ಘನಘೋರ ತಪ್ಪನ್ನು ಒಪ್ಪಿಕೊಂಡ ಆ್ಯಸಿಡ್ ನಾಗೇಶ, ಆಸ್ಪತ್ರೆಯಲ್ಲಿ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ ಭಯಾನಕ ಕಥನ | Acid nagesh revelation about his acid attack cruelty on a girl in kamakshipalya bangalore


ಘನಘೋರ ತಪ್ಪನ್ನು ಒಪ್ಪಿಕೊಂಡ  ಆ್ಯಸಿಡ್ ನಾಗೇಶ, ಆಸ್ಪತ್ರೆಯಲ್ಲಿ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ ಭಯಾನಕ ಕಥನ

ಆರೋಪಿ ಆ್ಯಸಿಡ್ ನಾಗೇಶ್

Acid nagesh: ಆ್ಯಸಿಡ್ ಹಾಕಿ ಪ್ರತಿಕ್ಷಣ ಸತ್ತು ಬದುಕ್ತಿದ್ದೇನೆ. ನಾನು ಯುವತಿ‌ ಕಾಲೇಜಿನಲ್ಲಿದ್ದಾಗ್ಲೇ ಲವ್ ಮಾಡಿದ್ದೆ. ಕಾಲೇಜಿನಲ್ಲೂ ಕೂಡ ಯುವತಿಯನ್ನ ಫಾಲೋ‌ ಮಾಡ್ತಿದ್ದೆ. ಯಾರಾದ್ರು ನನ್ನ ಹುಡುಗಿ ಮೇಲೆ ಕಣ್ಣಾಕಿದ್ರೆ ವಾರ್ನಿಂಗ್ ಕೊಡ್ತಿದ್ದೆ. ಒನ್ ಸೈಡ್ ಲವ್ವು ಅಂತ ಗೊತ್ತಾಗ್ತಿದ್ದಂತೆ ಹುಚ್ಚನಾಗಿಬಿಟ್ಟಿದ್ದೆ.

ಬೆಂಗಳೂರು: ಗುಂಡೇಟು ರುಚಿ ನೋಡುವವರೆಗೂ ತಾನು ಮಾಡಿದ್ದೇ ಸರಿ ಎಂದು, ಘನಘೋರ ಅಪರಾಧವೆಸಗಿದ್ದರೂ (Acid attack) ಭಂಡತನ ಪ್ರದರ್ಶಿಸಿದ್ದ ಆ್ಯಸಿಡ್ ನಾಗ ಅಂದರೆ ಕಾಮಾಕ್ಷಿಪಾಳ್ಯದಲ್ಲಿ ಯುವತಿಯ ಮೇಲೆ ಆ್ಯಸಿಡ್ ಅಟ್ಯಾಕ್ ಮಾಡಿದ್ದ ಪಾತಕಿ ಆ್ಯಸಿಡ್ ನಾಗೇಶ್  (Acid Nagesh) ಇದೀಗ ಆಸ್ಪತ್ರೆಯ ಬೆಡ್​ ಮೇಲೆ ಮತ್ತಷ್ಟು ಮೆತ್ತಗಾಗಿದ್ದಾನೆ. ಗುಂಡೇಟು ತಿಂದು ಮಲಗಿರುವ ಆರೋಪಿ ಆ್ಯಸಿಡ್ ನಾಗೇಶ್ ಕಾಮಾಕ್ಷಿಪಾಳ್ಯ ಪೊಲೀಸರ (Kamakshipalya Police) ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸ್ ಕಸ್ಟಡಿಯಲ್ಲಿ ನಾಗೇಶ ಏನ್ ಹೇಳ್ದಾ ಗೊತ್ತಾ..?

ನಾನು ದೊಡ್ಡ ತಪ್ಪೇ ಮಾಡ್ದೆ, ಆ್ಯಸಿಡ್ ಹಾಕಬಾರದಿತ್ತು. ಕನಸು-ಮನಸಲ್ಲೂ ಯೋಚ್ನೆ ಮಾಡದ್ದನ್ನ ಮಾಡಿಬಿಟ್ಟೆ. ಸಾರಿ ಸರ್, ಸಾರಿ. ನಾನೇ ಪಾಪಿ, ನಾನೇ ಪಾಪಿ ಎಂದು ಹಲಬುತ್ತಾ, ಕಣ್ಣೀರು ಹಾಕ್ತಿದ್ದಾನೆ ಆ್ಯಸಿಡ್ ನಾಗ. ಕಾಮಾಕ್ಷಿಪಾಳ್ಯ ಪೊಲೀಸ್ರ ಮುಂದೆ ತಲೆತಲೆ ಚಚ್ಚಿಕೊಳ್ತಾ ಕಣ್ಣೀರಿಡ್ತಿರೋ ನಾಗ ಇನ್ನೂ ಏನೆಲ್ಲಾ ಹೇಳಿದ್ದಾನೆಂದರೆ ಆ್ಯಸಿಡ್ ಹಾಕೋ ಮನಸ್ಸು ನನಗಿರಲಿಲ್ಲ. ನಾನು ಪ್ರೀತಿಸಿದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಅಂತಾ ಹೀಗ್ ಮಾಡ್ದೆ ಎಂದಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆಕೆಯನ್ನ ಮದ್ವೆಯಾಗೋ ಅರ್ಹತೇನೂ‌ ನನಗಿಲ್ಲ

ಆದ್ರೆ, ಇದೀಗ ಆ್ಯಸಿಡ್ ಹಾಕಿ ಪ್ರತಿಕ್ಷಣ ಸತ್ತು ಬದುಕ್ತಿದ್ದೇನೆ. ನಾನು ಯುವತಿ‌ ಕಾಲೇಜಿನಲ್ಲಿದ್ದಾಗ್ಲೇ ಲವ್ ಮಾಡಿದ್ದೆ. ಕಾಲೇಜಿನಲ್ಲೂ ಕೂಡ ಯುವತಿಯನ್ನ ಫಾಲೋ‌ ಮಾಡ್ತಿದ್ದೆ. ಯಾರಾದ್ರು ನನ್ನ ಹುಡುಗಿ ಮೇಲೆ ಕಣ್ಣಾಕಿದ್ರೆ ವಾರ್ನಿಂಗ್ ಕೊಡ್ತಿದ್ದೆ. ಒನ್ ಸೈಡ್ ಲವ್ವು ಅಂತ ಗೊತ್ತಾಗ್ತಿದ್ದಂತೆ ಹುಚ್ಚನಾಗಿಬಿಟ್ಟಿದ್ದೆ. ಅವ್ಳಿಲ್ದೆ ಒಂದ್ ಸೆಕೆಂಡ್ ಕೂಡ ಇರೋಕ್ ಆಗ್ತಿರ್ಲಿಲ್ಲ‌. ನನ್ನನ್ನ ಆಕೆ ಇಷ್ಟ ಪಟ್ಟಿಲ್ಲ ಎಂದು ಗುತ್ತಾದ ಕೂಡಲೇ ಕುಡಿತವೇ ಜೀವನವಾಯ್ತು.

ನಾನು ತಪ್ಪು ಮಾಡ್ದೇ ಸರ್, ದೇವ್ರು ಅದಕ್ಕೆ ನಿಮ್ಮ ಕೈಯಿಂದ ಶಿಕ್ಷೆ ಕೊಡಿಸ್ಬಿಟ್ಟ. ಗುಂಡಾರ್ಸಿ ಒಳ್ಳೆ‌ ಕೆಲ್ಸಾನೇ ಮಾಡಿದ್ರಿ ಸರ್. ಈ ಕಾಲುಮುರಿದಿರೋ ಶಿಕ್ಷೆ ಕಡಿಮೆಯೇ? ನನಗೆ ಗಲ್ಲೇ ಅಂತಿಮ. ನನ್ನ ಕಾಲಿಗೆ ಗುಂಡಾರ್ಸೋ‌ ಬದ್ಲು ನನ್ನೆದೆಗೆ ಗುಂಡಾರ್ಸಿದ್ರೆ ಒಳ್ಳೆದಿರ್ತಿತ್ತು ಸರ್. ಪ್ಲೀಸ್ ಏನಾದ್ರು ಮಾಡಿ ಸರಿಯಾದ ಶಿಕ್ಷೆ ಸಿಗೋ‌ ಹಾಗ್ ಮಾಡಿ ಸರ್. ಮುಂದಿನ ದಿನದಲ್ಲಿ ಸಮಾಜದಲ್ಲಿ ಒಳ್ಳೆ ವ್ಯಕ್ತಿಯಾಗಿರ್ತೀನಿ ಸರ್. ಆಕೆಯನ್ನ ಮದ್ವೆಯಾಗೋ ಅರ್ಹತೇನೂ‌ ನನಗಿಲ್ಲ… ಹೀಗೆ ಇಷ್ಟೆಲ್ಲಾ ವಿಚಾರವನ್ನ ಆ್ಯಸಿಡ್ ನಾಗ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಗೆ ರೂಪದಲ್ಲಿ ಹೇಳಿಕೊಂಡಿದ್ದಾನೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *