಲಿಟಿ ಶೋ ರಾಜಾ ರಾಣಿ. 12 ಜೋಡಿಗಳ ನೋವು-ನಲಿವುಗಳನ್ನ ಜನರ ಮುಂದೆ ಪ್ರಸ್ತುತಪಡೆಸಿ, ಅದು ಸೆಲೆಬ್ರಿಟಿ ಕಪಲ್ ಆಗಿರಲಿ. ಇಲ್ಲ ಸಾಮಾನ್ಯ ಜೋಡಿಯೇ ಆಗಿರಲಿ ಎಲ್ಲ ಸಂಸಾರದ ಸಾರ ಹೊಂದಾಣಿಕೆ ಎಂಬ ಸೂಕ್ಷ್ಮತೆಯನ್ನ ಮನರಂಜನೆಯ ಮೂಲಕ ಜನರಿಗೆ ತಿಳಿಸಿದ ಕಾರ್ಯಕ್ರಮವಿದು.
ಒಂದೊಂದು ಜೋಡಿ ಹಿಂದೆ ಒಂದೊಂದು ಕತೆ ಇದ್ದು, ಪ್ರತಿ ಸಂಚಿಕೆ ಕೂಡ ಸಾಕಷ್ಟು ವಿಶೇಷವಾಗಿ ಮೂಡಿಬಂದಿದ್ದು, ಕಾರಣಂತರಗಳಿಂದ ಕೆಲ ಜೋಡಿಗಳು ಎಲಿಮಿನೇಶನ್ ಮುಂಚೆನೇ ಹೊರ ನಡೆಯಬೇಕಾಯಿತು. ಸದ್ಯ ಈ ಎಲ್ಲಾ ಅಡೆತಡೆಗಳನ್ನ ಎದುರಿಸಿ ಈಗ 6 ಜೋಡಿಗಳು ಗ್ರ್ಯಾಂಡ್ ಫಿನಾಲೆ ತಲುಪಿವೆ.
ರಾಜಾ-ರಾಣಿ ಶೋನ ನವ ದಂಪತಿಗಳಂದರೆ ಱಪರ್ ಚಂದನ್ ಹಾಗೂ ನಿವೇದಿತಾ. ಈ ಮುದ್ದಾದ ಜೋಡಿ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಫೇಮಸ್. ಇವರನ್ನ ಸೆಲೆಬ್ರೆಟಿಯಾಗಿ ನೋಡಿದ್ದ ಜನರಿಗೆ ರಿಯಲ್ನಲ್ಲಿ ಚಂದನ್-ನಿವಿ ಹೇಗಿರ್ತಾರೆ. ಅವರ ಇಷ್ಟ ಕಷ್ಟಗಳನೇ ಎಂಬುವುದನ್ನ ತೊರಿಸಿಕೊಟ್ಟಿದ್ದು ರಾಜಾ-ರಾಣಿ. ಈ ಶೋ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದ್ರು, ಚಂದನ್ ತಮ್ಮ ಪ್ರೀತಿಯ ಪತ್ನಿಗಾಗಿ ಹಾಡೊಂದನ್ನ ಈ ಶೋ ಮೂಲಕ ಡೆಡಿಕೇಟ್ ಮಾಡಿದ್ರು. ಸದ್ಯ ಆ ಹಾಡು ಮಿಲಿಯನ್ ವಿವ್ಸ್ ಕಂಡು ಜನ್ರ ಪ್ರೀತಿ ಗಳಿಸಿದೆ.
ಶ್ರೀಕಾಂತ್-ಹರಿಣಿ ಜೋಡಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಹರಿಣಿ ಅವರು ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರೀಯರಾಗಿದ್ದಾರೆ. ಆದರೆ ಶ್ರೀಕಾಂತ್ ಅವರು ತಮ್ಮದೇ ಶೈಲಿಯಲ್ಲಿ ಕಾಮಿಡಿ ಮಾಡುತ್ತಾ..ಪತ್ನಿಯನ್ನ ರೇಗಿಸ್ತಾ.. ಜೀವನದಲ್ಲಿ ಏರಿಳತಗಳು ಎಷ್ಟೇ ಇದ್ರು ಹೊಂದ್ಕೊಂಡು ಹೊದರೆ ಆ ಮನೆ ಸ್ವರ್ಗ ಅನ್ನೋದನ್ನ ತೊರಿಸಿಕೊಟ್ಟಿದೆ ಈ ಜೋಡಿ.
ರಾಜಾ-ರಾಣಿ ಶೋನ ಚಂದದ ಜೋಡಿ ಅಂದ್ರೇ ನಮ್ಮ ಮುರುಗಾನಂದ-ಇಶಿತಾ. ಅಗ್ನೀಸಾಕ್ಷಿ ಸೀರಿಯಲ್ ಮೂಲಕ ಫೇಮಸ್ ಆಗಿದ್ದವರು ಇಶಿತಾ. ಇನ್ನೂ ಮುರುಗ ಅವರು ತಮ್ಮ ಡ್ಯಾನ್ಸ್ ಮೂಲಕ ಇಂಡಸ್ಟ್ರೀಯಲ್ಲಿ ನೇಮ್ ಫೇಮ್ ಪಡೆದವರು. ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿದ ಈ ಜೋಡಿಯನ್ನ ಜನರಿಗೆ ಮತ್ತಷ್ಟು ಹತ್ತಿರ ಮಾಡಿದ್ದು ರಾಜಾ-ರಾಣಿ. ಈ ಜೋಡಿ ವೇದಿಕೆ ಮೇಲೆ ಬಂದ್ರೇ ಸಾಕು ಇಡೀ ವೇದಿಕೆ ನಗುವಿನಿಂದ ಆವರಿಸಿಕೊಳ್ಳುತ್ತದೆ.
ಇನ್ನೂ 25 ವರ್ಷದಿಂದ ಪ್ರೀತಿಸಿ ಮದುವೆಯಾದ ವಿಭಿನ್ನ ಜೋಡಿ ಅಂದರೆ ನಮ್ಮ ಗೊಂಬೆ ನೇಹಾ ಹಾಗೂ ಹ್ಯಾಂಡ್ಸಮ್ ಚಂದನ್. ಇವರಿಬ್ಬರ ಬಾಂಧವ್ಯ, ಹೊಂದಾಣಿಕೆ ನೋಡಿ ಅದೇಷ್ಟೊ ಜೋಡಿಗಳು ಆದರೆ ಇವರಿಬ್ಬರ ತರಹ ಇರ್ಬೇಕು ಅನ್ಕೋಂಡಿರ್ತಾರೆ ಅಷ್ಟು ಮುದ್ದು ಈ ಜೋಡಿ.
ಸಲ್ಲಿ-ಲಲ್ಲಿ ಮೂಲಕ ಹೆಸರು ಮಾಡಿದವರು ರೂಪ ಹಾಗೂ ಪ್ರಶಾಂತ್.. ತಮ್ಮದೇ ಆದ ವಿಭಿನ್ನ ಶೈಲಿಯ ಮೂಲಕ ಜನರನ್ನ ಆಕರ್ಷಿಸಿದ್ದಾರೆ. ಇನ್ನೂ ರೂಪ ಅವರು ತಮ್ಮ ಪತಿಯ ವಿದ್ಯಾಭ್ಯಾಸಕ್ಕಾಗಿ ಮಾಡಿದ ತ್ಯಾಗ ಎಲ್ಲರ ಮನಮುಟ್ಟುವಂತಿತ್ತು.
ತುಂಬಾ ವಿಶೇಷವಾದ ಜೋಡಿ ಅಂದರೆ ಪವನ್ ಹಾಗೂ ಸುಮನ್. ಪ್ರೀತಿ ನಿಜವಾಗಿದ್ದರೇ ಅಷ್ಠ ದೇವತೆಗಳು ಅಸ್ತು ಎನ್ನುತ್ತಾರೆ ಅನ್ನೋದಕ್ಕೆ ಈ ಜೋಡಿನೇ ಸಾಕ್ಷಿ. ಪ್ರೀತಿಗೆ ಭಾಷೆ, ಗಡಿ ಯಾವುದು ಮುಖ್ಯವಾಗುವುದಿಲ್ಲ. ನಿಷ್ಕಲ್ಮಶವಾದ ಪ್ರೇಮ ಒಂದಿದ್ದರೆ ಸಾಕು ಎಂಬುವುದನ್ನ ತೊರಿಸಿಕೊಟ್ಟಿದ್ದಾರೆ ಸ್ಟಾಂಡಪ್ ಕಾಮಿಡಿಯನ್ ಪವನ್ ಹಾಗೂ ಸುಮನ್. ಒಟ್ಟಿನಲ್ಲಿ ಈ 6 ಜೋಡಿಗಳು ಗ್ರ್ಯಾಂಡ್ ಫಿನಾಲೆ ತಲುಪಿದ್ದು, ಯಾವ ಜೋಡಿ ರಾಜಾ-ರಾಣಿ ಕೀರಿಟ ಧರಿಸಲಿದೇ ಎಂಬ ಕೂತುಹಲ ಮೂಡಿದೆ.