ಘೋರ ಸುದ್ದಿ: ಅಕ್ರಮ ವಿದ್ಯುತ್​ಗೆ ರೈತ ಬಲಿ; ಅದಕ್ಕೆ ವಿದ್ಯುತ್ ಅಳವಡಿಸಿದ್ದ ಜಮೀನು ಮಾಲೀಕನನ್ನು ಹೊಡೆದು ಸಾಯಿಸಿದ ಸ್ಥಳೀಯರು | Illegal electrification farmer electrocuted to death farm owner killed by localities in gauribidanur taluk


ಘೋರ ಸುದ್ದಿ: ಅಕ್ರಮ ವಿದ್ಯುತ್​ಗೆ ರೈತ ಬಲಿ; ಅದಕ್ಕೆ ವಿದ್ಯುತ್ ಅಳವಡಿಸಿದ್ದ ಜಮೀನು ಮಾಲೀಕನನ್ನು ಹೊಡೆದು ಸಾಯಿಸಿದ ಸ್ಥಳೀಯರು

ಘೋರ ಸುದ್ದಿ: ಅಕ್ರಮ ವಿದ್ಯುತ್​ಗೆ ರೈತ ಬಲಿ; ಅದಕ್ಕೆ ವಿದ್ಯುತ್ ಅಳವಡಿಸಿದ್ದ ಜಮೀನು ಮಾಲೀಕನನ್ನು ಹೊಡೆದು ಸಾಯಿಸಿದ ಸ್ಥಳೀಯರು

ಚಿಕ್ಕಬಳ್ಳಾಪುರ: ಅಕ್ರಮ ವಿದ್ಯುತ್ ಬೇಲಿಗೆ ರೈತರೊಬ್ಬರು ಬಲಿಯಾಗಿರುವುದರಿಂದ ಆ ಜಮೀನು ಮಾಲೀಕನನ್ನು ಸ್ಥಳೀಯರು ಹೊಡೆದು ಸಾಯಿಸಿದ್ದಾರೆ. ಚರಕಮಟ್ಟೇನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ರೈತ ವಸಂತರಾವ್ ವಿದ್ಯುತ್ ಬೇಲಿಗೆ ಬಲಿಯಾದ ರೈತ. ವಸಂತರಾವ್ ಸಾವಿಗೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದ ಜಮೀನು ಮಾಲೀಕ ಕಾರಣ ಅನ್ನೂ ಆರೋಪ ಮಾಡಿ ಈ ಕೃತ್ಯವೆಸಗಿದ್ದಾರೆ.

ರೈತ ವಸಂತರಾವ್ ವಿದ್ಯುತ್ ತಂತಿಗೆ ಬಲಿಯಾದ ಸುದ್ದಿ ತಿಳಿದು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಆ ವೇಳೆ ಜಮೀನು ಮಾಲೀಕ ಅಶ್ವತ್ಥ ರಾವ್ ಮೇಲೆ ಮಾರಣಾಂತಿಕವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅಶ್ವತ್ಥ ರಾವ್ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಹಲ್ಲೆಗೀಡಾಗಿ ಮೃತಪಟ್ಟ ಅಶ್ವತ್ಥ ರಾವ್ ತಮ್ಮ ಟೊಮ್ಯಾಟೊ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರು ಎನ್ನಲಾಗಿದೆ. ಅಶ್ವತ್ಥ ರಾವ್ ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಚಿಕ್ಕಹನುಮೇನಹಳ್ಳಿ ನಿವಾಸಿ. ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

TV9 Kannada


Leave a Reply

Your email address will not be published. Required fields are marked *