ಅಮೂಲ್ಯ ಜಗದೀಶ್.. ಕನ್ನಡ ಚಿತ್ರರಂಗದ ಐಶು.. ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಬಾಲ ನಟಿಯಾಗಿ ಪಾದಾರ್ಪಣೆ ಮಾಡಿ ಒಂಬಂತನೇ ಕ್ಲಾಸ್ ಓದುವಾಗಲೇ ಹೀರೋಯಿನ್ ಪಟ್ಟವೇರಿದವರು ಅಮೂಲ್ಯ. ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಮಿಂಚುತ್ತಿದ್ದ ಅಮೂಲ್ಯ 2017ರಲ್ಲಿ ಜಗದೀಶ್ ಅವರನ್ನ ಲವ್ ಕಮ್ ಅರೆಂಜ್ ಮ್ಯಾರೇಜ್ ಆದ್ರು.
ಮದುವೆ ನಂತರ ನಟನೆಯಿಂದ ದೂರನೇ ಉಳಿಸಿದ್ದ ಅಮೂಲ್ಯ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾನೇ ಇದ್ರು. ಈಗ ಹೊಸ ಸಂತೋಷದ ವಿಚಾರವನ್ನ ಅಮೂಲ್ಯ ನೀಡಿದ್ದಾರೆ. ಹೊಸ ವರ್ಷಕ್ಕೆ ಅಂದ್ರೆ 2022ರ ಬೆಸಿಗೆಕಾಲಕ್ಕೆ ಅಮೂಲ್ಯ-ಜಗದೀಶ್ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆಯಂತೆ.
ಈ ಬಗ್ಗೆ ಸ್ವತಃ ಅಮೂಲ್ಯ ಜಗದೀಶ್ ಅವರೇ ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ. ಅಮೂಲ್ಯ ಮತ್ತು ಜಗದೀಶ್ ತಂದೆ ತಾಯಿ ಆಗ್ತಿರೋ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.