ಮುಂಬಯಿ : ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಧರಿಸಿದ ಶೂನಲ್ಲಿದ್ದ ವಿಶೇಷ ಸಂದೇಶವೊಂದು ಇದೀಗ ಭಾರೀ ಸುದ್ದಿಯಾಗಿದೆ.

ಹೌದು, ರೋಹಿತ್‌ ಒಂದು ಕೊಂಬಿನ ಘೇಂಡಾಮೃಗಗಳ ಉಳಿವಿಗಾಗಿ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ತಮ್ಮ ಶೂ ಮೇಲೆ “ಘೇಂಡಾಮೃಗಗಳನ್ನು ಉಳಿಸಿ’ ಎನ್ನುವ ಸಂದೇಶ ಬರೆದು ಮೈದಾನಕ್ಕಿಳಿದಿದ್ದರು.

ಈ ಬಗ್ಗೆ ರೋಹಿತ್‌ ಟ್ವೀಟ್‌ ಮಾಡಿದ್ದು, “ಕ್ರಿಕೆಟ್‌ ಆಡುವುದು ಮತ್ತು ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿಸುವುದು ನನ್ನ ಕನಸಾಗಿದೆ. ಭಾರತದಲ್ಲಿರುವ ಒಂದು ಕೊಂಬಿನ ಘೇಂಡಾಮೃಗ ಇದೀಗ ಅಳಿವಿನಂಚಿನಲ್ಲಿದೆ. ಇದರ ಬಗ್ಗೆ ಕಾಳಜಿ ವಹಿಸದಿದ್ದರೆ ಈ ಸಂತತಿ ಮುಂದಿನ ದಿಗಳಲ್ಲಿ ಕಣ್ಮರೆಯಾಗುವುದು ಖಂಡಿತ. ಇವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸಿ ಮುಂದಡಿಯಿಡಬೇಕಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ :ಉತ್ತರ ಪ್ರದೇಶ ಚುನಾವಣೆ : ಕುಲದೀಪ್‌ ಸಿಂಗ್‌ ಸೆಂಗರ್‌‌ ಪತ್ನಿ ಅಭ್ಯರ್ಥಿತನ ರದ್ದು

ಕ್ರೀಡೆ – Udayavani – ಉದಯವಾಣಿ
Read More