ಕನ್ನಡದ ಱಪರ್​ ಚಂದನ್​ ಶೆಟ್ಟಿ ಇದೀಗ ಮತ್ತೊಂದು ಹಾಡಿನ ಮೂಲಕ ಅಭಿಮಾನಿಗಳ ಮನಸ್ಸಿನ ಕದ ತಟ್ಟಿದ್ದಾರೆ. ಸಲಿಗೆ ಅನ್ನೋ ಟೈಟಲ್​ನ ಈ ಹಾಡು ಇಂದು ತೆರೆ ಕಂಡಿದೆ. ಫಂಕ್​ ಜಾನರ್​ನಲ್ಲಿ ಈ ಹಾಡನ್ನ ರೆಡಿ ಮಾಡಲಾಗಿದ್ದು, ಜೋಶ್​​ ಆಗಿರುವ ಸಂಗೀತ ಕೇಳುಗರನ್ನ ಮೋಡಿ ಮಾಡ್ತಿದೆ. ಪತ್ರಕರ್ತ ನಿಖಿಲ್​ ಜೋಶಿ ಸಲಿಗೆಗೆ ಸಾಹಿತ್ಯದ ಕಂಪು ತುಂಬಿದ್ದಾರೆ. ಇಲ್ಲಿಯವರೆಗೂ ಚಂದನ್​ ಶೆಟ್ಟಿ ಮಾಡಿರುವ ಹಾಡುಗಳಲ್ಲಿ ಇದು ತುಂಬಾನೇ ಡಿಫ್ರೆಂಟ್ ಆಗಿದೆ.

ಱಪರ್​ ಚಂದನ್​ ಶೆಟ್ಟಿ ಒಬ್ಬರೇ ಈ ಬಾರಿ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಕಂಪೋಸಿಂಗ್​, ಗಾಯನ ಹಾಗೂ ಎಡಿಟಿಂಗ್ ಜವಾಬ್ದಾರಿಯನ್ನ ಸ್ವತಃ ಚಂದನ್​ ಹೊತ್ತಿದ್ದಾರೆ. ಅಂದ್ಹಾಗೇ, ಅಣ್ಣಾವ್ರ ಸಿನಿಮಾಗಳಲ್ಲಿ ಈ ಹಿಂದೆ ಬಳಸಲಾಗಿದ್ದ ಫಂಕ್​ ಜಾನರ್​​​ನ ಈ ಹಾಡಿನ ಮೂಲಕ ಟ್ರೈ ಮಾಡಿದ್ದಾರೆ ಚಂದನ್​ ಶೆಟ್ಟಿ. ಬರೋಬ್ಬರಿ 50 ವರ್ಷಗಳ ಬಳಿಕ ಫಂಕ್​​ ಜಾನರ್​ ಮತ್ತೆ ಕನ್ನಡದಲ್ಲಿ ಮರುಕಳಿಸಿದೆ.

ಕೆನಡಾ, ನಯಾಗರ ಫಾಲ್ಸ್ ಸೇರಿದಂತೆ ವಿದೇಶದ ಸುಂದರ ತಾಣಗಳಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಸುಂದರ ತಾಣಗಳ ಚಿತ್ರೀಕರಣದ ಜೊತೆಗೆ ಹಾಡಿನಲ್ಲಿ ಕ್ಯಾಮೆರಾ ವರ್ಕ್​ ಕೂಡ ಕಣ್ಮನ ಸೆಳೆಯುವಂತಿದೆ.

The post ಚಂದನ್​ ಶೆಟ್ಟಿ ಪ್ರೀತಿ ಸಲಿಗೆ; ಮೊದಲ ಬಾರಿ ಫಂಕ್​​ ಜಾನರ್​ನಲ್ಲಿ ಕನ್ನಡದ ಱಪರ್ appeared first on News First Kannada.

Source: newsfirstlive.com

Source link