ಗ್ಲಾಸ್ ಸ್ಲಾಬ್ ಅನ್ಲೋಡ್ ವೇಳೆ ಅವಘಡ: ಆಟೋ ಚಾಲಕ ಶಂಕರ್ ಸಾವು | Auto driver died while unloading glass slab bikasipura


ಅಮೃತಹಳ್ಳಿಯ ಗೀತಾ ಗ್ಲಾಸ್ ಅಂಡ್ ಹಾರ್ಡವೇರ್ ಮತ್ತು ವಸಂತಪುರದ ಗಣೇಶ್ ಗ್ಲಾಸ್ ಅಂಡ್ ಫ್ಲೈವುಡ್ ಮಾಲೀಕರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಮೃತ ಶಂಕರ್ ಪತ್ನಿ ಮಾಲಾ ಎಫ್ಐಆರ್ ದಾಖಲಿಸಿದ್ದಾರೆ.

ಗ್ಲಾಸ್ ಸ್ಲಾಬ್ ಅನ್ಲೋಡ್ ವೇಳೆ ಅವಘಡ: ಆಟೋ ಚಾಲಕ ಶಂಕರ್ ಸಾವು

ಸಾಂಕೇತಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಗ್ಲಾಸ್ ಸ್ಲಾಬ್ ಗಳು ಅನ್ಲೋಡ್ ಮಾಡುವಾಗ ಅವಘಡ ಸಂಭವಿಸಿ ಆಟೋ ಚಾಲಕ ಮೃತಪಟ್ಟ ಘಟನೆ ಇಂದು ಸಂಜೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ವಸಂತಪುರ ರಸ್ತೆಯ ಬಿಕಾಸಿಪುರದಲ್ಲಿ ನಡೆದಿದೆ. ಅಮೃತಹಳ್ಳಿ ನಿವಾಸಿ ಲಗೇಜ್ ಆಟೋ ಚಾಲಕ ಶಂಕರ್(34) ಮೃತ ದುರ್ದೈವಿ.

ಗ್ಲಾಸ್ ಸ್ಲಾಬ್ ಗಳು ಅನ್ಲೋಡ್ ಮಾಡುವ ವೇಳೆ ಗ್ಲಾಸ್ ಸ್ಲ್ಯಾಬ್ ಗಳು ಏಕಾಏಕಿ ಮುರಿದು ಬಿದ್ದಿವೆ. ಗ್ಲಾಸ್ ಸ್ಲ್ಯಾಬ್ ಗಳಿಗೆ ಸಿಕ್ಕಿ ಆಟೋ ಚಾಲಕ ಉಸಿರಾಡಲಾಗದೆ ನರಳಾಡಿ ಮೃತಪಟ್ಟಿದ್ದಾರೆ. ಚಾಲಕ ಶಂಕರ್ ನರಳಾಡ್ತಿರುವ ವಿಡಿಯೋ ಲಭ್ಯವಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿ ಇದ್ದ ಸ್ಥಳೀಯರು ರಕ್ಷಿಸಲು ಯತ್ನಿಸಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಶಂಕರ್ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಮೃತಹಳ್ಳಿಯ ಗೀತಾ ಗ್ಲಾಸ್ ಅಂಡ್ ಹಾರ್ಡವೇರ್ ಮತ್ತು ವಸಂತಪುರದ ಗಣೇಶ್ ಗ್ಲಾಸ್ ಅಂಡ್ ಫ್ಲೈವುಡ್ ಮಾಲೀಕರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಮೃತ ಶಂಕರ್ ಪತ್ನಿ ಮಾಲಾ ಎಫ್ಐಆರ್ ದಾಖಲಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *