ಕವಿತಾ ಗೌಡ ಅವರು ಒಂದು ತೆಲುಗು ಧಾರಾವಾಹಿಯಲ್ಲಿ ಮಾತ್ರ ನಟಿಸಿದ್ದಾರೆ. ಆ ಬಳಿಕ ಯಾವುದೇ ತೆಲುಗು ಸೀರಿಯಲ್ನಲ್ಲಿ ನಟಿಸಿಲ್ಲ. ಹೀಗೇಕೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ತೆಲುಗು ಕಿರುತೆರೆಯಲ್ಲಿ ಕನ್ನಡದ ಸಾಕಷ್ಟು ಕಲಾವಿದರು ನಟಿಸುತ್ತಿದ್ದಾರೆ. ಆ ಪೈಕಿ ಚಂದನ್ ಕುಮಾರ್ (Chandan Kumar) ಕೂಡ ಒಬ್ಬರು. ತೆಲುಗು ಕಿರುತೆರೆಯರವರು ಕನ್ನಡಿಗರನ್ನು ಸಹಿಸುತ್ತಿಲ್ಲ ಎಂಬ ಮಾತನ್ನು ಚಂದನ್ ಕುಮಾರ್ ಆಡಿದ್ದಾರೆ. ತಮ್ಮ ಮೇಲೆ ಆದ ಹಲ್ಲೆ ಉದ್ದೇಶ ಪೂರ್ವಕ ಎಂಬುದು ಅವರ ಆರೋಪ. ಇಂದು (ಆಗಸ್ಟ್ 1) ಈ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅವರ ಪತ್ನಿ ಕವಿತಾ ಗೌಡ (Kavitha Gowda) ಕೂಡ ಇದ್ದರು. ತಾವು ತೆಲುಗು ಕಿರುತೆರೆ ಲೋಕ ತೊರೆದಿದ್ದು ಏಕೆ ಎಂಬುದನ್ನು ಅವರು ವಿವರಿಸಿದ್ದಾರೆ.
ಕವಿತಾ ಗೌಡ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಬಿಸಿದರು. ಕನ್ನಡದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಅವರು ಒಂದು ತೆಲುಗು ಧಾರಾವಾಹಿಯಲ್ಲಿ ಮಾತ್ರ ನಟಿಸಿದ್ದಾರೆ. ಆ ಬಳಿಕ ಯಾವುದೇ ತೆಲುಗು ಸೀರಿಯಲ್ನಲ್ಲಿ ನಟಿಸಿಲ್ಲ. ಹೀಗೇಕೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಪತಿಗೆ ಆದ ಅನ್ಯಾಯದ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
ಪತಿ ಬಗ್ಗೆ ಆದ ಹಲ್ಲೆ ಬಗ್ಗೆ ಮಾತನಾಡಿರುವ ಕವಿತಾ ಗೌಡ, ‘ಈ ವಿಚಾರದಲ್ಲಿ ನಾನು ಮಾತ್ರ ಸುಮ್ಮನೆ ಇರುವುದಿಲ್ಲ. ನನಗೆ ಮೊದಲು ಚಂದನ್ ಘಟನೆ ಬಗ್ಗೆ ಹೇಳಿರಲಿಲ್ಲ. ಬೇರೆ ಕಡೆಯಿಂದ ಆ ಬಗ್ಗೆ ಗೊತ್ತಾಯ್ತು. ಎಲ್ಲವೂ ಮಾತಲ್ಲಿ ಇರಬೇಕು. ಅದನ್ನು ಬಿಟ್ಟು ಹಲ್ಲೆ ಹೇಗೆ ಮಾಡಿದ್ರು? ಆ ಮೂರು ಜನ ಕ್ಷಮೆ ಕೇಳಬೇಕು. ಅಲ್ಲಿದ್ದ ನಮ್ಮವರೇ ನಮಗೆ ಸಪೋರ್ಟ್ ಮಾಡಲಿಲ್ಲ ಅನ್ನೋ ಬಗ್ಗೆ ಬೇಸರ ಇದೆ’ ಎಂದಿದ್ದಾರೆ ಕವಿತಾ ಗೌಡ.