ಶಿವಮೊಗ್ಗ: ಮಾರಕ ಕೊರೊನಾ ಎಂತಹ ಅಮಾನುಷ ಸ್ಥಿತಿಯನ್ನು ತಂದಿಡುತ್ತಿದೆ ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಕೊರೊನಾ ದುಃಖದ ಜೊತೆಗೆ ಅಸಹಾಯಕ ಸ್ಥಿತಿಯನ್ನೂ ನಿರ್ಮಿಸುತ್ತಿದೆ. ಈ ಸೋಂಕಿನಿಂದಾಗಿ ಅತಂತ್ರವಾದ ಕುಟುಂಬಗಳು ಸಾವಿರಾರು.

ಶಿವಮೊಗ್ಗ ಜಿಲ್ಲೆಯ ಬಸವನಗುಡಿಯಲ್ಲೂ ದಾರುಣ ಘಟನೆಯೊಂದು ನಡೆದಿದೆ. ತಾಯಿಯ ಸಾವಿನ ವಿಷಯ ತಿಳಿಸುವಷ್ಟರಲ್ಲೇ ಮಗ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಬಸವನಗುಡಿಯ ನಿವಾಸಿ ಸುರೇಶ್ ಎಂಬವರು ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕೋವಿಡ್​ನಿಂದಾಗಿ ಸಾವನ್ನಪ್ಪಿದ್ದಾರೆ.

ದುರಂತ ಎಂದರೆ ಇದಕ್ಕೂ ಐದು ಗಂಟೆ ಮೊದಲು ಸುರೇಶ್​ರವರ ತಾಯಿ ಗೌರಮ್ಮ ವಯೋಸಹಜ ಅಸ್ವಸ್ಥತೆಯಿಂದ ಸಾವನ್ನಪ್ಪಿದ್ದರು. ತಾಯಿ ತೀರಿಕೊಂಡ ವಿಷಯವನ್ನು ಸುರೇಶ್​ರವರಿಗೆ ತಿಳಿಸಲು ಸಾಧ್ಯವಾಗಿರಲಿಲ್ಲ. ಅವರಿಗೆ ತಿಳಿಸಬೇಕು ಎನ್ನುವಷ್ಟರಲ್ಲೇ ಸುರೇಶ್​ ಸಹ ಸಾವನ್ನಪ್ಪಿದ್ದಾರೆ. ಕೆಲವೇ ಗಂಟೆಯ ಅಂತರದಲ್ಲಿ ತಾಯಿ-ಮಗ ಇಬ್ಬರೂ ನಿಧನ ಹೊಂದಿರುವುದು ಸ್ಥಳೀಯರಲ್ಲಿ ದಿಗ್ಭ್ರಮೆ ಹುಟ್ಟಿಸಿದೆ.

The post ಘೋರ ಕೊರೊನಾ: ತಾಯಿ ತೀರಿಕೊಂಡ ವಿಷಯ ಗೊತ್ತಾಗುವ ಮೊದಲೇ ಮಸಣ ಸೇರಿದ ಮಗ appeared first on News First Kannada.

Source: newsfirstlive.com

Source link